Advertisement
ತಮಿಳುನಾಡು ರಾಜಧಾನಿ ಚೆನ್ನೈ ಸಮೀಪ ಇರುವ ತಿರುವಿದಾಂತೈನಲ್ಲಿ ನಾಲ್ಕು ದಿನಗಳ ರಕ್ಷಣಾ ವಸ್ತು ಪ್ರದರ್ಶನ(ಡಿಫೆನ್ಸ್ ಎಕ್ಸ್‌ಪೋ) ಉದ್ಘಾಟಿಸಿ ಅವರು ಮಾತನಾಡಿದರು. ಯುಪಿಎ ಅವಧಿಯಲ್ಲಿ 126 ಮಧ್ಯಮ ದರ್ಜೆಯ ಬಹೂಪಯೋಗಿ ಯುದ್ಧ ವಿಮಾನ (ಎಂಎಂಆರ್‌ಸಿಎ) ಖರೀದಿಸು ವಲ್ಲೂ ವಿಳಂಬ ನೀತಿ ಅನುಸರಿಸಲಾಗಿತ್ತು ಎಂದು ಮೋದಿ ಟೀಕಿಸಿದ್ದಾರೆ. “ನಮ್ಮ ನೇತೃತ್ವದ ಕೇಂದ್ರ ಸರಕಾರ ಸೇನೆಯ ಅಗತ್ಯಕ್ಕೆ ಕೂಡಲೇ ಸ್ಪಂದಿಸಿದೆ. 110 ಯುದ್ಧ ವಿಮಾನಗಳ ಖರೀದಿಗೆ ಕ್ರಮ ಕೈಗೊಂಡಿದ್ದೇವೆ. ನಾವು ಬರೀ ಚರ್ಚೆಯಲ್ಲಿಯೇ ಹತ್ತು ವರ್ಷಗಳ ಕಾಲ ಕಳೆಯುವುದಿಲ್ಲ’ ಎಂದು ಹೇಳಿದ್ದಾರೆ.
Related Articles
ವಾಯುಪಡೆಯಿಂದ 110 ಸಮರ ವಿಮಾನಗಳ ಗುತ್ತಿಗೆ ಪಡೆಯಲು ಉತ್ಸುಕವಾಗಿರುವ ಅಮೆರಿಕದ ಬೋಯಿಂಗ್ ಸಂಸ್ಥೆಯು ಗುರುವಾರ ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಮತ್ತು ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್ (ಎಂಡಿಎಸ್) ಜತೆ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಮೇಕ್ ಇನ್ ಇಂಡಿಯಾ ಯೋಜನೆಯನ್ವಯ ಭಾರತದಲ್ಲೇ ಎಫ್/ಎ-18 ಸೂಪರ್ ಹಾರ್ನೆಟ್ ತಯಾರಿಸಲು ಬೋಯಿಂಗ್ ಮುಂದಾಗಿದೆ.
Advertisement
ಆಯೋಗದ ವಿರುದ್ಧದ ಆರೋಪ ಸುಳ್ಳುಜನಸಂಖ್ಯೆ ನಿಯಂತ್ರಿಸಿದ ರಾಜ್ಯಗಳ ಮೇಲೆ ಹೆಚ್ಚಿನ ಪ್ರೋತ್ಸಾಹದಾಯಕ ಕ್ರಮ ಕೈಗೊಳ್ಳ ಬೇಕು ಎಂದು 15ನೇ ಹಣಕಾಸು ಆಯೋಗಕ್ಕೆ ಸೂಚಿಸಲಾಗಿತ್ತು. ಕೇವಲ ನಿಗದಿತ ರಾಜ್ಯಗಳನ್ನು ಗುರಿಯಾಗಿರಿಸಿಕೊಂಡು ನಿಯಮಗಳನ್ನು ರಚಿಸಲಾಗಿದೆ ಎಂಬ ಆರೋಪ ಸುಳ್ಳು ಎಂದು ಹೇಳಿದ್ದಾರೆ ಪ್ರಧಾನಿ ನರೇದ್ರ ಮೋದಿ. ಎನ್‌ಡಿಎ ಸರಕಾರ ಸಹಕಾರ ಒಕ್ಕೂಟ ವ್ಯವಸ್ಥೆಯ ಮೇಲೆ ನಂಬಿಕೆ ಇರಿಸಿದೆ. ಜನಸಂಖ್ಯೆ ನಿಯಂತ್ರಿಸಲು ಕ್ರಮ ಕೈಗೊಂಡ ರಾಜ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ನಾವೇ ಸೂಚಿಸಿದ್ದೇವೆ. ಆದರೂ ವಿನಾಕಾರಣ ಟೀಕಿಸಲಾಗುತ್ತಿದೆ ಎಂದಿದ್ದಾರೆ. ನಮ್ಮ ನಿಲುವು ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಆಗಿದೆ ಎಂದಿದ್ದಾರೆ. ಏ.10ರಂದು ತಿರುವನಂತಪುರದಲ್ಲಿ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಮತ್ತು ಹಣಕಾಸು ಸಚಿವರ ಸಭೆಯಲ್ಲಿ ಈ ಬಗ್ಗೆ ಕಟುವಾಗಿ ಆಕ್ಷೇಪಿಸಲಾಗಿತ್ತು. ಎಲ್ಲರ ಜತೆ ಚರ್ಚೆ
ರಕ್ಷಣಾ ಖರೀದಿ ನಿಯಮ ರೂಪಿಸುವ ಸಂದರ್ಭ ದಲ್ಲಿ ದೇಶಿಯ, ವಿದೇಶಿ ಕಂಪನಿಗಳ ಜತೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ. ದೇಶದಲ್ಲಿ ರಕ್ಷಣಾ ಕ್ಷೇತ್ರದ ಉತ್ಪಾ ದನಾ ವ್ಯವಸ್ಥೆ ಬಲ ಗೊಳ್ಳಲು ಅನುಕೂಲವಾ ಗುವಂತೆ ಒಂದು ವ್ಯವಸ್ಥೆ ರೂಪುಗೊಳ್ಳಬೇಕು. ಅದರಲ್ಲಿ ಖಾಸಗಿ, ಸರ್ಕಾರಿ ಸಂಸ್ಥೆಗಳೂ ಭಾಗೀದಾರಿಗಳಾಗಬೇಕು ಎಂದು ಹೇಳಿದ್ದಾರೆ.