ಚಾಮರಾಜನಗರ: ಗೌಡ ಲಿಂಗಾಯತ ಸಮುದಾಯವನ್ನುಪ್ರವರ್ಗ 2ಎ ಗೆ ಸೇರಿಸುವಂತೆ ಒತ್ತಾಯಿಸಿದ ಸದ್ಯದಲ್ಲಿಯೇಸಹಸ್ರಾರು ಸಂಖ್ಯೆಯಲ್ಲಿ ಹಳೇ ಮೈಸೂರು ಭಾಗದಿಂದಬೆಂಗಳೂರಿಗೆ ನಿಯೋಗ ತೆರಳಿ ಮುಖ್ಯಮಂತ್ರಿಯಡಿಯೂರಪ್ಪ ಹಾಗೂ ಹಿಂದುಳಿದ ವರ್ಗಗಳಆಯೋಗಕ್ಕೆ ಮನವಿ ಸಲ್ಲಿಸುವುದಾಗಿ ಗೌಡ ಲಿಂಗಾಯತಹೋರಾಟ ಸಮಿತಿಯ ಅಮ್ಮನಪುರ ಮಲ್ಲೇಶ್ ತಿಳಿಸಿದರು.ನಗರದ ವರ್ತಕರ ಭವನದಲ್ಲಿ 2ಎ ಮೀಸಲಾತಿಗೆಒತ್ತಾಯಿಸಿ ಮಂಗಳವಾರ ನಡೆದ ಗೌಡ ಲಿಂಗಾಯತರಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತರ ಕರ್ನಾಟಕದಲ್ಲಿರುವ ಬಹುಸಂಖ್ಯಾತರಪಂಚಮಸಾಲಿ ಲಿಂಗಾಯತರು 2ಎ ಗೆ ಸೇರಿಸುವಂತೆಒತ್ತಾಯಿಸಿ ಬೃಹತ್ ಹೋರಾಟ ನಡೆಸಿ, ಸರ್ಕಾರದ ಗಮನಸೆಳೆದಿದ್ದಾರೆ. ಮುಖ್ಯಮಂತ್ರಿಗಳು ಸಹ ಅವರಿಗೆ ಸೂಕ್ತಭರವಸೆ ನೀಡಿದ್ದಾರೆ. ಹೀಗಾಗಿ ದಕ್ಷಿಣ ಭಾಗದಲ್ಲಿರುವಗೌಡ ಲಿಂಗಾಯತ, ವೀರಶೈವ ಲಿಂಗಾಯತ, ಒಕ್ಕಲಿಗಲಿಂಗಾಯತ, ಗೌಡ ಲಿಂಗಾಯತ ಹಾಗೂ ಒಕ್ಕಲುತನಮಾಡುವ ಎಲ್ಲಾ ಲಿಂಗಾಯತರನ್ನು 2ಎ ಮೀಸಲಾತಿಗೆಸೇರ್ಪಡೆ ಮಾಡಬೇಕೆಂಬುದು ನಮ್ಮ ಒತ್ತಾಯವಾಗಿದೆಎಂದು ಅವರು ಮನವಿ ಮಾಡಿದರು.
ಉಪ ಚುನಾವಣೆಯ ಬಳಿಕ ಮುಖ್ಯಮಂತ್ರಿಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಸಿಗಲಿದ್ದಾರೆ. ಈಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಸಿಎಂ ಬಳಿಗೆನಿಯೋಗ ತೆರೆಳಿ ಮನವಿ ಸಲ್ಲಿಸಿ, ನಮ್ಮ ಸಂಕಷ್ಟವನ್ನುಹೇಳಿಕೊಳ್ಳೋಣ. ಇದರೊಟ್ಟಿಗೆ ಹಿಂದುಳಿದ ವರ್ಗಗಳಆಯೋಗ, 2ಎ ಮೀಸಲಾತಿಗಾಗಿ ನೇಮಕ ಗೊಂಡಿರುವಆಯೋಗದವರನ್ನು ಭೇಟಿ ಯಾಗಿ ನಮ್ಮ ಮನವಿಯನ್ನುಸಲ್ಲಿಸೋಣ. ಬೆಂಗಳೂರು ಮಟ್ಟದಲ್ಲಿ ದೊಡ್ಡ ಹೋರಾಟಇದಾಗಬೇಕು ಎಂದು ಮಲ್ಲೇಶ್ ತಿಳಿಸಿದರು.
ಪಂಚಮಸಾಲಿ ಪೀಠದ ಶ್ರೀಗಳು ಹೋರಾಟದ ನೇತೃತ್ವವಹಿಸಿ, ಅಲ್ಲಿನ ಜನರಿಗೆ ಅನುಕೂಲ ಮಾಡಿಕೊಡಲುಮುಂದಾಗಿದ್ದಾರೆ. ಆದೇ ಮಾದರಿಯಲ್ಲಿ ದಕ್ಷಿಣಕರ್ನಾಟಕದಲ್ಲಿರುವ ಮಠಾಧೀಶರು ಕೂಡ ಹೋರಾಟದಲ್ಲಿಭಾಗಿಯಾಗಿ ಭಕ್ತರ ಸಂಕಷ್ಟಕ್ಕೆ ಸ್ಪಂದಿಸಬೇಕು.ಬೆಂಗಳೂರಿನಲ್ಲಿ ನೂರಾರು ಬಸ್‌ಗಳಲ್ಲಿ ತೆರಳಿ ಮನವಿಸಲ್ಲಿಸಲಾಗುತ್ತದೆ.
ಕನಿಷ್ಠ ಗ್ರಾಮಗಳಿಂದ 2 ರಿಂದ ಮೂರುಬಸ್‌ಗಳಿಂದ ಜನರು ಬರಬೇಕು ಎಂದು ಮನವಿಮಾಡಿದರು.ಸಭೆಯಲ್ಲಿ ಮುಖಂಡರಾದ ಹಂಡ್ರಕಳ್ಳಿ ರಾಮಣ್ಣ,ಕೊತ್ತಲವಾಡಿ ಕುಮಾರ್, ಮೂಡ್ಲುಪುರರಾಜಶೇಖರಮೂರ್ತಿ, ಕಾವುದವಾಡಿ ಗುರು, ಆರ್.ಎಸ್.ಲಿಂಗರಾಜು, ತಾಪಂ ಮಾಜಿ ಉಪಾಧ್ಯಕ್ಷ ಪಿ.ಎನ್.ದಯಾನಿಧಿ, ಆಲೂರು ರಮೇಶ್‌ಬಾಬು, ಬಸವನಪುರಮಹದೇವಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.