Advertisement

ಪದವಿ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

02:00 AM Jul 18, 2017 | Team Udayavani |

ಬೆಳ್ತಂಗಡಿ: ಪದವಿ ಕಾಲೇಜುಗಳ ತರಗತಿ ಅವಧಿ ಬದಲಾವಣೆ ಕುರಿತು ಸೋಮವಾರ ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2.30 ರವರೆಗೆ ಸರಕಾರಿ ಪದವಿ ಕಾಲೇಜುಗಳಲ್ಲಿ ತರಗತಿಗಳನ್ನು ನಡೆಸುವಂತೆ ಪದವಿ ಶಿಕ್ಷಣ ಇಲಾಖೆ ಸುತ್ತೋಲೆ ನೀಡಿದೆ. ಇದು ಕೇವಲ ಸರಕಾರಿ ಕಾಲೇಜುಗಳಿಗೆ ಅನ್ವಯವಾಗುತ್ತದೆ. ಗ್ರಾಮೀಣ  ಪ್ರದೇಶದ ವಿದ್ಯಾರ್ಥಿಗಳಿಗೆ ಈ ಅವಧಿಯಲ್ಲಿ ತಲುಪಲು ಕಷ್ಟ. ಆದ್ದರಿಂದ ಹಾಜರಾತಿ ಕೊರತೆ ಉಂಟಾಗಿ ಪರೀಕ್ಷೆ ಎದುರಿಸುವುದೂ ಕಷ್ಟವಾಗಬಹುದು. ಖಾಸಗಿ ಕಾಲೇಜುಗಳಿಗೆ ಇಲ್ಲದ ಈ ನಿಯಮ ಕೇವಲ ಸರಕಾರಿ ಕಾಲೇಜುಗಳಿಗೆ ಏಕೆ ಎಂದು ಪ್ರಶ್ನಿಸಿದ ವಿದ್ಯಾರ್ಥಿ ಮುಖಂಡರು, ಈ ಸುತ್ತೋಲೆಯನ್ನು ತತ್‌ಕ್ಷಣ ಮರಳಿ ಪಡೆಯಬೇಕು. ಇಲ್ಲದಿದ್ದರೆ ಬೃಹತ್‌ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ವಿದ್ಯಾರ್ಥಿ ಮುಖಂಡರು ಹೇಳಿದರು.

Advertisement

ವಿದ್ಯಾರ್ಥಿಗಳ ಸಂಕಷ್ಟದ ಅರಿವಿದ್ದರೂ ಇಲಾಖೆಯ ಸುತ್ತೋಲೆಯಂತೆ ಕಾರ್ಯ ನಿರ್ವಹಿಸಬೇಕಿದೆ. ಮನವಿಯನ್ನು ಸಂಬಂಧ ಪಟ್ಟವರಿಗೆ ಕಳುಹಿಸಲಾಗುವುದು ಎಂದು ಪ್ರಾಚಾರ್ಯ ಪ್ರೊ| ರಾಜಪ್ಪ ಹೇಳಿದರು. ತರಗತಿ ಬಹಿಷ್ಕಾರ ಅಂತ್ಯಗೊಳಿಸಿ ತರಗತಿಗೆ ತೆರಳುವಂತೆ ಮನವೊಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next