Advertisement

ವಿವಿಧ ರೈಲುಗಳ ವಿಳಂಬ ಸಂಚಾರ

11:29 PM May 06, 2019 | Team Udayavani |

ಹುಬ್ಬಳ್ಳಿ: ಲೈನ್‌ ಬ್ಲಾಕ್‌ ಕಾರಣದಿಂದ ಕೆಲವು ರೈಲುಗಳು ವಿಳಂಬವಾಗಿ ಸಂಚರಿಸಲಿವೆ. ಜೂನ್‌ 8ರಿಂದ 25ರವರೆಗೆ ಕಣ್ಣೂರ-ಬೆಂಗಳೂರು ನಗರ ಎಕ್ಸ್‌ಪ್ರೆಸ್‌ (16518) ರೈಲು ಮಂಡಗೆರೆ ಹಾಗೂ ಹೊಳೆನರಸಿಪುರ ನಿಲ್ದಾಣಗಳ ಮಧ್ಯೆ 15 ನಿಮಿಷ ನಿಲುಗಡೆಗೊಳ್ಳುವುದು.

Advertisement

ಜೂನ್‌ 26ರಿಂದ ಜುಲೈ 4ರವರೆಗೆ ಮೈಸೂರು-ತಾಳಗುಪ್ಪ (56276) ಪ್ಯಾಸೆಂಜರ್‌ ರೈಲು ಹೊಳೆನರಸಿಪುರ ಹಾಗೂ ಮಾವಿನಕೆರೆ ಮಧ್ಯೆ 70 ನಿಮಿಷ ನಿಲುಗಡೆಯಾಗಲಿದೆ.

ಜೂನ್‌ 26ರಿಂದ ಜುಲೈ 4ರವರೆಗೆ ಯಶವಂತಪುರ-ಮೈಸೂರು ಪ್ಯಾಸೆಂಜರ್‌ (56215) ರೈಲು ಹೊಳೆನರಸಿಪುರ ಹಾಗೂ ಮಾವಿನಕೆರೆ ಮಧ್ಯೆ 30 ನಿಮಿಷ ನಿಲುಗಡೆಗೊಳ್ಳುವುದು.

ಜುಲೈ 5ರಿಂದ ಜುಲೈ23ರವರೆಗೆ ಮೈಸೂರು-ತಾಳಗುಪ್ಪ (56276) ಪ್ಯಾಸೆಂಜರ್‌ ರೈಲು ಮಾವಿನಕೆರೆ-ಹಾಸನ ಮಧ್ಯೆ 45 ನಿಮಿಷ ನಿಲುಗಡೆಗೊಳ್ಳುವುದು. ಅದೇ ರೀತಿ ಜುಲೈ 5ರಿಂದ ಜುಲೈ 23ರವರೆಗೆ ಯಶವಂತಪುರ-ಮೈಸೂರು (56215) ಪ್ಯಾಸೆಂಜರ್‌ ರೈಲು ಮಾವಿನಕೆರೆ-ಹಾಸನ ಮಧ್ಯೆ 45 ನಿಮಿಷ ನಿಲುಗಡೆಗೊಳ್ಳಲಿದೆ.

ಎಲ್‌ಎಚ್‌ಬಿ ಅಳವಡಿಕೆ: ಬೆಂಗಳೂರು ನಗರ-ಹಜೂರ್‌ ಸಾಹಿಬ್‌ ನಾಂದೇಡ ಎಕ್ಸ್‌ಪ್ರೆಸ್‌ (16593/16594) ಎಕ್ಸ್‌ಪ್ರೆಸ್‌ ರೈಲಿನ ಮೂರು ರೇಕ್‌ಗಳಲ್ಲಿ 1ರೇಕ್‌ಗೆ ಸಾಂಪ್ರದಾಯಿಕ ಕೋಚ್‌ಗಳ ಬದಲಾಗಿ ಲಿಂಕ್‌ ಹಾಫ್‌ಮನ್‌ ಬುಷ್‌ (ಎಲ್‌ಎಚ್‌ಬಿ) ರೇಕ್‌ ಅಳವಡಿಸಲಾಗುವುದು.

Advertisement

ಬೆಂಗಳೂರಿನಿಂದ ಮೇ 7, 10, 13, 16, 19, 22, 25, 28, 31, ಜೂನ್‌3, 6, 9, 12, 15, 18, 21,24 ಹಾಗೂ ಜೂನ್‌ 27ರಂದು; ಹಜೂರ್‌ ಸಾಹಿಬ್‌ ನಾಂದೇಡದಿಂದ ಮೇ 9, 12, 15, 18, 21, 24, 27, 30, ಜುಲೈ 2, 5, 8, 11, 14, 17, 20, 23, 26 ಹಾಗೂ ಜುಲೈ 29ರಂದು ರೇಕ್‌ ಅಳವಡಿಸಲಾಗುವುದು.

ದರ್ಭಾಂಗ-ಮೈಸೂರು (12577/12578) ಬಾಗ¾ತಿ ವೀಕ್ಲಿ ಎಕ್ಸ್‌ಪ್ರೆಸ್‌ ರೈಲಿಗೆ ದರ್ಭಾಂಗದಿಂದ ಸೆಪ್ಟೆಂಬರ್‌ 3ರಿಂದ ಹಾಗೂ ಮೈಸೂರಿನಿಂದ ಸೆಪ್ಟೆಂಬರ್‌ 7ರಿಂದ ಎಲ್‌ಎಚ್‌ಬಿ ರೇಕ್‌ ಜೋಡಿಸಲಾಗುವುದು.

ರೈಲು ಸೇವೆ ರದ್ದು: ರೇಕ್‌ ಕಾರಣದಿಂದ ಮೇ 7ರಂದು ಹೌರಾದಿಂದ ಹೊರಡುವ ಹೌರಾ-ಯಶವಂತಪುರ (22887) ಹಮ್‌ಸಫರ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರ ರದ್ದುಪಡಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next