ನವದೆಹಲಿ: ದೇಶದ ಬಗ್ಗೆ ಯೋಧರು ಹಾಗೂ ಸೇನೆಯ ನಿವೃತ್ತ ಅಧಿಕಾರಿಗಳು ಹೊಂದಿರುವ ಸಮರ್ಪಣಾ ಭಾವ, ಅನುಕರಣೀಯ ಉದಾಹರಣೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಭಾರತ ಮತ್ತು ಚೀನಾ ಸೈನಿಕರು ಕಳೆದೊಂದು ವರ್ಷದಿಂದ ಮುಖಾಮುಖೀಯಾಗಿರುವ ಲಡಾಖ್ ಮತ್ತಿತರ ಪ್ರಾಂತ್ಯಗಳಲ್ಲಿ ಸದ್ಯದ ಪರಿಸ್ಥಿತಿಯನ್ನು ಪರಿಶೀಲಿಸುವ ಸಲುವಾಗಿ ರಾಜನಾಥ್ ಸಿಂಗ್ , ಮೂರು ದಿನಗಳಿಗಾಗಿ ಲಡಾಖ್‌ಗೆ ಭೇಟಿ ನೀಡಿದ್ದಾರೆ.
ಭಾನುವಾರ, ಲೇಹ್‌ನಲ್ಲಿ ಕಾರ್ಗಿಲ್‌ನ ಹಿರಿಯ ಜನಪ್ರತಿನಿಧಿಗಳನ್ನು ಹಾಗೂ ಲೇಹ್ ಮತ್ತು ಲಡಾಖ್ ಅಟೋನಮಸ್ ಹಿಲ್ ಡೆವಲಪ್‌ಮೆಂಟ್ ಕೌನ್ಸಿಲ್‌ನ ಸದಸ್ಯರನ್ನು ಭೇಟಿ ಮಾಡಿ ಅವರು ಮಾತನಾಡಿದರು.
ಇದನ್ನೂ ಓದಿ :ಮನುಷ್ಯನ ಮಲದಲ್ಲಿದೆ 50 ಸಾವಿರಕ್ಕೂ ಹೆಚ್ಚು ವೈರಸ್! ಹೊಸ ಸಂಶೋಧನೆಯಿಂದ ಬಹಿರಂಗ
“ಯೋಧರು ಹಾಗೂ ಸೇನೆಯ ನಿವೃತ್ತ ಅಧಿಕಾರಿಗಳು ಹೊಂದಿರುವ ಸಮರ್ಪಣಾ ಭಾವ ಅನುಕರಣೀಯ. ಅವರ ದೇಶ ಸೇವೆಗೆ ನಾನು ಹೃತೂ³ರ್ವಕ ಧನ್ಯವಾದ ಹೇಳಲಿಚ್ಛಿಸುತ್ತೇನೆ. ನಿವೃತ್ತ ಸೇನಾಧಿಕಾರಿಗಳು ಅನುಸರಿಸಿದ ಮಾರ್ಗದಲ್ಲೇ ನಡೆದು ದೇಶವನ್ನು ಸಂರಕ್ಷಿಸುವ ಗುರಿ ನಮ್ಮೆಲ್ಲರದ್ದಾಗಿರಬೇಕು” ಎಂದು ಅವರು ತಿಳಿಸಿದರು.