Advertisement
“ಡೀಪ್ ಫೇಕ್ ನಿಯಂತ್ರಣಕ್ಕೆ ಕಂಪನಿಗಳು ಕೆಲವು ಕ್ರಮಗಳನ್ನು ಕೈಗೊಂಡಿವೆ. ಆದರೆ ಅದು ಸಾಲುವುದಿಲ್ಲ. ಇನ್ನೂ ಹೆಚ್ಚಿನ ಕ್ರಮಗಳು ತೆಗೆದುಕೊಳ್ಳಬೇಕಿರುವುದು ಅನಿವಾರ್ಯವಾಗಿದೆ.
ಇದೇ ವೇಳೆ, ಐಟಿ ಹಾರ್ಡ್‌ವೇರ್‌ನಲ್ಲಿ ಹೊಸ ಉತ್ಪಾದನೆ ಆಧರಿತ ಪ್ರೋತ್ಸಾಹಧನ(ಪಿಎಲ್‌ಐ) ಯೋಜನೆಯಡಿ ಡೆಲ್, ಎಚ್‌ಪಿ, ಫಾಕ್ಸ್‌ಕಾನ್, ಲೆನೊವೋ ಸೇರಿದಂತೆ 27 ಕಂಪನಿಗಳಿಗೆ ಅನುಮತಿ ನೀಡಲಾಗಿದೆ ಈ ಪೈಕಿ ಶೇ.95ರಷ್ಟು ಅಂದರೆ 23 ಕಂಪನಿಗಳು ತತ್‌ಕ್ಷಣವೇ ಉತ್ಪಾದನೆ ಆರಂಭಿಸಲು ಸಿದ್ಧವಾಗಿವೆ ಎಂದಿದ್ದಾರೆ. ಈ ಕಂಪನಿಗಳು ಸುಮಾರು 3 ಸಾವಿರ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿವೆ ಎಂದು ವೈಷ್ಣವ್ ತಿಳಿಸಿದ್ದಾರೆ.