Advertisement

ಆರ್‌ಸಿಬಿಗೆ ಸೋಲು:ಪ್ಲೇ ಆಫ್ ಗೆ ವಿದಾಯ

03:52 PM Apr 30, 2017 | Team Udayavani |

ಪುಣೆ: ರವಿವಾರದಿಂದ 10ನೇ ಐಪಿಎಲ್‌ ಪಂದ್ಯಾವಳಿ ಏಳೇ ತಂಡಗಳ ನಡುವಿನ ಹೋರಾಟವಾಗಿ ಮುಂದುವರಿಯುವ ಸಾಧ್ಯತೆ ಇದೆ. ಕಾರಣ, ಕಳೆದ ಬಾರಿಯ ರನ್ನರ್ ಅಪ್‌ ಆಗಿದ್ದ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡದ ಖಚಿತ ನಿರ್ಗಮನ!

Advertisement

ಶನಿವಾರ ರೈಸಿಂಗ್‌ ಪುಣೆ ಸೂಪರ್‌ಜೈಂಟ್‌ ವಿರುದ್ಧ ಪುಣೆಯಲ್ಲಿ ನಡೆದ ಅಳಿವು-ಉಳಿವಿನ ಹೋರಾಟದಲ್ಲಿ ವಿರಾಟ್‌ ಕೊಹ್ಲಿ ಪಡೆ ಮತ್ತೆ ಬ್ಯಾಟಿಂಗ್‌ ಬರಗಾಲ ಅನುಭವಿಸಿ 7ನೇ ಸೋಲನ್ನು ಮೈಮೇಲೆ ಎಳೆದುಕೊಂಡಿತು. ಉಳಿದ 4 ಪಂದ್ಯಗಳನ್ನು ಗೆದ್ದರೂ ಬೆಂಗಳೂರು ತಂಡ ಮೇಲೇಳದು ಎಂಬುದು ಸದ್ಯದ ಸ್ಥಿತಿ. ಕೇವಲ 2 ಗೆಲುವು ಹಾಗೂ ತೀರಾ ಕಳಪೆ ರನ್‌ರೇಟ್‌ ಹೊಂದಿರುವ ಆರ್‌ಸಿಬಿ, ಪವಾಡವನ್ನೂ ನಿರೀಕ್ಷಿಸುವ ಸ್ಥಿತಿಯಲ್ಲ. 

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಪುಣೆ ಗಳಿಸಿದ್ದು 3ಕ್ಕೆ 157 ರನ್‌ ಮಾತ್ರ. ಆದರೆ ಬ್ಯಾಟಿಂಗ್‌ ಮರೆತ ಬೆಂಗಳೂರಿಗೆ ಈ ಗುರಿಯೂ ಮರೀಚಿಕೆಯಾಗಿ ಉಳಿಯಿತು. 9 ವಿಕೆಟಿಗೆ 96 ರನ್‌ ಮಾಡಿ 61 ರನ್ನುಗಳ ಸೋಲಿಗೆ ತುತ್ತಾಯಾಯಿತು.

ಆರ್‌ಸಿಬಿ ಸರದಿಯಲ್ಲಿ ನಾಯಕ ವಿರಾಟ್‌ ಕೊಹ್ಲಿ ಮಾತ್ರ ಹೋರಾಟವೊಂದನ್ನು ತೋರ್ಪಡಿಸಿ 48 ಎಸೆತಗಳಿಂದ 55 ರನ್‌ ಮಾಡಿದರು. ಇದರಲ್ಲಿ 4 ಬೌಂಡರಿ ಹಾಗೂ ಇನ್ನಿಂಗ್ಸಿನ ಏಕೈಕ ಸಿಕ್ಸರ್‌ ಸೇರಿತ್ತು. ಉಳಿದವರೆಲ್ಲರೂ ಎರಡಂಕೆಯ ಗಡಿ ಮುಟ್ಟದೆ ಮೊಬೈಲ್‌ ನಂಬರನ್ನು ಪುನರಾವಗರ್ತಿಸಿದರು. ವ್ಯತ್ಯಾಸವೆಂದರೆ, ಈ ಸಲದ್ದು ಬ್ರಝಿಲ್‌ ಮೊಬೈಲ್‌ ನಂಬರ್‌ ಆಗಿತ್ತು (+55 84 23721352). ಸತತ 3 ಪಂದ್ಯಗಳಲ್ಲಿ ಆಲೌಟ್‌ ಆಗದೆ ಐಪಿಎಲ್‌ ಕಳಂಕದಿಂದ ಪಾರಾದುದಷ್ಟೇ ಆರ್‌ಸಿಬಿ ಪಾಲಿನ ಸಮಾಧಾನಕರ ಸಂಗತಿ!

