Advertisement

ಪದವಿ ಫಲಿತಾಂಶ ಗೊಂದಲ; ಅಗತ್ಯವಿದ್ದರೆ ದಾಖಲಾತಿ ಮುಂದೂಡಿಕೆ

01:03 AM Nov 19, 2020 | mahesh |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಫಲಿತಾಂಶ ಪ್ರಕಟನೆಯಲ್ಲಿ ಉಂಟಾಗಿರುವ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಿದ್ದಾರೆ. ಕೆಲವರಿಗಷ್ಟೇ ಫಲಿತಾಂಶ ನೋಡಲು ಸಾಧ್ಯವಾಗಿದೆ. ಅಂತಿಮ ಪದವಿಯ ಅಂತಿಮ ಸೆಮಿ ಸ್ಟರ್‌ ಪರೀಕ್ಷೆ ಫಲಿತಾಂಶ ರವಿವಾರ ಮತ್ತು ಸೋಮವಾರ ಪ್ರಕಟವಾಗಿವೆ. ಆದರೆ ಸರ್ವರ್‌ ಸಮಸ್ಯೆಯಿಂದಾಗಿ ಕೆಲವು ವಿದ್ಯಾರ್ಥಿಗಳಿಗಷ್ಟೇ ಫಲಿತಾಂಶ ಲಭ್ಯವಾದರೆ, ಬಹುತೇಕರಿಗೆ ಫಲಿತಾಂಶ ನೋಡಲು ಇನ್ನೂ ಸಾಧ್ಯವಾಗಿಲ್ಲ. ನ. 21ರಂದು ಎಂಎಸ್ಸಿ ಸಹಿತ ಸ್ನಾತಕೋತ್ತರ ಪದವಿ ಕೋರ್ಸ್‌ ದಾಖಲಾತಿಗೆ ಕೊನೆಯ ದಿನವಾಗಿದ್ದು, ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಿದ್ದಾರೆ.

Advertisement

ಅಗತ್ಯವಿದ್ದರೆ ಮುಂದೂಡಿಕೆ
ಸರ್ವರ್‌ ಸಮಸ್ಯೆಯಿಂದಾಗಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಫಲಿತಾಂಶ ಲಭ್ಯವಾಗಿಲ್ಲ. ಬುಧವಾರದ ವೇಳೆಗೆ ಇದನ್ನು ಸರಿಪಡಿಸಲಾಗುವುದು ಎಂದು ವಿ.ವಿ. ಕುಲಪತಿ ಪ್ರೊ| ಪಿ.ಎಸ್‌. ಯಡಪಡಿತ್ತಾಯ ಅವರು “ಉದಯವಾಣಿ’ಗೆ ಮಂಗಳವಾರ ತಿಳಿಸಿದ್ದರು. ಆದರೆ ಬುಧ ವಾರವೂ ಸಮಸ್ಯೆ ಸರಿಯಾಗದ ಕಾರಣ ವಿದ್ಯಾರ್ಥಿಗಳು ಮತ್ತಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ. ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿರುವ ಕುಲಪತಿ ಯವರು “ವಿದ್ಯಾರ್ಥಿಗಳಿಗೆ ಫಲಿ ತಾಂಶ ಲಭ್ಯತೆಯಲ್ಲಿ ಸಮಸ್ಯೆ ಉಂಟಾಗಿದ್ದಲ್ಲಿ ಗಮನಕ್ಕೆ ತರ ಬೇಕು. ಸಮಸ್ಯೆಯಾಗಿರುವ ಕಡೆ ಸ್ನಾತಕೋತ್ತರ ಪದವಿ ದಾಖಲಾತಿಗೆ ಕೊನೆ ದಿನಾಂಕವನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.

