Advertisement

DELED ಪೂರಕ ಪರೀಕ್ಷಾ ವೇಳಾಪಟ್ಟಿ ಪ್ರಕಟ

11:19 PM Oct 18, 2023 | Team Udayavani |

ಬೆಂಗಳೂರು: ಡಿಪ್ಲೊಮಾ ಇನ್‌ ಎಲಿಮೆಂಟರಿ ಎಜುಕೇಷನ್‌ (ಡಿ.ಇ.ಎಲ್‌.ಇ.ಡಿ.) ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ ವಾಗಿದ್ದು, ಡಿ. 11ರಿಂದ ಪರೀಕ್ಷೆ ನಡೆಯಲಿದೆ.

Advertisement

ಡಿ. 11ರಂದು ಪ್ರಥಮ ಡಿ.ಇ.ಎಲ್‌.ಇ.ಡಿ.ಯ ಇಂಗ್ಲಿಷ್‌ ಸಂವಹನ ಕೌಶಲಗಳು, 12ರಂದು ಶಿಕ್ಷಣ: ಮೂಲ ಪರಿಕಲ್ಪನೆ ಗಳ ಪರಿಚಯ, 13ರಂದು ಪ್ರಥಮ ಭಾಷೆ, 14 ಕಲಿಕೆಯನ್ನು ಅನುಕೂಲಿಸುವುದು – ಗಣಿತ, 15 ಕಲಿಕೆಯನ್ನು ಅನುಕೂಲಿಸುವುದು – ಪರಿಸರ ಅಧ್ಯಯನ, 16 ಶೈಕ್ಷಣಿಕ ಮೌಲ್ಯಾಂಕನ ಮತ್ತು ಮೌಲ್ಯಮಾಪನ ಪರೀಕ್ಷೆ ನಡೆಯಲಿದೆ. ಪರೀಕ್ಷೆಗಳು ಬೆಳಗ್ಗೆ 10ಕ್ಕೆ ಪ್ರಾರಂಭಗೊಳ್ಳಲಿದೆ.

ಎರಡನೇ ಡಿ.ಇ.ಎಲ್‌.ಇ.ಡಿ.ಯ ಪ್ರಥಮ ಭಾಷೆಯ ಪರೀಕ್ಷೆ ಡಿ.11 ರಿಂದ 14ರ ವರೆಗೆ ನಡೆಯಲಿದೆ. ಪರೀಕ್ಷೆಗಳು ಮಧ್ಯಾಹ್ನ 2ರಿಂದ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next