18ಕ್ಕೆ 3 ವಿಕೆಟ್‌ ಕಿತ್ತ ಇಮ್ರಾನ್‌ ತಾಹಿರ್‌ ಪುಣೆಯ ಯಶಸ್ವಿ ಬೌಲರ್‌. ಆದರೆ ವೇಗಿ ಲಾಕಿ ಫ‌ರ್ಗ್ಯುಸನ್‌ ಅಮೋಘ ಸ್ಪೆಲ್‌ ಮೂಲಕ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು (4-1-7-2). ಇದರಲ್ಲಿ 18 ಡಾಟ್‌ ಬಾಲ್‌ಗ‌ಳಿದ್ದವು.

Advertisement

ಈಗಿನ ಲೆಕ್ಕಾಚಾರದ ಪ್ರಕಾರ ಕೋಲ್ಕತಾ, ಮುಂಬೈ, ಹೈದರಾಬಾದ್‌ ಮತ್ತು ಪುಣೆ ತಂಡಗಳಿಗೆ ಪ್ಲೇ-ಆಫ್ ಪ್ರವೇಶಿಸುವ ಅವಕಾಶ ಉಜ್ವಲವಾಗಿದೆ ಎನ್ನಬಹುದು.

ಪುಣೆಗೆ ಕಡಿವಾಣ
ಆರ್‌ಸಿಬಿಯ ಬೌಲಿಂಗ್‌ ಎನ್ನುವುದು ಬ್ಯಾಟಿಂಗಿಗಿಂತ ಎಷ್ಟೋ ಪಟ್ಟು ಉತ್ತಮವಾಗಿತ್ತು. ಪುಣೆಯನ್ನು ಅವರದೇ ಅಂಗಳ ದಲ್ಲಿ 160ರೊಳಗೆ ಹಿಡಿದಿರಿಸಿದ್ದು ಸಾಮಾನ್ಯ ಸಾಧನೆ ಯೇನಲ್ಲ. ಇವರಲ್ಲಿ ಎಡಗೈ ಸ್ಪಿನ್ನರ್‌ ಪವನ್‌ ನೇಗಿ ಆಕ್ರಮಣ ಅಮೋಘ ಮಟ್ಟದಲ್ಲಿತ್ತು. 4 ಓವರ್‌ಗಳಲ್ಲಿ ಕೇವಲ 18 ರನ್‌ ನೀಡಿದ ಅವರು ಪುಣೆ ಬ್ಯಾಟಿಂಗಿಗೆ ಭರ್ಜರಿ ಬ್ರೇಕ್‌ ಹಾಕಿದರು. ಎಸ್‌. ಅರವಿಂದ್‌, ಸಾಮ್ಯುಯೆಲ್‌ ಬದ್ರಿ ಕೂಡ ಉತ್ತಮ ಹಿಡಿತ ಸಾಧಿಸಿದರು. ಮಿಲೆ° ಎಸೆತಗಳೂ ಹರಿತವಾಗಿದ್ದವು. ಹೀಗಾಗಿ 7 ವಿಕೆಟ್‌ಗಳನ್ನು ಕೈಲಿರಿಸಿಕೊಂಡ ಪುಣೆಗೆ ನಿರೀಕ್ಷಿಸಿದಷ್ಟು ದೊಡ್ಡ ಮೊತ್ತವನ್ನು ಪೇರಿಸಲಾಗಲಿಲ್ಲ. ಆದರೆ ಈ ಸಾಮಾನ್ಯ ಸ್ಕೋರನ್ನೂ ಬೆನ್ನಟ್ಟಲು ಬೆಂಗಳೂರು ಬ್ಯಾಟ್ಸ್‌ಮನ್‌ಗಳಿಂದ ಸಾಧ್ಯವಾಗದೇ ಹೋಯಿತು!

ಅಜಿಂಕ್ಯ ರಹಾನೆ (6) ಅವರನ್ನು ಬೇಗನೇ ಕಳೆದುಕೊಂಡ ಬಳಿಕ ರಾಹುಲ್‌ ತ್ರಿಪಾಠಿ, ನಾಯಕ ಸ್ಟೀವನ್‌ ಸ್ಮಿತ್‌ ಮತ್ತು ಮನೋಜ್‌ ತಿವಾರಿ ಸೇರಿಕೊಂಡು ಪುಣೆ ಇನ್ನಿಂಗ್ಸ್‌ ಬೆಳೆಸಿದರು. ಸ್ಮಿತ್‌ ಸರ್ವಾಧಿಕ 45 ರನ್‌ (32 ಎಸೆತ, 5 ಬೌಂಡರಿ, 1 ಸಿಕ್ಸರ್‌), ತಿವಾರಿ ಅಜೇಯ 44 ರನ್‌ (35 ಎಸೆತ, 4 ಬೌಂಡರಿ, 1 ಸಿಕ್ಸರ್‌), ತ್ರಿಪಾಠಿ 37 ರನ್‌ ಬಾರಿಸಿದರು (28 ಎಸೆತ, 4 ಬೌಂಡರಿ, 1 ಸಿಕ್ಸರ್‌). ಧೋನಿ 21 ರನ್‌ ಮಾಡಿ ಅಜೇಯರಾಗಿ ಉಳಿದರು.

