Advertisement

ಪದವಿ ಪ್ರವೇಶ: ಕೈಕೊಟ್ಟ ಯುಯುಸಿಎಂಎಸ್‌

12:20 AM Sep 03, 2022 | Team Udayavani |

ಬೆಂಗಳೂರು: ರಾಜ್ಯದ ಪ್ರಥಮದರ್ಜೆ ಕಾಲೇಜುಗಳಲ್ಲಿ ಈ ವರ್ಷ ಆರಂಭಿಸಿರುವ ಆನ್‌ಲೈನ್‌ ಪ್ರವೇಶಾತಿ ವ್ಯವಸ್ಥೆಗೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ದೊರಕದ ಕಾರಣ ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಅರ್ಜಿಗಳನ್ನು ಭೌತಿಕವಾಗಿ (ಆಫ್ ಲೈನ್‌) ಪಡೆದು, ಬಳಿಕ ಆನ್‌ಲೈನ್‌ಗೆ ಅಪ್‌ಲೋಡ್‌ ಮಾಡಲಾಗುತ್ತಿದೆ.

Advertisement

ಯುಯುಸಿಎಂಎಸ್‌ನಲ್ಲಿ ಆರಂಭದಿಂದಲೂ ತಾಂತ್ರಿಕ ದೋಷ ಉಂಟಾಗು ತ್ತಿದ್ದು, ಕೋರ್ಸ್‌ಗಳ ಮಾಹಿತಿ ವೀಕ್ಷಿಸಲುಹಾಗೂ ಕಾಲೇಜುಗಳಲ್ಲಿ ಸಂಬಂಧಪಟ್ಟ ವಿಭಾಗ, ಕೋಸ್‌ಚ ಆಯ್ಕೆ ಮಾಡಿಕೊಳ್ಳಲು ಪರದಾಟ ಮುಂದುವರಿದಿದೆ.

ಹೀಗಾಗಿ ಭೌತಿಕವಾಗಿ ಅರ್ಜಿ ಮೂಲಕ ಪಡೆದು ಪ್ರವೇಶ ನೀಡುತ್ತಿವೆ. ಆ ಬಳಿಕ ವಿದ್ಯಾರ್ಥಿಗಳ ಮಾಹಿತಿಯನ್ನು ಯುಯುಸಿಎಂಎಸ್‌ ತಂತ್ರಾಂಶಕ್ಕೆ ಅಪ್‌ಲೋಡ್‌ ಮಾಡಲಾಗುತ್ತಿದೆ. ಸೆ.15ರ ವರೆಗೂ ಪ್ರವೇಶಾತಿಗೆ ಅಕಾಶ ಇದ್ದು, ಹೆಚ್ಚಿನ ವಿದ್ಯಾರ್ಥಿಗಳು ಪ್ರವೇ ಶಾತಿ ಪಡೆಯುವ ನಿರೀಕ್ಷೆಯಿದೆ.

171 ಕಾಲೇಜಿಗೆ ಕೇವಲ 8 ಸಾವಿರ ವಿದ್ಯಾರ್ಥಿಗಳು!
ಯುಯುಸಿಎಂಎಸ್‌ ದಾಖಲೆ ಗಳ ಪ್ರಕಾರ, ರಾಜ್ಯದ 430 ಪ್ರಥಮ ದರ್ಜೆ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳಡಿ ಬರುವ 171 ಕಾಲೇಜುಗಳಲ್ಲಿ 1,18,145 ಇನ್‌ಟೇಕ್‌ (ಸೀಟು) ಲಭ್ಯವಿದ್ದು ಕೇವಲ 8,136 ವಿದ್ಯಾರ್ಥಿಗಳಷ್ಟೇ ನೋಂದಣಿ ಯಾಗಿದ್ದಾರೆ. 171 ಕಾಲೇಜಿ
ನಲ್ಲಿ 100ಕ್ಕೂ ಕಡಿಮೆ ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ 7 ಕಾಲೇಜುಗಳು, ದಾವಣಗೆರೆ-2, ಸಂಸ್ಕೃತ ವಿವಿ, ವಿಜಯನಗರ ಶ್ರೀಕೃಷ್ಣದೇವರಾಯ ವಿವಿ, ಕರ್ನಾಟಕ, ಕಲಬುರಗಿ, ಬೆಂಗಳೂರು ಉತ್ತರ ಮತ್ತು ಮೈಸೂರು ವಿವಿಯ ತಲಾ ಒಂದು ಕಾಲೇಜುಗಳಲ್ಲಿ ಒಂದಂಕಿ ವಿದ್ಯಾರ್ಥಿಗಳಷ್ಟೇ ನೋಂದಣಿ ಯಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

Advertisement

ರಾಜ್ಯದ ವಿದ್ಯಾರ್ಥಿಗಳಿಗೆ ಎಲ್ಲ ಕಾಲೇಜುಗಳ ಮಾಹಿತಿ ಲಭ್ಯವಾ ಗಲಿ ಎಂಬ ಉದ್ದೇಶದಿಂದ ಯುಯುಸಿ ಎಂಎಸ್‌ ತಂತ್ರಾಂಶ ಸಿದ್ಧಪಡಿಸಲಾಗಿದೆ. ಕೆಲವು ಕಾಲೇಜುಗಳಲ್ಲಿ ಆಫ್ ಲೈನ್‌ ಆಗಿರಬಹುದು. ಆದರೆ ಯುಯುಸಿಎಂಎಸ್‌ ಮೂಲಕವೇ ನೋಂದಣಿಯನ್ನು ಕಡ್ಡಾಯ ಮಾಡಲಾಗಿದೆ. ರಾಜ್ಯದಲ್ಲಿ ಈ ವರೆಗೂ 3.5 ಲಕ್ಷ ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಅರ್ಜಿ ದಾಖಲಿಸುವುದನ್ನು ಮಾತ್ರ ಆನ್‌ಲೈನ್‌ ಮಾಡಲಾಗಿದೆ. ಈ ಕುರಿತು ಸ್ಥಳೀಯವಾಗಿ ಯಾವ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ ಎಂಬುದು ತಿಳಿದು ಬಂದಿಲ್ಲ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌ ಪಿ. ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next