Advertisement

ಉಳ್ಳಾಲ ನೇತ್ರಾವತಿ ಸೇತುವೆಗೆ ರಕ್ಷಣಾ ಬೇಲಿ ಅಳವಡಿಕೆ: ಶಾಸಕರಿಂದ ಗುದ್ದಲಿ ಪೂಜೆ

11:56 PM Jul 04, 2020 | Sriram |

ಮಹಾನಗರ: ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ನಡೆಯುತ್ತಿರುವ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸೇತುವೆಯ ಉದ್ದಕ್ಕೂ ರಕ್ಷಣಾ ಬೇಲಿ ಅಳವಡಿಸುವ ಕಾಮಗಾರಿಗೆ ಶನಿವಾರ ಗುದ್ದಲಿ ಪೂಜೆ ನಡೆಯಿತು.

Advertisement

ಕಾಮಗಾರಿಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಡಿ. ವೇದವ್ಯಾಸ ಕಾಮತ್‌ ಚಾಲನೆ ನೀಡಿದರು. ಇದೇ ವೇಳೆ ಮೂಡಾ ಅಧ್ಯಕ್ಷ ರವಿಶಂಕರ ಮಿಜಾರ್‌, ಪಾಲಿಕೆ ಮೇಯರ್‌ ದಿವಾಕರ್‌ ಪಾಂಡೇಶ್ವರ್‌, ಕಾರ್ಪೊರೇಟರ್‌ ವೀಣಾ ಮಂಗಳಾ ಮತ್ತಿತರರು ಉಪಸ್ಥಿತರಿದ್ದರು.

 55 ಲ. ರೂ. ವೆಚ್ಚ
ಉಳ್ಳಾಲ ನೇತ್ರಾವತಿ ಸೇತುವೆಗೆ 55 ಲಕ್ಷ ರೂ. ವೆಚ್ಚದಲ್ಲಿ ರಕ್ಷಣಾ ಬೇಲಿ ಮತ್ತು ಸಿಸಿ ಕೆಮರಾ ಅಳವಡಿಸಲಾಗುವುದು. ಉಕ್ಕಿನ ಸರಳುಗಳನ್ನು ಉಪಯೋಗಿಸಿ ಸೇತುವೆಯ ಇಕ್ಕೆಲಗಳಲ್ಲಿ 800 ಮೀ. ಉದ್ದದ ರಕ್ಷಣಾ ಬೇಲಿ ನಿರ್ಮಾಣ ಮಾಡಲಾಗುವುದು.
-ವೇದವ್ಯಾಸ ಕಾಮತ್‌ ಶಾಸಕ

 

Advertisement

Udayavani is now on Telegram. Click here to join our channel and stay updated with the latest news.

Next