Advertisement

ಹತ್ತಿ ಖರೀದಿಗೆ ವಿಳಂಬ: ಅಧಿಕಾರಿಗಳನ್ನುಕಚೇರಿಯಲ್ಲಿಯೇ ಕೂಡಿಹಾಕಿ ಪ್ರತಿಭಟನೆ

10:16 PM Dec 16, 2020 | mahesh |

ಹುಬ್ಬಳ್ಳಿ: ರೈತರ ಹತ್ತಿ ಖರೀದಿಗೆ ಅಧಿಕಾರಿಗಳ ವಿಳಂಬದಿಂದ ಬೇಸತ್ತ ರೈತರು, ತಾರಿಹಾಳ ಕೈಗಾರಿಕಾ ವಲಯದಲ್ಲಿನ ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಅಧಿಕಾರಿಗಳನ್ನು ಕೂಡಿಹಾಕಿ, ಕಚೇರಿಗೆ ಬೀಗ ಹಾಕಿದ್ದಾರೆ. ಅಧಿಕಾರಿಗಳ ವರ್ತನೆಯಿಂದ ಆಕ್ರೋಶಗೊಂಡ 30ಕ್ಕೂ ಹೆಚ್ಚು ರೈತರು ಬುಧವಾರ ಸಂಜೆ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸುತ್ತಿದ್ದಾರೆ.

Advertisement

ನವಲಗುಂದ ಹಾಗೂ ಕುಂದಗೋಳದಿಂದ ಟ್ರ್ಯಾಕ್ಟರ್ ನಲ್ಲಿ ಹತ್ತಿ ತುಂಬಿಕೊಂಡು ಬಂದಿರುವ ರೈತರು, ಅಧಿಕಾರಿಗಳು ಬೆಂಬಲ ಬೆಲೆಗೆ ಹತ್ತಿ ಖರೀದಿಸುತ್ತಾರೆಂದು ಮಂಗಳವಾರ ರಾತ್ರಿಯಿಂದಲೇ ಖರೀದಿ ಕೇಂದ್ರ ಎದುರು ಕಾಯುತ್ತಿದ್ದರು. ಆದರೆ, ಬುಧವಾರ ಸಂಜೆ ಖರೀದಿ ಮಾಡುವುದಿಲ್ಲವೆಂದು ಅಧಿಕಾರಿಗಳು ಹೇಳಿದ್ದರಿಂದ ರೊಚ್ಚಿಗೆದ್ದು ಅಧಿಕಾರಿಗಳನ್ನು ಸಂಜೆ 6:30 ಗಂಟೆಯಿಂದ ಕಚೇರಿಯಲ್ಲಿ ಕೂಡಿಹಾಕಿ ಬೀಗ ಜಡಿದು, ಖರೀದಿಸುವವರೆಗೂ ಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.

ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಧಾವಿಸಿದ್ದಾರೆ. ರಾತ್ರಿ10:00ಗಂಟೆ ವರೆಗೂ ಪ್ರತಿಭಟನೆ ಮುಂದುವರೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next