Advertisement

ಕೋವಿಡ್-19 ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ವಿಳಂಬ; ಪ್ರತಿಭಟನೆ

12:21 AM Jun 09, 2020 | Sriram |

ಉಪ್ಪುಂದ: ಕೋವಿಡ್-19 ತಪಾಸಣೆಯಲ್ಲಿ ಸೋಂಕು ದೃಢ ಪಟ್ಟಿದೆ ಎಂದು ಹೇಳಿ, ಮನೆಗಳನ್ನು ಸೀಲ್‌ಡೌನ್‌ ಮಾಡಿದ ಬಳಿಕ ನಾಲ್ಕು ದಿನ ಕಳೆದರೂ ಅಂಥವರನ್ನು ಆಸ್ಪತ್ರೆಗೆ ಸಾಗಿಸದೆ ಸತಾಯಿಸಿದ ಕ್ರಮದಿಂದ ಆಕ್ರೋಶಗೊಂಡ ಮರವಂತೆಯ ಕೆಲವರು ಆ್ಯಂಬುಲೆನ್ಸ್‌ ಮತ್ತು ಆರೋಗ್ಯ ಸಿಬಂದಿ ವಿರುದ್ಧ ಪ್ರತಿಭಟಿಸಿದ ಘಟನೆ ನಡೆದಿದೆ.

Advertisement

ಮುಂಬಯಿಯಿಂದ ಬಂದಿದ್ದ ಅಲ್ಲಿನ ಇಬ್ಬರು ಮಹಿಳೆಯರು ಮತ್ತು ಆರು ಮಂದಿ ಪುರುಷರು ಕೊಲ್ಲೂರಿನಲ್ಲಿ 14 ದಿನಗಳ ಕ್ವಾರಂಟೈನ್‌ ಅವಧಿ ಮುಗಿಸಿ ಊರಿಗೆ ಬಂದಿದ್ದರು. ನಾಲ್ಕು ದಿನಗಳ ಹಿಂದೆ ಅವರಿಗೆ ಸೋಂಕು ದೃಢಪಟ್ಟಿದೆ ಎಂದು ದೂರವಾಣಿ ಕರೆ ಬಂದಿತ್ತು.

ದೂರವಾಣಿ ಕರೆ ಬಂದ ಕೂಡಲೇ ಸ್ಥಳೀಯಾಡಳಿತ ಅವರ ಮನೆಗಳನ್ನು ಸೀಲ್‌ಡೌನ್‌ ಮಾಡಿತ್ತು.

ಆದರೆ ಇವರನ್ನು ಕರೆದೊಯ್ಯಲು ಎರಡು ದಿನಗಳಾದರೂ ಆ್ಯಂಬುಲೆನ್ಸ್‌ ಬಂದಿರಲಿಲ್ಲ. ಇದು ಸ್ಥಳೀಯರು ಆಕ್ರೋಶಿತರಾಗುವಂತೆ ಮಾಡಿತ್ತು.

ಶನಿವಾರ ಸಂಜೆ ಅವರನ್ನೆಲ್ಲ ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರಹೇಳಲಾಯಿತು. ಮೊದಲೇ ಕೋವಿಡ್-19 ಪಾಸಿಟಿವ್‌ ಬಂದ ಸುದ್ದಿಯಿಂದ ಕಂಗಾಲಾಗಿದ್ದ ಅವರು ಸಿಬಂದಿಯನ್ನು ತರಾಟೆಗೆ ತೆಗೆದುಕೊಂಡರು.

Advertisement

ಅಂತಿಮವಾಗಿ ಪೊಲೀಸರು, ಗ್ರಾ.ಪಂ. ಉಪಾಧ್ಯಕ್ಷ ಗಣೇಶ ಪೂಜಾರಿ, ಗ್ರಾಮ ಲೆಕ್ಕಾಧಿಕಾರಿ ದಿನೇಶ ಸೇರಿ ಎಲ್ಲರನ್ನೂ ಮನವೊಲಿಸಿದ ಬಳಿಕ ಆ್ಯಂಬುಲೆನ್ಸ್‌ ಹತ್ತಿದರು.ಇದೇ ಸನ್ನಿವೇಶ ಬೈಂದೂರು ತಾಲೂಕಿನ ಹಲವೆಡೆ ನಡೆದಿದೆ. ಇದಕ್ಕೆ ಕಾರಣ ವರದಿ ಬರುವ ಮೊದಲೇ ಕ್ವಾರಂಟೈನ್‌ನಲ್ಲಿದ್ದವರನ್ನು ಮನೆಗೆ ಕಳುಹಿಸಿರುವುದು, ತಾಲೂಕಿನಲ್ಲಿ ಒಮ್ಮೆಲೇ ನೂರಾರು ಸಂಖ್ಯೆಯಲ್ಲಿ ಸೋಂಕು ದೃಢಪಟ್ಟಿರುವುದು ಇಲಾಖೆಗಳ ನಡುವೆ ಸಮನ್ವಯ ಇಲ್ಲದಿರುವುದು ಕಾರಣವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next