Advertisement

ರಾಜ್ಯದ ಪಾಲು ವಿಳಂಬದಿಂದ ಆರ್ಥಿಕ ಬಿಕ್ಕಟ್ಟು : ಅಜಿತ್‌

05:33 PM Aug 30, 2020 | Suhan S |

ಮುಂಬಯಿ, ಆ. 29: ಕೇಂದ್ರ ಸರಕಾರದ ಜಿಎಸ್‌ಟಿ ಪರಿಹಾರವನ್ನು ಸಮಯಕ್ಕೆ ಸರಿಯಾಗಿ ಪಡೆಯದ ಕಾರಣ ಎಲ್ಲ ರಾಜ್ಯಗಳು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಆಪಾದಿಸಿದ್ದಾರೆ.

Advertisement

ವೀಡಿಯೋ ಕಾನ್ಫೆನ್ಸಿಂಗ್‌ ಮೂಲಕ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಭಾಗವಹಿಸಿದ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌, ಇದು ಅಭಿವೃದ್ಧಿ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತಿದೆ. ದೇಶದ ಬಹುತೇಕ ಎಲ್ಲ ರಾಜ್ಯಗಳು ಪ್ರಸ್ತುತ ಕೋವಿಡ್ ಬಿಕ್ಕಟ್ಟಿನೊಂದಿಗೆ ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಕೇಂದ್ರದಿಂದ ಹೆಚ್ಚಿನ ಹಣದ ಅಗತ್ಯವಿದೆ. ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವನ್ನು ಸಮಯಕ್ಕೆ ಪಾವತಿಸುವ ಜವಾಬ್ದಾರಿಯನ್ನು ಕೇಂದ್ರ ವಹಿಸಿಕೊಂಡಿದೆ. ರಾಜ್ಯಗಳಿಗಿಂತ ಕಡಿಮೆ ದರದಲ್ಲಿ ಸಾಲ ಪಡೆಯಬಹುದಾದ  ತೆಗೆದುಕೊಳ್ಳಬೇಕು ಎಂದು ಪವಾರ್‌ ಸಲಹೆ ನೀಡಿದರು.

ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳನ್ನು ಸಮರ್ಥಿಸಿಕೊಂಡಿರುವ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು, ಆರ್ಥಿಕ ಅಡಚಣೆಯಿಂದಾಗಿ ರಾಜ್ಯಗಳು ಸಾಲ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು. ಕೇಂದ್ರ ಸರಕಾರವು ಕಡಿಮೆ ಬಡ್ಡಿಗೆ ಸಾಲ ಪಡೆಯಬಹುದು. ರಾಜ್ಯಗಳು ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆದರೆ, ಅದು ಅನಗತ್ಯವಾಗಿ ಸೆಸ್‌ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಂತಿಮ ಹೊರೆ ಗ್ರಾಹಕರ ಮೇಲೆ ಬೀಳುತ್ತದೆ. ರಾಜ್ಯಗಳು ಮುಕ್ತ ಮಾರುಕಟ್ಟೆಯಿಂದ ಸಾಲ ಪಡೆಯಲು ಪ್ರಯತ್ನಿಸಿದರೆ, ಬಡ್ಡಿದರಗಳು ಹೆಚ್ಚಾಗುತ್ತವೆ ಮತ್ತು ಸಾಲ ಪಡೆಯುವುದು ಕಷ್ಟವಾಗುತ್ತದೆ ಎಂಬ ಆತಂಕಗಳಿವೆ ಎಂಬ ಅಂಶಕ್ಕೆ ಅವರು ಎಲ್ಲರ ಗಮನ ಸೆಳೆದರು.

ಜಿಎಸ್‌ಟಿ ನಷ್ಟವನ್ನು ಸರಿದೂಗಿಸಲು ರಾಜ್ಯಗಳಿಗೆ ವಿಧಿ ಸುವ ಸೆಸ್‌ ಐದು ವರ್ಷಗಳವರೆಗೆ ಮಾನ್ಯವಾಗಿರುತ್ತದೆ ಎಂದು ಅಜಿತ್‌ ಪವಾರ್‌ ಜಿಎಸ್‌ಟಿ ಕೌನ್ಸಿಲ್‌ಗೆ ಸೂಚಿಸಿ, 2022ರ ವರೆಗೆ ಮಾತ್ರ ಈ ಕಾಲಮಿತಿಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು. ರಾಜ್ಯಗಳಿಂದ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಲು, ಕೇಂದ್ರದಿಂದ ಸಾಲವನ್ನು ತೆಗೆದುಕೊಳ್ಳಬೇಕು ಮತ್ತು ರಾಜ್ಯಗಳು ಮೊತ್ತವನ್ನು ಮರುಪಾವತಿಸಬೇಕು. ಸೆಸ್‌ ಅವಧಿ ಯನ್ನು ಹೆಚ್ಚಿಸುವ ಮೂಲಕ ಮತ್ತು ಸೆಸ್‌ ಅವಧಿಯನ್ನು ಪೂರ್ಣವಾಗಿ ಮರುಪಡೆಯುವ ಮೂಲಕ ರಾಜ್ಯಗಳಿಗೆ ನೀಡಲಾದ ಮೊತ್ತವನ್ನು ಮರುಪಡೆಯಬೇಕು ಎಂದು ಅಜಿತ್‌ ಪವಾರ್‌ ಒತ್ತಿ ಹೇಳಿದರು.

ಸರಿಯಾದ ಸಮಯಕ್ಕೆ ಪಾವತಿಸಿ :  ದೇಶದ ಅತ್ಯಂತ ಮುಂದುವರಿದ ಮತ್ತು ಪ್ರಮುಖ ರಾಜ್ಯವಾದ ಮಹಾರಾಷ್ಟ್ರದ ಹಿನ್ನೆಲೆಯಲ್ಲಿ, ಕೋವಿಡ್‌ನಿಂದ ಉಂಟಾದ ಆರ್ಥಿಕ ಬಿಕ್ಕಟ್ಟು ಅಭೂತಪೂರ್ವವಾಗಿದೆ. ಈ ಬಿಕ್ಕಟ್ಟನ್ನು ನಿವಾರಿಸಲು ನಾವು ದೃಢ ನಿಶ್ಚಯವನ್ನು ಹೊಂದಿದ್ದು, ಅದಕ್ಕಾಗಿ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಪವಾರ್‌ ಹೇಳಿದರು. ಆದರೆ ಕೇಂದ್ರ ಸರಕಾರ ಕೂಡ ತನ್ನ ಜವಾಬ್ದಾರಿಯನ್ನು ಪೂರೈಸಬೇಕು. ಜಿಎಸ್‌ಟಿ ರಾಜ್ಯಗಳ ಮುಖ್ಯ ಆದಾಯದ ಮೂಲವಾಗಿರುವುದರಿಂದ ಈ ಮೊತ್ತವನ್ನು ಸಮಯಕ್ಕೆ ಸರಿಯಾಗಿ ರಾಜ್ಯಗಳಿಗೆ ಪಾವತಿಸುವಂತೆ ಕೇಂದ್ರ ಸರಕಾರವನ್ನು ಕೋರಿದರು. ಹಿರಿಯ ಸಹೋದರನ ಪಾತ್ರವನ್ನು ನಿರ್ವಹಿಸುವ ಮೂಲಕ ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳನ್ನು ಆರ್ಥಿಕ ಬಿಕ್ಕಟ್ಟಿನಿಂದ ಹೊರಹಾಕುವುದು ಕೇಂದ್ರದ ಜವಾಬ್ದಾರಿ ಮತ್ತು ಕರ್ತವ್ಯ ಎಂದು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next