ಸ್ಕೋರ್‌ ಪಟ್ಟಿ
ರೈಸಿಂಗ್‌ ಪುಣೆ ಸೂಪರ್‌ಜೈಂಟ್‌

ಅಜಿಂಕ್ಯ ರಹಾನೆ    ಸಿ ಮಿಲೆ° ಬಿ ಬದ್ರಿ    6
ರಾಹುಲ್‌ ತ್ರಿಪಾಠಿ    ಸಿ ಜಾಧವ್‌ ಬಿ ನೇಗಿ    37
ಸ್ಟೀವನ್‌ ಸ್ಮಿತ್‌    ಸಿ ಮಿಲೆ° ಬಿ ಬಿನ್ನಿ    45
ಮನೋಜ್‌ ತಿವಾರಿ    ಔಟಾಗದೆ    44
ಎಂ.ಎಸ್‌. ಧೋನಿ    ಔಟಾಗದೆ    31
ಇತರ        4
ಒಟ್ಟು  (20 ಓವರ್‌ಗಳಲ್ಲಿ 3 ವಿಕೆಟಿಗೆ)    157
ವಿಕೆಟ್‌ ಪತನ: 1-18, 2-58, 3-108.
ಬೌಲಿಂಗ್‌:
ಆ್ಯಡಂ ಮಿಲೆ°        4-0-35-0
ಸಾಮ್ಯುಯೆಲ್‌ ಬದ್ರಿ        4-0-31-1
ಎಸ್‌. ಅರವಿಂದ್‌        4-0-30-0
ಯಜುವೇಂದ್ರ ಚಾಹಲ್‌        2-0-25-0
ಪವನ್‌ ನೇಗಿ        4-0-18-1
ಸ್ಟುವರ್ಟ್‌ ಬಿನ್ನಿ        2-0-17-1

ರಾಯಲ್‌ ಚಾಲೆಂಜರ್ ಬೆಂಗಳೂರು
ಟ್ರ್ಯಾವಿಸ್‌ ಹೆಡ್‌    ಸಿ ಧೋನಿ ಬಿ ಉನಾದ್ಕತ್‌    2
ವಿರಾಟ್‌ ಕೊಹ್ಲಿ    ಸಿ ಅಗರ್ವಾಲ್‌ ಬಿ ಕ್ರಿಸ್ಟಿಯನ್‌    55
ಎಬಿ ಡಿ ವಿಲಿಯರ್    ಸಿ ತಿವಾರಿ ಬಿ ಫ‌ರ್ಗ್ಯುಸನ್‌    3
ಕೇದಾರ್‌ ಜಾಧವ್‌    ರನೌಟ್‌    7
ಸಚಿನ್‌ ಬೇಬಿ    ಸಿ ಸ್ಮಿತ್‌ ಬಿ ಸುಂದರ್‌    2
ಸ್ಟುವರ್ಟ್‌ ಬಿನ್ನಿ    ಸಿ ಸುಂದರ್‌ ಬಿ ಫ‌ರ್ಗ್ಯುಸನ್‌    1
ಪವನ್‌ ನೇಗಿ    ಸಿ ಕ್ರಿಸ್ಟಿಯನ್‌ ಬಿ ತಾಹಿರ್‌    3
ಆ್ಯಡಂ ಮಿಲೆ°    ಸಿ ಸ್ಮಿತ್‌ ಬಿ ತಾಹಿರ್‌    5
ಸಾಮ್ಯುಯೆಲ್‌ ಬದ್ರಿ    ಬಿ ತಾಹಿರ್‌    2
ಎಸ್‌. ಅರವಿಂದ್‌    ಔಟಾಗದೆ    8
ಯಜುವೇಂದ್ರ ಚಾಹಲ್‌    ಔಟಾಗದೆ    4
ಇತರ        4
ಒಟ್ಟು  (20 ಓವರ್‌ಗಳಲ್ಲಿ 9 ವಿಕೆಟಿಗೆ)    96
ವಿಕೆಟ್‌ ಪತನ: 1-11, 2-32, 3-44, 5-48, 6-61, 7-71, 8-82, 9-84.
ಬೌಲಿಂಗ್‌:
ದೀಪಕ್‌ ಚಹರ್‌        2-0-18-0
ಜೈದೇವ್‌ ಉನಾದ್ಕತ್‌        4-0-19-1
ಲಾಕಿ ಫ‌ರ್ಗ್ಯುಸನ್‌        4-1-7-2
ಡೇನಿಯಲ್‌ ಕ್ರಿಸ್ಟಿಯನ್‌        4-0-25-1
ಇಮ್ರಾನ್‌ ತಾಹಿರ್‌        4-0-18-3
ವಾಷಿಂಗ್ಟನ್‌ ಸುಂದರ್‌        2-0-7-1

ಪಂದ್ಯಶ್ರೇಷ್ಠ: ಲಾಕಿ ಫ‌ರ್ಗ್ಯುಸನ್‌

Advertisement

Udayavani is now on Telegram. Click here to join our channel and stay updated with the latest news.

Next