ದೀಪ ಎಂದರೆ ಬೆಳಕು, ಅವಳಿ ಎಂದರೆ ಸಾಲು. ದೀಪಗಳ ಸಾಲು ಈ ದೀಪಾವಳಿ. ದೀಪಾವಳಿ ಹಬ್ಬ ಬಂದರೆ ಮನೆ ಮನೆಯಲ್ಲೂ ದೀಪವು ಹಚ್ಚಿ ಮನೆಯನ್ನು ದೀಪದಿಂದ ಬೆಳಗಿಸುವವರು.
ದೀಪಾವಳಿಯ ಹಬ್ಬದ ನಿಮಿತ್ಯ ಕೆಲವು ದಿನಗಳ ಮುಂಚೆಯಿಂದ ಮನೆ ಮನೆಗಳಲ್ಲಿ ದೀಪ ಹಚ್ಚಿ ಮನೆಯನ್ನು ದೀಪದಿಂದ ಬೆಳಗಿಸುವವರು. ಮೊಸರು ಮತ್ತು ಕುಂಕುಮವನ್ನು ಒಂದು ಬಟ್ಟಲಿನಲ್ಲಿ ಚೆನ್ನಾಗಿ ಬೆರೆಸಿ ಗೋ ಮಾತೆಯ ಹಣೆಗೆ ಮತ್ತು ಮಾತೆಯ ಹಿಂಬದಿಯಲ್ಲಿ ಎಂದರೆ ಬಾಲಕ್ಕೆ ಹಚ್ಚಿ ಪೂಜಿಸಿ ವಂದಿಸುವವರು. ದೀಪಾವಳಿಯ ಹಬ್ಬದ ನಿಮಿತ್ತ ಮನೆಯನ್ನು ಶುಭ್ರ ಸ್ವಚ್ಛಗೊಳಿಸಿ ಮನೆಯಲ್ಲಿದ್ದ ನೀರೆಲ್ಲಾ ತೆಗೆದು ಸ್ವಚ್ಛವಾದ ನೀರನ್ನು ತುಂಬಿ , ಮನೆಯಲ್ಲಿನ ಎಲ್ಲಾ ಪಾತ್ರೆಗಳನ್ನು ತೊಳೆದು , ಒಂದು ತಾಮ್ರದ ಹಂಡೆಯು ತೊಳೆದು ಅದರಲ್ಲಿ ನೀರನ್ನು ತುಂಬಿ ದೇವರ ಕೋಣೆಯಲ್ಲಿ ನರಚತುರ್ದಶಿಯ ಹಿಂದಿನ ದಿನದಂದು ಇಡುವವರು.
ಎಳ್ಳು ಮತ್ತು ಅಕ್ಕಿಯನ್ನು ಕುಟ್ಟಿ ಅಥವಾ ರುಬ್ಬಿಸಿ ಬಟ್ಟಲಿನಲ್ಲಿ ತೆಗೆದುಕೊಂಡು ಹಬ್ಬದ ಮೊದಲಿನ ದಿನ ಮಹಿಳೆಯರು ತನ್ನ ದೇಹಕ್ಕೆ ಹಚ್ಚಿಕೊಂಡು ಮತ್ತು ಪುರುಷರು ಹಬ್ಬದ ದಿನದಂದು ಹಚ್ಚಿಕೊಂಡು ಸ್ನಾನ ಮಾಡುವವರು. ಇದನ್ನು ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಚಳಿಗಾಲದಲ್ಲಿ ದೇಹಕ್ಕೆ ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ. ಈ ಸಂಪ್ರದಾಯವು ಭಾರತದ ಪ್ರತಿಯೊಂದು ಹಳ್ಳಿಗಳಲ್ಲಿ ಪರಂಪರೆಯಿಂದ ಆಚರಿಸುತ್ತಾ ಬಂದಿದ್ದಾರೆ.
ಹಬ್ಬದ ದಿನದಂದು ಮನೆಯಲ್ಲಿರುವ ಆಯುಧಗಳನ್ನು ಪುಸ್ತಕ, ಒಳ್ಳು, ಒನಕೆ ಹಾಗೂ ಬೀಸುವ ಕಲ್ಲನ್ನು ಪೂಜೆ ಮಾಡಲಾಗುತ್ತದೆ. ಹಬ್ಬದಂದು ವಿವಿಧ ತಿಂಡಿ ತಿನಿಸುಗಳನ್ನು ಮಾಡುತ್ತಾರೆ. ಹಬ್ಬದ ರಾತ್ರಿಯೂ ದೇವಿ ಮಹಾಲಕ್ಷ್ಮಿಯ ಫೋಟೋ ಹಾಗೂ ಮೂರ್ತಿಯನ್ನು ಪೂಜಿಸಿ, ವಿವಿಧ ಪ್ರಕಾರದ ತಿಂಡಿಗಳನ್ನು ನೈವಿದ್ಯ ರೂಪದಲ್ಲಿ ಇಟ್ಟು ಪೂಜಿಸುವವರು.
ಕು. ಸಂಗೀತಾ ಸಿದ್ರಾಮ ಕಲಬುರ್ಗೆ
ಬಸವ ಗುರುಕುಲ ಪ್ರೌಢ ಶಾಲೆ ಔರಾದ್ ಬಿ
ಬೀದರ