Advertisement

ಗುಂಡ್ಲುಪೇಟೆ: ಅಡವಿಮಠಕ್ಕೆ ಬಂದಿದ್ದ ಜಿಂಕೆ ಮರಳಿ ಕಾಡಿಗೆ

03:10 PM Jan 07, 2021 | Team Udayavani |

ಗುಂಡ್ಲುಪೇಟೆ: ತಾಲೂಕಿನ ಪಡಗೂರು ಅಡವಿಮಠದ ಆವರಣದೊಳಗೆ ಬಂದಿದ್ದ ಜಿಂಕೆ ಮರಿಯನ್ನು ಅರಣ್ಯಾಧಿ
ಕಾರಿಗಳ ವಶಕ್ಕೆ ನೀಡಲಾಯಿತು.ಕಳೆದ ಎರಡು ದಿನಗಳ ಹಿಂದೆ ಅರಣ್ಯಪ್ರದೇಶದಿಂದ ಆಹಾರವನ್ನರಸಿ ಬಂದಿದ್ದ
ಗುಂಪಿನಿಂದ ದಾರಿತಪ್ಪಿ ಪಡಗೂರು ಹೊರವಲಯದಲ್ಲಿರುವ ಮದ್ದಾನೇಶ್ವರ ಅಡವಿ ಮಠದ ಆವರಣವನ್ನು ಸುಮಾರು
ಒಂದು ವರ್ಷ ವಯಸ್ಸಿನ ಜಿಂಕೆಮರಿ ಪ್ರವೇಶಿಸಿದೆ.

Advertisement

ಹಸಿನಿಂದ ಬಳಲಿದ್ದ ಮರಿಗೆ ಮಠದ ವಿದ್ಯಾರ್ಥಿಗಳು ಹಾಲು ನೀಡಿ ಪ್ರೀತಿಯಿಂದ ಪಾಲಿಸಿದ್ದಾರೆ. ಮಠದಲ್ಲಿರುವ ಜಿಂಕೆಮರಿಯನ್ನು ನೋಡಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಮಠಾಧ್ಯಕ್ಷರಾದ
ಶಿವಲಿಂಗೇಂದ್ರಸ್ವಾಮೀಜಿಯವರು ಜಿಂಕೆ ಮರಿಯನ್ನು ಅರಣ್ಯ ಇಲಾಖೆಯ ವಶಕ್ಕೆ ಒಪ್ಪಿಸಿದರು. ಈ ಜಿಂಕೆಮರಿಯನ್ನು ವಶಕ್ಕೆ ಪಡೆದುಕೊಂಡ ಬಫ‌ರ್‌ ವಲಯದ ಆರ್‌ಎಫ್ಒ ಡಾ.ಲೋಕೇಶ್‌ ಹಾಗೂ ಸಿಬ್ಬಂದಿ ಪಶುವೈದ್ಯರಿಂದ ಆರೋಗ್ಯ ಪರಿಶೀಲಿಸಿದ ನಂತರ ಹಿರಿಯ ಅಧಿಕಾರಿಗಳ ಸಲಹೆ ಮೇರೆಗೆ ಅರಣ್ಯಕ್ಕೆ ಬಿಡುವುದಾಗಿ ತಿಳಿಸಿದರು.

ಇದನ್ನೂ ಓದಿ:ರಕ್ಷಿತಾರಣ್ಯ ಪ್ರದೇಶಗಳ ಬೆಂಕಿ ಪತ್ತೆಗೆ ಡ್ರೊಣ್‌ ಕಣ್ಗಾವಲು, ತಡೆಗೆ ಕಾಪ್ಟರ್‌ ಬಳಕೆ

Advertisement

Udayavani is now on Telegram. Click here to join our channel and stay updated with the latest news.

Next