Advertisement
ವರ್ಕ್‌ಸಾಫ್ಟ್ ತಂತ್ರಾಂಶ: ಅಧಿಕಾರಿ, ಇಂಜಿನಿಯರ್‌ಗಳು ನಿಗದಿತ ಅವಧಿಯೊಳಗೆ ಕಾಮಗಾರಿ ಕೈಗೆತ್ತಿಕೊಂಡು ಪೂರ್ಣಗೊಳಿಸುತ್ತಿಲ್ಲ. ಕಾಮಗಾರಿಪೂರ್ಣಗೊಳಿಸದಿರುವುದರಿಂದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಪಿಡಿ ಖಾತೆಯಲ್ಲಿ ಒಟ್ಟು 946 ಕೋಟಿ ರೂ. ಖರ್ಚಾಗದೆ ಬಾಕಿ ಉಳಿದಿದೆ. ಸದರಿ ಕಾಮಗಾರಿಗಳ ಪ್ರಗತಿ ಮೇಲೆ ಕಣ್ಣಿಡಲು ವರ್ಕ್ ಸಾಫ್ಟ್ ಎಂಬ ತಂತ್ರಾಂಶ ಹೊಸದಾಗಿ ಸೃಜಿಸ ಲಾಗಿದ್ದು, ಶಾಸಕರ ನಿಧಿ ಯಡಿ ಕೈಗೊಳ್ಳಲಾಗುವ ಕಾಮಗಾರಿಗಳ ಪ್ರಗತಿ ಅಪ್‌ಲೋಡ್ ಮಾಡಬೇಕು ಎಂದು ಸೂಚಿಸಿದರು.
Related Articles
Advertisement
ಕಾಮಗಾರಿಗಳಿಗೆ ಅನುಮೋದನೆ: ಜಿಲ್ಲಾಧಿ ಕಾರಿ ಡಾ.ಕೆ..ರಾಕೇಶ್‌ಕುಮಾರ್ ಮಾತನಾಡಿ, ಕೆಲ್ಯಾಡ್ಸ್ ಸಾಮಾನ್ಯ ಕೋಟಾದಡಿ 446 ಕಾಮ ಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸ ಲಾಗಿದ್ದು, 347 ಕಾಮಗಾರಿಗಳಿಗೆ ಅನು ಮೋದನೆ ನೀಡಲಾಗಿದೆ. 2009ರಿಂದ 2019 ರವರೆಗೆ ಬಾಕಿಯಿರುವ 550 ಕಾಮಗಾರಿ ಕೈಗೊಳ್ಳಲು 1723.22ಲಕ್ಷ ರೂ. ಅಂದಾಜುಪಟ್ಟಿ ತಯಾರಿಸಲಾಗಿದ್ದು, ಈಗಾಗಲೇ 327.06ಲಕ್ಷ ರೂ. ಕಾಮಗಾರಿ ಕೈಗೊಳ್ಳುವ ಅನುಷ್ಟಾನ ಏಜೆನ್ಸಿ ಗಳಿಗೆ ಪಾವತಿಸಲಾಗಿದೆ. ಉಳಿದಂತೆ 1396.18 ಲಕ್ಷ ರೂ.ಗಳ ಪಾವತಿ ಮಾಡ ಬೇಕಾಗಿದೆ. ಅಲ್ಲದೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿರುವ ಒಟ್ಟು 448 ಕಾಮಗಾರಿಗಳಿಗೆ 1078.57 ಲಕ್ಷ ರೂ.ಗಳ ಅಂದಾಜು ಪಟ್ಟಿ ತಯಾರಿಸಿದ್ದು, ಈವರೆಗೆ 6ಲಕ್ಷ ರೂ.ಗಳನ್ನು ಪಾವತಿಸಲಾಗಿದೆ. ಉಳಿದಂತೆ 1072.57ಲಕ್ಷ ರೂ. ಪಾವತಿ ಮಾಡಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲೆಗೆ 2008ರಿಂದ 2019ರ ಆರ್ಥಿಕ ವರ್ಷದ ಅಂತ್ಯದವರೆಗೆ ಒಟ್ಟು 7788 ಕಾಮ ಗಾರಿಗಳಿಗೆ ಮಂಜೂರಾತಿ ದೊರೆತಿದೆ. ಇದರಲ್ಲಿ 6145 ಕಾಮಗಾರಿ ಪೂರ್ಣಗೊಳಿಸಲಾಗಿದೆ ಹಾಗೂ 1105 ಕಾಮಗಾರಿಗಳು ಪ್ರಗತಿ ಹಂತ ದಲ್ಲಿದ್ದು, 538 ಕಾಮಗಾರಿ ಕೈಗೆತ್ತಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಶಿಸ್ತು ಕ್ರಮ ಎಚ್ಚರಿಕೆ: ಕಾಮಗಾರಿ ಪ್ರಗತಿ ಸಾಧಿಸದೆ ಉದಾಸೀನ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ನಿರ್ದಿಷ್ಟ ಪ್ರಗತಿ ಸಾಧಿಸಲು ಸಕಾಲ ಮಾದರಿ ಅನುಸರಿಸಬೇಕು. ಇಂಜಿನಿಯರ್‌ಗಳು ಕೇಂದ್ರ ಸ್ಥಾನದಲ್ಲಿದ್ದು, ಕಾಮಗಾರಿ ಪೂರ್ಣಗೊಳಿಸ ಬೇಕು. ಹೊಣೆಗಾರಿಕೆ ಅರ್ಥ ಮಾಡಿಕೊಳ್ಳಬೇಕು. ವರ್ಕ್‌ಸಾಫ್ಟ್ ಅಂಕಿ-ಅಂಶಗಳನ್ನು ಸಕಾಲ ಪದ್ಧತಿಗೆ ಅಳವಡಿಸಿದಾಗಲೇ ಪ್ರಗತಿ ಕುಂಠಿತ ವಾಗಿರುವ ಬಗ್ಗೆ ಮಾಹಿತಿ ದೊರೆಯುತ್ತದೆ. ಇದರಿಂದ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಡಾ.ಶಾಲಿನಿ ರಜನೀಶ್ ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ಇರುವ 106 ಗ್ರಾಮಗಳಲ್ಲಿ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಕೊಳವೆಬಾವಿಗಳ ಮರುಪೂರಣ ಕೆಲಸ ಕೈಗೊಳ್ಳಲಾಗಿದೆಯೇ ಎಂದು ಸಭೆಗೆ ಮಾಹಿತಿ ಕೇಳಿದಾಗ ಜಿಲ್ಲಾಧಿಕಾರಿ ಮಾತನಾಡಿ, ಮಧುಗಿರಿಯಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆಗೆ ಕ್ರಮ ಕೈಗೊಂಡು ಯಶಸ್ವಿಯಾಗಿ ದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೂ ಈ ಪದ್ಧತಿ ಅಳವಡಿಕೆಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಶಾಸಕರ ನಿಧಿಯಡಿ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಮಣ್ಣು ಪರೀಕ್ಷೆ, ನೀರಿನ ಗುಣ ಮಟ್ಟ ಪರೀಕ್ಷೆ ಕೈಗೊಳ್ಳಲು ಎಲ್ಲಾ ಇಲಾಖೆಗಳ ಕಾರ್ಯಪಾಲಕ ಇಂಜಿನಿಯರ್‌ಗಳ ಕಚೇರಿ ಯಲ್ಲಿ ಪ್ರಯೋಗಾಲಯ ಸ್ಥಾಪಿಸ ಬೇಕೆಂದು ನಿರ್ದೇಶನ ನೀಡಿದರು. ಜಿಪಂ ಸಿಇಒ ಶುಭಾಕಲ್ಯಾಣ್, ಯೋಜನಾ ಅನುಷ್ಠಾನಾಧಿ ಕಾರಿಗಳು, ಮತ್ತಿತರರು ಇದ್ದರು.