Advertisement

ಪುರಸಭೆಯಲ್ಲಿ ಜನರ ಕೆಲಸ ವಿಳಂಬ

09:42 PM Aug 26, 2019 | Team Udayavani |

ತಿ.ನರಸೀಪುರ: ಪುರಸಭೆಯಲ್ಲಿ ಜನಸಾಮಾನ್ಯರ ಕೆಲಸವನ್ನು ಸರಳೀಕರಣಗೊಳಿಸಿ, ಸಕಾಲದಲ್ಲಿ ಮಾಡಿಕೊಡಬೇಕು. ಅರ್ಹ ಫ‌ಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕು ಎಂದು ಶಾಸಕ ಎಂ.ಅಶ್ವಿ‌ನ್‌ ಕುಮಾರ್‌ ತಾಕೀತು ಮಾಡಿದರು.

Advertisement

ಪಟ್ಟಣದ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ತರಬೇತಿ ಭವನದ ಆವರಣದಲ್ಲಿ ಸೋಮವಾರ ಪುರಸಭೆಯ ಶೇ.7.25ರ ಅನುದಾನದಡಿ ಹಿಂದುಳಿದ ವರ್ಗಗಳ ಮೆಟ್ರಿಕ್‌ ನಂತರದ ಬಾಲಕಿಯರ ಮತ್ತು ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಹಾಸಿಗೆ ದಿಂಬುಗಳು, ಶೆ.24.10ರ ಅನುದಾನದಡಿ ಪರಿಶಿಷ್ಟ ಜಾತಿ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ರೀಡಿಂಗ್‌ ಟೇಬಲ್‌ ಮತ್ತು ಚೇರುಗಳು ಹಾಗೂ ಶೇ.5ರ ಅನುದಾನದಡಿ ವಿಶೇಷ ಚೇತನರಿಗೆ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಿ ಅವರು ಮಾತನಾಡಿದರು.

ಪುರಸಭೆಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ವಿಳಂಬವಾಗುತ್ತಿರುವ ಬಗ್ಗೆ ವ್ಯಾಪಕವಾಗಿ ದೂರುಗಳು ಕೇಳಿಬರುತ್ತಿವೆ. ವ್ಯವಸ್ಥೆಯನ್ನು ಸರಳೀಕರಣಗೊಳಿಸಿ ಸಕಾಲದಲ್ಲಿ ಜನರ ಕೆಲಸ ಮಾಡಿಕೊಡಬೇಕು. ಸರ್ಕಾರದ‌ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಸೂಚನೆ ನೀಡಿದರು.

ಪ್ರವಾಹದಿಂದಲೂ ಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಯಾವುದೇ ತಾರತಮ್ಯ ಮಾಡದೇ ಸಕಾಲದಲ್ಲಿ ನೆರವು ನೀಡಬೇಕು ಎಂದ ಅವರು, ವರುಣಾ ಶಾಸಕ ಡಾ.ಎಸ್‌.ಯತೀಂದ್ರ ಅವರ ಜೊತೆಗೂಡಿ ಸೌಲಭ್ಯಗಳನ್ನು ವಿತರಿಸುವ‌ ಉದ್ದೇಶವಿತ್ತಾದರೂ ಸಮಯದ ಕೊರತೆಯಿಂದಾಗಿ ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ಫ‌ಲಾನುಭವಿಗಳಿಗೆ ವಿತರಿಸುತ್ತಿದ್ದೇವೆ ಎಂದು ತಿಳಿಸಿದರು.

ಈ ವೇಳೆ ಜಿಪಂ ಮಾಜಿ ಉಪಾಧ್ಯಕ್ಷ ಕೈಯಂಬಳ್ಳಿ ಜಿ.ನಟರಾಜು, ಪುರಸಭೆ ಸದಸ್ಯರಾದ ಟಿ.ಎಂ.ನಂಜುಂಡಸ್ವಾಮಿ, ಎನ್‌.ಸೋಮು, ಎಸ್‌.ಕೆ.ಕಿರಣ, ವಿ.ಮೋಹನ್‌, ಎಸ್‌.ಮದನ್‌ ರಾಜ್‌, ತುಂಬಲ ಸಿ.ಪ್ರಕಾಶ್‌, ಎಲ್‌.ಮಂಜುನಾಥ್‌, ಸಿದ್ದು, ಮಾವಿನಹಳ್ಳಿ ರಾಜೇಶ, ಎಸ್‌.ಮಾದಯ್ಯ, ಬೂದಹಳ್ಳಿ ಸಿದ್ದರಾಜು, ಶಿವಶಂಕರ್‌ ಇತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next