ಸಿಂಗ್ರೌಲಿ: ದೆಹಲಿ ಮುಖ್ಯಮಂತ್ರಿ, ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಜಾರಿ ನಿರ್ದೇಶನಾಲಯದ (ED) ಸಮನ್ಸ್ ಧಿಕ್ಕರಿಸಿ ಗುರುವಾರ ಮಧ್ಯಪ್ರದೇಶದ ಸಿಂಗ್ರೌಲಿ ನಗರದಲ್ಲಿ ವಿಧಾನಸಭಾ ಚುನಾವಣಾ ಅಭ್ಯರ್ಥಿಯ ರೋಡ್ ಶೋನಲ್ಲಿ ಭಾಗವಹಿಸಿದರು. ಅವರೊಂದಿಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಇದ್ದರು.
ಆಪ್ ನ ರಾಷ್ಟ್ರೀಯ ಸಂಚಾಲಕರಾಗಿರುವ ಕೇಜ್ರಿವಾಲ್, ದೆಹಲಿ ಅಬಕಾರಿ ನೀತಿ ಸಂಬಂಧಿತ ಪ್ರಕರಣದಲ್ಲಿ ವಿಚಾರಣೆಗೆ ಇಡಿ ಮುಂದೆ ಹಾಜರಾಗಿರಲಿಲ್ಲ. ರಾಜಕೀಯ ಪ್ರೇರಿತ ಮತ್ತು ಕಾನೂನುಬಾಹಿರ ಎಂದು ಪ್ರತಿಪಾದಿಸಿ ನೋಟಿಸ್ ಹಿಂಪಡೆಯುವಂತೆ ಒತ್ತಾಯಿಸಿ ಏಜೆನ್ಸಿಗೆ ಪತ್ರ ಬರೆದಿದ್ದಾರೆ.
ಮಾನ್ ಸಿಂಗ್ರೌಲಿಯಲ್ಲಿ ಪಕ್ಷದ ಅಭ್ಯರ್ಥಿ ಮತ್ತು ಎಎಪಿಯ ರಾಜ್ಯಾಧ್ಯಕ್ಷೆ ರಾಣಿ ಅಗರವಾಲ್ ಅವರ ಪವಾಗಿ ರೋಡ್‌ಶೋನಲ್ಲಿ ಭಾಗವಹಿಸಿದರು.
”ಚುನಾವಣ ಫಲಿತಾಂಶ ಬಂದ ದಿನ ನಾನು ಜೈಲಿನಲ್ಲಿರಬೇಕೋ ಅಥವಾ ಹೊರಗೆ ಇರುತ್ತೇನೋ ಗೊತ್ತಿಲ್ಲ.ಆದರೆ ನಾನು ಎಲ್ಲಿದ್ದರೂ, ಜನರು ಕೇಜ್ರಿವಾಲ್ ಸಿಂಗ್ರೌಲಿಗೆ ಬಂದರು ಮತ್ತು ಸಿಂಗ್ರೌಲಿ ಜನರು ಐತಿಹಾಸಿಕ ವಿಜಯವನ್ನು ನೀಡಿದ ನಂತರ ಅವರನ್ನು ವಾಪಸ್ ಕಳುಹಿಸಿದರು ಎಂದು ಹೇಳುವುದನ್ನು ನಾನು ಕೇಳಬೇಕು” ಎಂದರು.
ಅಗರವಾಲ್ ಅವರು ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರವಾದ ಸಿಂಗ್ರೌಲಿ ನಗರದ ಮೇಯರ್ ಕೂಡ ಆಗಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪ್ರಾಬಲ್ಯವಿರುವ ರಾಜ್ಯದಲ್ಲಿ ಕಳೆದ ವರ್ಷ ಮೇಯರ್ ಚುನಾವಣೆಯಲ್ಲಿ ಗೆದ್ದು ಅಚ್ಚರಿ ಮೂಡಿಸಿದ್ದರು. 230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ 17 ರಂದು ಚುನಾವಣೆ ನಡೆಯಲಿದೆ.