2ನೇ ದಿನವೂ ವಿದ್ಯಾರ್ಥಿಗಳು ವಿರಳ
ಮಂಗಳೂರು/ಉಡುಪಿ, ನ. 18: ಕೊರೊನಾ, ಲಾಕ್‌ಡೌನ್‌ ಬಳಿಕ ಮಂಗಳವಾರದಿಂದ ಅಂತಿಮ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ತರಗತಿ ಆರಂಭವಾಗಿದ್ದು, ಎರಡನೇ ದಿನವೂ ಅವಿಭಜಿತ ದ.ಕ. ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ದ.ಕ. ಜಿಲ್ಲೆಯಲ್ಲಿ ಬುಧವಾರ ಮೊದಲ ದಿನದಿಂದ ಶೇ. 3-5ರಷ್ಟು ಹೆಚ್ಚಳವಾಗಿದೆ. ಉಡುಪಿ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆಯಲ್ಲಿ ಯಾವುದೇ ಏರಿಕೆ ಕಂಡಿಲ್ಲ.

ಕೊರೊನಾ ಪರೀಕ್ಷೆ ಮಾಡಿಸಿದ್ದರೂ ವರದಿ ಕೈ ಸೇರದಿರುವುದು, ಹೆತ್ತವರು ಅನುಮತಿ ಪತ್ರ ನೀಡದಿರುವುದು ಮುಂತಾದ ಕಾರಣಗಳಿಂದಾಗಿ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಲು ಸಾಧ್ಯವಾಗಿಲ್ಲ. ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಮೊದಲ ದಿನಕ್ಕಿಂತ ಎರಡನೇ ದಿನ ತುಸು ಹೆಚ್ಚಳವಾದರೆ ಇನ್ನು ಕೆಲವು ಕಾಲೇಜುಗಳಲ್ಲಿ ಮೊದಲ ದಿನಕ್ಕಿಂತಲೂ ಕಡಿಮೆ ಇತ್ತು.

ಮಂಗಳೂರು ವಿ.ವಿ. ಕಾಲೇಜಿನಲ್ಲಿ ಉಪನ್ಯಾಸಕರು, ಸಿಬಂದಿ ಸಹಿತ 110 ಮಂದಿಗೆ ಬುಧವಾರ ಕೊರೊನಾ ಪರೀಕ್ಷೆ ವ್ಯವಸ್ಥೆ ಮಾಡಲಾಗಿತ್ತು. ರಥಬೀದಿ ಕಾಲೇಜಿನಲ್ಲೂ ನಾಲ್ಕು ದಿನಗಳಿಂದ ಕೊರೊನಾ ಪರೀಕ್ಷೆ ನಡೆಯುತ್ತಿದೆ. ಕೆಲವು ಖಾಸಗಿ ಕಾಲೇಜುಗಳಲ್ಲಿಯೂ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಉಡುಪಿ ನಗರದ ಪಿಪಿಸಿ, ಎಂಜಿಎಂ, ತೆಂಕನಿಡಿಯೂರು ಕಾಲೇಜಿನ ವಿದ್ಯಾರ್ಥಿಗಳ ಕೊರೊನಾ ಪರೀಕ್ಷೆ ವರದಿ ಬಾಕಿ ಇರುವ ಹಿನ್ನೆಲೆಯಲ್ಲಿ ಕಾಲೇಜುಗಳಿಗೆ ಬಂದಿರಲಿಲ್ಲ.

Advertisement

ಶಿಕ್ಷಕರಿಗೆ ಪಾಸಿಟಿವ್‌
ಅಜ್ಜರಕಾಡು ಸರಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ನ. 17ರಂದು ಹಾಜರಾದ ವಿದ್ಯಾರ್ಥಿಗಳು ಹಾಗೂ ಶಿಕ್ಷಕ, ಶಿಕ್ಷಕೇತರ ಸಿಬಂದಿ ಸೇರಿದಂತೆ ಒಟ್ಟು 40 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ಅವರಲ್ಲಿ ಶಿಕ್ಷಕರೊಬ್ಬರಿಗೆ ಕೊರೊನಾ ಪಾಸಿಟಿವ್‌ ಇರುವುದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next