Advertisement

ನಿವೃತ್ತ ಯೋಧರಿಗೆ ಪಿಂಚಣಿ ಸಮಸ್ಯೆ ನಿವಾರಿಸಲು ವೆಬ್‌ಸೈಟ್‌

07:50 PM Jan 14, 2022 | Team Udayavani |

ನವದೆಹಲಿ: ನಿವೃತ್ತಿ ಹೊಂದಿದ ಯೋಧರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಪಿಂಚಣಿ ವಿಚಾರವಾಗಿ ಇರುವ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸುವ ನಿಟ್ಟಿನಲ್ಲಿ ವೆಬ್‌ಸೈಟ್‌ ಒಂದನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶುಕ್ರವಾರ ಅನಾವರಣಗೊಳಿಸಿದ್ದಾರೆ.

Advertisement

ಈ ವ್ಯವಸ್ಥೆಯಿಂದಾಗಿ ಪಿಂಚಣಿಗೆ ಸಂಬಂಧಿಸಿದ ದೂರುಗಳನ್ನು ನೇರವಾಗಿ ನಿವೃತ್ತ ಸೈನಿಕರ ಕಲ್ಯಾಣ ವಿಭಾಗಕ್ಕೇ ಸಲ್ಲಿಕೆ ಮಾಡಿದಂತಾಗಲಿದೆ. ರಕ್ಷಣಾ ಸಚಿವರು “ನಿವೃತ್ತ ಸೈನಿಕರ ಪಿಂಚಣಿ ಸಂಬಂಧಿತ ಕುಂದು-ಕೊರತೆ ನಿವಾರಣೆಗೆ ವಿಶೇಷ ವೆಬ್‌ಸೈಟ್‌ ಅನ್ನು ಸಿದ್ಧಗೊಳಿಸಿ ಲೋಕಾರ್ಪಣೆ ಮಾಡಲಾಗಿದೆ ಎಂದು ಹೇಳಲು ಸಂತೋಷವಾಗುತ್ತದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ:ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿ ಸಿಹಿ : ವೇತನ ಹಾಗೂ ಕರ್ತವ್ಯದ ಅವಧಿಯ ಪರಿಷ್ಕರಣೆ

ನಿವೃತ್ತ ಸೈನಿಕರ ಕಲ್ಯಾಣ ಇಲಾಖೆಗೆ 320 ಕೋಟಿ ರೂ. ಮೊತ್ತವನ್ನು ನೀಡಲಾಗಿದೆ. ಈ ಮೂಲಕ ಬಾಕಿ ಇರುವ ಪಿಂಚಣಿ ಮೊತ್ತವನ್ನು ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದೂ ರಾಜನಾಥ್‌ ಸಿಂಗ್‌ ಬರೆದುಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next