Advertisement

“ಅಂತರಂಗದಲ್ಲೊಂದು ಬೆಳಕು”!

12:12 PM Nov 16, 2020 | keerthan |

ಇರುಳು ಮುಗಿದು ಪೂರ್ವದಲ್ಲೊಂದು ಬೆಳಕು;

Advertisement

ಸಂಜೆ ಮುಗಿದು ಬೆಳದಿಂಗಳ ತಿಳಿಯ ಹಾಲ ಬೆಳಕು;

ರಾತ್ರಿಯಲಿ ಹೊಳೆವ ಮಿನುಗುತಾರೆಗಳ ಮೆಲುಕು;

 

ಕರೋನಾದಿಂದ ಮರೆಯಾಗಿ ಅಗಲಿದವರಿಗೊಂದು ದೀಪ;

Advertisement

ಗಡಿಯಂಚಲಿ ನೆರಳಾಗಿ ನಿಂತ ಯೋಧರಿಗೊಂದು ಹೆಮ್ಮೆಯ ದೀಪ;

ಹಗಲಿರುಳು ದುಡಿದ ವೈದ್ಯವೃಂದಕೆ ನಮನದ ದೀಪ;

ಅಕ್ಷರ ದಾನಕೆ ಪ್ರಾಣವನ್ನೇ ಪಣಕಿಟ್ಟ ಗುರುವೃಂದಕ್ಕೊಂದು ಜ್ಞಾನದ ದೀಪ;

 

ಕತ್ತಲಲ್ಲೂ ಬೆಳಕ ತೋರುವ ಆ ಶಿವನಿಗೊಂದು ಭಕ್ತಿಯ ಹಣತೆ;

ಬಿದ್ದಾಗ ಕೈ ಹಿಡಿದು ಎತ್ತುವ ನಿನ್ನವರಿಗೊಂದು ಸ್ನೇಹದ ಪಣತಿ;

ಅನ್ನ ಬೆಳೆದ ರೈತನಿಗೊಂದು ಕೈಮುಗಿವ ಹಣತೆ;

ನ್ಯಾಯಕಾಗಿ ಹೋರಾಡಿದ ಕೆಚ್ಚೆದೆಯ ಗುಂಡಿಗೆಗೆ ಚಪ್ಪಾಳೆಯ ಪಣತಿ;

 

ಆತ್ಮಹತ್ಯೆಯಲ್ಲಿ ಕನಸುಗಳ ಕೊಲ್ಲದಿರಲೆಂದು ಎಚ್ಚರದ ಜ್ಯೋತಿ;

ಸ್ತ್ರೀ ಹತ್ಯೆಯಲ್ಲಿ ಬಲಿಯಾದ ಮುಗ್ಧ ಜೀವಗಳಿಗೆ ನ್ಯಾಯಕಾಗಿ ಜ್ಯೋತಿ;

ಪ್ರವಾಹ, ಬಿರುಗಾಳಿಯಲ್ಲಿ ಕಳೆದುಕೊಂಡವರಿಗೆ ಭರವಸೆಯ ಜ್ಯೋತಿ;

ಸೋತು,ನೊಂದು ಬದುಕೇ ಬೇಡವೆನಿಸುವ ಹೃದಯಕೆ ಆತ್ಮವಿಶ್ವಾಸದ ಜ್ಯೋತಿ!

 

ಕಣ್ಣು ಕಾಣದ ಅಂಧರಿಗೂ ದಿಕ್ಕು ತೋರುವ ಛಲದ ಪ್ರಕಾಶತೆ;

ಅಂಗವೈಕಲ್ಯದಲ್ಲೂ ಮುನ್ನಡೆಸುವ ಮನೋಬಲದ ವಿಶ್ವಾಸತೆ;

ಅಂತರಂಗದಲ್ಲಿ ಸದಾ ಆರದಿರಲು ಮಾನವೀಯತೆಯ ಸೌಂದರ್ಯತೆ;

ಇದೋ ಭಾರತದ ಸಂಸ್ಕೃತಿಯಲಿ ದೀಪಾವಳಿಯೇ ವಿಶೇಷತೆ!!

 

-ಡಾ. ಅರ್ಚನಾ ಎನ್ ಪಾಟೀಲ

ಹಾವೇರಿ

Advertisement

Udayavani is now on Telegram. Click here to join our channel and stay updated with the latest news.

Next