Advertisement

ದೀಪಿಕಾ ಮನೆಯಲ್ಲಿ ಮದುವೆ ಸಂಭ್ರಮ

11:12 AM Nov 03, 2018 | Team Udayavani |

ಬೆಂಗಳೂರು: ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ ಮದುವೆ ಕಾರ್ಯಗಳಿಗೆ ಚಾಲನೆ ಸಿಕ್ಕಿದೆ. ದೀಪಿಕಾ ಮತ್ತು ಕುಟುಂಬದವರು ಇಂದು ತಮ್ಮ ಬೆಂಗಳೂರಿನ ಮನೆಯಲ್ಲಿ ಸಂಪ್ರದಾಯದಂತೆ ನಂದಿ ಪೂಜೆ ಮಾಡುವ ಮೂಲಕ ವಿವಾಹ ಕಾರ್ಯವನ್ನು ಆರಂಭಿಸಿದರು. 

Advertisement

ಸಭ್ಯಸಾಚಿ ಮುಖರ್ಜಿ ವಿನ್ಯಾಸ ಮಾಡಿದ ವಿಶೇಷ ವಿನ್ಯಾಸದ ಉಡುಪನ್ನು ಧರಿಸಿ ಪೂಜೆಯಲ್ಲಿ ಭಾಗಿಯಾದ ದೀಪಿಕಾ, ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೂಜೆ ಮಾಡುತ್ತಿರುವ ಫೋಟೋ ಹಾಗೂ ಕುಟುಂಬದವರ ಜೊತೆಯಿರುವ ಫೋಟೋವನ್ನು  ಪೋಸ್ಟ್ ಮಾಡಿದ್ದಾರೆ.

ದೀಪಿಕಾ ಹಾಗೂ ರಣವೀರ್‌ ಸಿಂಗ್‌ ಮದುವೆಯ 10 ದಿನದ ಮೊದಲು ದೀಪಿಕಾ ಅವರ ತಾಯಿ ಉಜ್ಜಲಾ ಪಡುಕೋಣೆ ಇಬ್ಬರಿಗಾಗಿ ನಂದಿ ಪೂಜಾ ಕಾರ್ಯವನ್ನು ಹಮ್ಮಿಕೊಂಡಿದ್ದಾರೆ ಎಂದು ವರದಿಯಾಗಿದೆ.

ರಣವೀರ್‌ ಹಾಗೂ ದೀಪಿಕಾ ಈ ತಿಂಗಳು 14 ಹಾಗೂ 15ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮೂಲಗಳ ಪ್ರಕಾರ ಇಟಲಿಯ ಕೋಮೋ ಸಿಟಿಯಲ್ಲಿ ಈ ಮದುವೆ ನಡೆಯಲಿದೆ. ನಂತರ ಬೆಂಗಳೂರು ಹಾಗೂ ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಸಲು ಕುಟುಂಬ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next