Advertisement

Deepika Padukone:‌ ಮುದ್ದಾದ ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ

01:25 PM Sep 08, 2024 | Team Udayavani |

ಮುಂಬಯಿ: ಬಾಲಿವುಡ್‌ (Bollywood) ನಟಿ ದೀಪಿಕಾ ಪಡುಕೋಣೆ(Deepika Padukone) ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

Advertisement

ಶನಿವಾರ(ಸೆ.7ರಂದು)  ಸಂಜೆ 5 ಗಂಟೆ ಸುಮಾರಿಗೆ ದೀಪಿಕಾ ಆಸ್ಪತ್ರೆಗೆ ದಾಖಲಾಗಿದ್ದರು. ನಟಿಯ ಜತೆ ತಾಯಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಮುಂಬೈನ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಎರಡು ದಿನಗಳ ಹಿಂದಷ್ಟೇ ಪತಿ ರಣ್ವೀರ್‌ ಸಿಂಗ್(Ranveer Singh) ಅವರೊಂದಿಗೆ ದೀಪಿಕಾ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಡಿಸೆಂಬರ್ 2018 ರಲ್ಲಿ ಇಟಲಿಯ ಲೇಕ್ ಕೊಮೊದಲ್ಲಿ ದೀಪಿಕಾ – ರಣ್ವೀರ್‌ ಅದ್ಧೂರಿಯಾಗಿ ಕುಟುಂಬ ಹಾಗೂ ಆತ್ಮೀಯರ ಸಮ್ಮುಖದಲ್ಲಿ ವಿವಾಹವಾಗಿದ್ದರು.

Advertisement

ಬಾಲಿವುಡ್‌ನ ಕ್ಯೂಟ್‌ ಜೋಡಿಗಳಲ್ಲಿ ಒಂದಾಗಿರುವ ದೀಪಿಕಾ – ರಣ್ವೀರ್‌ ಈ ವರ್ಷದ ಫೆಬ್ರವರಿಯಲ್ಲಿ ಪ್ರೆಗ್ನೆನ್ಸಿ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಇತ್ತೀಚೆಗೆ ದೀಪಿಕಾ ತನ್ನ ಪತಿ ಜತೆ ಬೇಬಿ ಬಂಪ್‌ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೋಟೋಗಳು ವೈರಲ್‌ ಆಗಿತ್ತು.

ಸಿನಿಮಾದ ವಿಚಾರಕ್ಕೆ ಬಂದರೆ ದೀಪಿಕಾ ʼಸಿಂಗಂ ಎಗೇನ್‌ʼ ನಲ್ಲಿ ಲೇಡಿ ಸಿಂಗಂ ಆಗಿ ಕಾಣಿಸಿಕೊಳ್ಳಲಿದ್ದಾರೆ. ರಣ್ವೀರ್‌ ಇದೇ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next