Advertisement

ರಾಹುಲ್‌ ಗಾಂಧಿಗೆ ಆಸ್ತಿ ದಾನ ಮಾಡಿದ ಅಜ್ಜಿ

12:40 AM Apr 05, 2022 | Team Udayavani |

ಡೆಹ್ರಾಡೂನ್‌: ಇಲ್ಲಿನ ಸ್ಥಳೀಯ ನಿವಾಸಿಯಾದ ಪುಷ್ಪಾ ಮುಂಜಿಯಾಲ್‌ (78) ಎಂಬುವರು ತಮ್ಮ ಹೆಸರಿನಲ್ಲಿದ್ದ 50 ಲಕ್ಷ ರೂ. ಮೌಲ್ಯದ ಭೂಮಿಯನ್ನು ಹಾಗೂ 10 ತೊಲ ಚಿನ್ನದ ಆಭರಣಗಳನ್ನು ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿಯವರ ಹೆಸರಿಗೆ ಬರೆದಿದ್ದಾರೆ.

Advertisement

ಈ ಕುರಿತ ದಾಖಲೆ ಪತ್ರಗಳನ್ನು ಅವರು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲ ಅವರಿಗೆ ಹಸ್ತಾಂತರಿಸಿದ್ದಾರೆ. ಈ ಕುರಿತಂತೆ ನ್ಯಾಯಾಲಯದಲ್ಲಿ ಅಫಿಡವಿಟ್‌ ಕೂಡ ಸಲ್ಲಿಸಿರುವ ಅವರು, ರಾಹುಲ್‌ ಗಾಂಧಿಯವರ ಆಲೋಚನೆಗಳು ನಾನು ಪ್ರಭಾವಿತಳಾಗಿದ್ದು, ಅದೇ ಕಾರಣಕ್ಕಾಗಿಯೇ ತಮ್ಮ ಆಸ್ತಿಯನ್ನು ರಾಹುಲ್‌ ಅವರಿಗೆ ಸ್ವಇಚ್ಛೆಯಿಂದ ದಾನ ಮಾಡಿದ್ದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ದೇಶಾದ್ಯಂತ ಅಂಗನವಾಡಿ ಅಭಿವೃದ್ಧಿಗೆ ಕ್ರಮ: ಸಚಿವೆ ಸ್ಮತಿ ಇರಾನಿ

Advertisement

Udayavani is now on Telegram. Click here to join our channel and stay updated with the latest news.

Next