ಮುಂಬೈ: ಮುಂದಿನ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಬಿಸಿಸಿಐ ಸಿದ್ದತೆ ಮಾಡಿಕೊಳ್ಳುತ್ತಿದೆ. ಮುಂದಿನ ಆವೃತ್ತಿಗೆ ಇನ್ನೆರಡು ತಂಡಗಳು ಸೇರ್ಪಡೆಯಾಗುತ್ತಿರುವ ಕಾರಣ ಅದರ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿದೆ ಬಿಸಿಸಿಐ.
ಈ ಮಧ್ಯೆ ಬಾಲಿವುಡ್ ಸೂಪರ್ ಸ್ಟಾರ್ ಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಹೊಸ ಐಪಿಎಲ್ ತಂಡವೊಂದನ್ನು ಖರೀದಿಸಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
ಹೊಸ ತಂಡಗಳನ್ನು ಖರೀದಿಸಲು ಈಗ ಕೇವಲ ಅದಾನಿ ಗ್ರೂಪ್ ಮತ್ತು ಆರ್ ಪಿ-ಸಂಜೀವ್ ಗೊಯೆಂಕಾ ಗ್ರೂಪ್ ಗಳು ಮಾತ್ರ ಫೇವರೇಟ್ ಗಳಾಗಿ ಉಳಿದಿಲ್ಲ. ವಿಶ್ವದ ಅತ್ಯಂತ ಲಾಭದಾಯಕ ಟಿ 20 ಕ್ರಿಕೆಟ್ ಲೀಗ್ ನಲ್ಲಿ ಹಣ ಹೂಡಲು ಕೆಲವು ಗಂಭೀರ ಬಿಡ್ಡರ್‌ಗಳು ಸಿದ್ಧರಿದ್ದಾರೆ ಎಂದು ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ತೊಡಗಿರುವ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಅ. 24ಕ್ಕೆ ಗಣಿ-ಸುನಿ ಕಾಂಬಿನೇಶನ್ “ಸಖತ್’ ಟೀಸರ್
ಐಪಿಎಲ್ ಮತ್ತು ಬಾಲಿವುಡ್ ಯಾವಾಗಲೂ ಉತ್ತಮ ಸಂಬಂಧವನ್ನು ಹೊಂದಿವೆ. ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಮತ್ತು ಜೂಹಿ ಚಾವ್ಲಾ ಅವರ ಒಡೆತನದಲ್ಲಿ ಮುಂದುವರಿದಿದ್ದು, ಪ್ರೀತಿ ಜಿಂಟಾ ಪಂಜಾಬ್ ಕಿಂಗ್ಸ್ ನಲ್ಲಿ ಪಾಲು ಹೊಂದಿದ್ದಾರೆ.
ದೀಪಿಕಾ ಪಡುಕೋಣೆ ಕ್ರೀಡಾ ಕುಟುಂಬದಿಂದಲೇ ಬಂದವರು. ತಂದೆ ಪ್ರಕಾಶ್ ಪಡುಕೋಣೆ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಮಾಜಿ ಚಾಂಪಿಯನ್. ರಣವೀರ್ ಇಂಗ್ಲಿಷ್ ಪ್ರೀಮಿಯರ್ ಲೀಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ವಿಶ್ವದ ಅತ್ಯಂತ ಜನಪ್ರಿಯ ಬ್ಯಾಸ್ಕೆಟ್‌ಬಾಲ್ ಲೀಗ್ ಎನ್ ಬಿಎ ಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.