Advertisement
ಸಮೀಪದ ಮಾರಗೌಡನಹಳ್ಳಿ ಗ್ರಾಮದ ಬಸವೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿ ಕೆ.ಆರ್.ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಾ.ರಾ.ಮಹೇಶ್ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯ ಕಾಂಗ್ರೆಸ್ ಅವನತಿಯ ಹಾದಿ ಹಿಡಿದಿದೆ. ಆ ಪಕ್ಷದ ನಾಯಕತ್ವ ಬಲಹೀನಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಡತೆಯಿಂದ ಮೂಲ ಕಾಂಗ್ರೆಸಿಗರು ದೂರ ಸರಿಯುತ್ತಿದ್ದಾರೆ.
Related Articles
Advertisement
ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ಯುವ ಘಟಕದ ಅಧ್ಯಕ್ಷ ಎಚ್.ಆರ್.ಮಧುಚಂದ್ರ, ಮಿರ್ಲೆ ಧನಂಜಯ, ತಾಪಂ ಸದಸ್ಯರಾದ ಶ್ರೀನಿವಾಸಪ್ರಸಾದ್, ಶೋಭಾಕೋಟೆಗೌಡ, ಮಾಜಿ ಸದಸ್ಯ ನಾಗಣ್ಣ, ಸಾದೀಕ್‌ಖಾನ್, ಪುರಸಭೆ ಸದಸ್ಯರಾದ ಎನ್.ಶಿವಕುಮಾರ್, ಎಚ್.ಸಿ.ರಾಜು, ಉಮೇಶ್,
ಕೆ.ಎಲ್.ಕುಮಾರ್, ಮಾಜಿ ಉಪಾಧ್ಯಕ್ಷ ಶಿವಶಂಕರ್, ಮುಖಂಡರಾದ ಮೆಡಿಕಲ್ ರಾಜಣ್ಣ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಅರ್ಜುನಹಳ್ಳಿ ಗಣೇಶ್, ಎಪಿಎಂಸಿ ಮಾಜಿ ನಿರ್ದೇಶಕರಾದ ರಾಜಶೇಖರ್, ನಂಜುಂಡಸ್ವಾಮಿ, ಜೆಡಿಎಸ್ ಮುಖಂಡರಾದ ಎಚ್.ಕೆ.ಸುಜಯ್, ಕೆ.ಎಸ್.ರೇವಣ್ಣ, ಕೆ.ಬಿ.ಪ್ರಕಾಶ್, ಮಹದೇವ್, ಕೆ.ಟಿ.ತ್ಯಾಗರಾಜು, ರಾಮಚಂದ್ರು, ಎಂ.ಎಚ್.ಸ್ವಾಮಿ, ನಾಗರಾಜು, ರಾಂಪುರ ಕಾಳಪ್ಪ, ಮಂಜುನಾಥ್, ಡಿ.ಕೆ.ರಾಜೇಗೌಡ, ಕೆ.ಎನ್.ರವಿ ಇತರರಿದ್ದರು.
ಸಿದ್ದರಾಮಯ್ಯ ದುರಾಡಳಿತದಿಂದ ರಾಜ್ಯದಲ್ಲಿ ಸುಮಾರು 4 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಆತ್ಮಸೈರ್ಯ ತುಂಬಲು ಸಾಲಮನ್ನಾ ಸೇರಿ ಜೆಡಿಎಸ್ ವಿವಿಧ ಯೋಜನೆಗಳನ್ನು ರೂಪಿಸಿದೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಮಾಡಿದ ತಕ್ಷಣದಿಂದಲೇ ರೈತರು, ಮೀನುಗಾರರು ಮತ್ತು ಮಹಿಳಾ ಸ್ವ-ಸಹಾಯ ಸಂಘಗಳು ಮಾಡಿರುವ 58 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಲಾಗುತ್ತದೆ. -ಎಚ್.ವಿಶ್ವನಾಥ್, ಮಾಜಿ ಸಂಸದ.