Advertisement
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಹಾಗೂ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿಗೆ ಚುನಾವಣಾ ಅಖಾಡ ಸಾಕ್ಷಿಯಾಗಿದ್ದು ಇದರ ಪರಿಣಾಮ ಪಕ್ಷಾಂತರ ಕೂಡ ರಾಜಕೀಯ ಪಕ್ಷಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಲೋಕಸಭಾ ಚುನಾವಣೆಯ ಮತದಾನಕ್ಕೆ ಕೇವಲ 16 ದಿನ ಮಾತ್ರ ಬಾಕಿ ಇದ್ದು ಬಹಿರಂತ ಪ್ರಚಾರಕ್ಕೆ ಕೇವಲ 13 ದಿನ ಮಾತ್ರ ಇದೆ. ಏ.24ಕ್ಕೆ ಬಹಿರಂತ ಪ್ರಚಾರ ತೆರೆ ಕಾಣಲಿದೆ. ಇದರ ನಡುವೆ ಕ್ಷೇತ್ರದಲ್ಲಿ ಮತದಾರರ ಮನವೊಸಲು ಪೈಪೋಟಿಗೆ ಇಳಿದಿರುವ ಪಕ್ಷಗಳು ಗ್ರಾಮ, ಹೋಬಳಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಮತ ತಂದುಕೊಡಬಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೆ, ನಾಯಕರಿಗೆ ಪಕ್ಷಗಳು ಗಾಳ ಹಾಕಿ ವಿವಿಧ ಆಸೆ, ಅಮಿಷಗಳನ್ನು ನೀಡಿ ತಮ್ಮ ಪಕ್ಷಗಳ ಕಡೆಗೆ ಸೆಳೆದುಕೊಳ್ಳುವ ಮೂಲಕ ಲೋಕಸಭಾ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
Related Articles
Advertisement
ಕಳೆದ ಬಾರಿ ಗೌರಿಬಿದನೂರಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಚ್.ಪುಟ್ಟಸ್ವಾಮಿಗೌಡ ಪರ ಬ್ಯಾಟಿಂಗ್ ಬೀಸಿದ್ದ ಜಿಪಂ ಮಾಜಿ ಅಧ್ಯಕ್ಷ ಹೆಚ್.ವಿ.ಮಂಜುನಾಥ ಸೇರಿ ಹಲವು ಮಂದಿ ಕೆಎಚ್‌ಪಿ ಬಣ ತೊರೆದು ಮತ್ತೆ ಕಾಂಗ್ರೆಸ್ ಸೇರಿದ್ದಾರೆ.
ಅಲ್ಲದೇ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ನಗರಸಭಾ ಸದಸ್ಯರು ಕೂಡ ಪಕ್ಷಾಂತರ ಪರ್ವಕ್ಕೆ ಮುಂದಾಗುವ ಮೂಲಕ ತಮ್ಮ ಪಕ್ಷಗಳಿಗೆ ಬಿಸಿ ಮುಟ್ಟಿಸಿದ್ದಾರೆ.
–ಕಾಗತಿ ನಾಗರಾಜಪ್ಪ