Advertisement

ಎಲ್‌.ಆ್ಯಂಡ್‌.ಟಿ. ನಿರ್ಮಿಸಿದ ಕೆ-9 ವಜ್ರ ಗನ್‌ ಲೋಕಾರ್ಪಣೆ

10:59 AM Jan 18, 2020 | Hari Prasad |

ಹಾಝಿರಾ (ಗುಜರಾತ್‌): ಸೇನೆಗಾಗಿ ಹೊಸತಾಗಿ ನಿರ್ಮಿಸಲಾದ ಕೆ-9 ವಜ್ರ ಗನ್‌ ವ್ಯವಸ್ಥೆಯನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೂರತ್‌ ಸಮೀಪದ ಹಾಝಿರದಲ್ಲಿರುವ ಎಲ್‌.ಆ್ಯಂಡ್‌.ಟಿ. ರಕ್ಷಣಾ ಉತ್ಪಾದನಾ ಘಟಕದಲ್ಲಿ ಗುರುವಾರ ಲೋಕಾರ್ಪಣೆ ಮಾಡಿದರು.

Advertisement

ಸಚಿವ ರಾಜನಾಥ್‌ ಸಿಂಗ್‌ ಹೊಸ ವ್ಯವಸ್ಥೆಗೆ ಸ್ವಸ್ತಿಕ ಇರಿಸಿ, ಕುಂಕುಮದ ತಿಲಕವನ್ನು ಇರಿಸಿದರು. ಧಾರ್ಮಿಕ ವಿಧಿ ವಿಧಾನಗಳ ಜತೆಗೆ ಪೂಜೆಯನ್ನೂ ಸಲ್ಲಿಸಿದರು. ಬಳಿಕ ತೆಂಗಿನಕಾಯಿಯನ್ನೂ ಒಡೆದರು.

ಹೊಸ ಮಾದರಿಯ ಗನ್‌ 50 ಟನ್‌ ತೂಕ, 43 ಕಿ.ಮೀ. ದೂರದವರೆಗೆ 47 ಕೆಜಿ ಬಾಂಬ್‌ ಅನ್ನು ಸಿಡಿಸುವ ಸಾಮರ್ಥ್ಯ ಹೊಂದಿದೆ. ರಕ್ಷಣಾ ಸಚಿವರು ಗನ್‌ ನಿಯಂತ್ರಣ ವಾಹನದಲ್ಲಿ ಕುಳಿತು ಕಾರ್ಯಾಚರಣೆಯ ಅನುಭವವನ್ನೂ ಪಡೆದುಕೊಂಡಿದ್ದಾರೆ.

2017ರಲ್ಲಿ ಎಲ್‌ಆ್ಯಂಡ್‌ ಟಿ 4,500 ಕೋಟಿ ರೂ. ಮೊತ್ತದ ಗುತ್ತಿಗೆ ಪಡೆದುಕೊಂಡಿತ್ತು. ಭೂಸೇನೆಗೆ 42 ತಿಂಗಳ ಅವಧಿಯಲ್ಲಿ 100 ಇಂಥ ಗನ್‌ ವ್ಯವಸ್ಥೆ ಸಿದ್ಧಪಡಿಸಿಕೊಡುವ ಒಪ್ಪಂದ ಇದಾಗಿದೆ. ಖಾಸಗಿ ಕಂಪೆನಿಗೆ ಇದೇ ಮೊದಲ ಬಾರಿಗೆ ಇಂಥ ಗುತ್ತಿಗೆಯನ್ನು ನೀಡಿರುವುದು ಗಮನಾರ್ಹ.

Advertisement

Udayavani is now on Telegram. Click here to join our channel and stay updated with the latest news.

Next