Advertisement
ನ. 8ರಂದು ಪೊವಾಯಿಯ ಮಂತ್ರ ಹೊಟೇಲ್‌ನ ಬ್ಯಾಂಕ್ವೆಟ್ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಇದರ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಸಮಾಜ ಬಾಂಧವರಿಗೆ ದೀಪಾವಳಿ ಉಡುಗೊರೆ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ ಪ್ರಾರಂಭವಾದ ಸಮದಲ್ಲಿ ನಾನು ಸಮಿತಿಯ ಸಂಚಾಲಕನಾಗಿದ್ದೆ, ಮಹೇಶ್ ಶೆಟ್ಟಿ ಅವರು ಕಾರ್ಯಾಧ್ಯಕ್ಷರಾಗಿದ್ದರು. ಬಳಿಕ ದಿವಾಕರ ಶೆಟ್ಟಿ ಮುದ್ರಾಡಿ, ಅಪ್ಪಣ್ಣ ಶೆಟ್ಟಿ, ಗುಣಪಾಲ್ ಶೆಟ್ಟಿ ಐಕಳ ಅವರು ಕಾರ್ಯಾಧ್ಯಕ್ಷರಾಗಿ ಸಮಿತಿಯನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ದರು. ಪ್ರಸ್ತುತ ಡಾ| ಆರ್. ಕೆ. ಶೆಟ್ಟಿ ಅವರ ಅವಧಿಯಲ್ಲಿ ಸಮಿತಿಯು ಸಮಾಜ ಸೇವೆಯಲ್ಲಿ ನೂತನ ಕ್ರಾಂತಿಯನ್ನೇ ಮಾಡಿದೆ. ಸಮಿತಿಯ ಸಮಾಜಪರ ಕಾರ್ಯಕ್ರಮಗಳಿಗೆ ನನ್ನ ಸಹಕಾರ ಸದಾ ಇದೆ. ಇಂತಹ ಮಾನವೀಯ ಕಾರ್ಯಕ್ರಮಗಳು ಸಮಿತಿಯಿಂದ ನಿರಂತರವಾಗಿ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು.
Related Articles
Advertisement
ಸಮಿತಿಯ ಸದಸ್ಯ ಅವಿನಾಶ್ ಶೆಟ್ಟಿ ಅವರು ಸಮಿತಿಯು ನೀಡಿದ ಸಹಾಯದ ಬಗ್ಗೆ ಮಾತನಾಡಿದರು. ಸಮಿತಿಯ ಪದಾಧಿಕಾರಿ ಸತೀಶ್ ಶೆಟ್ಟಿ ಮಾತನಾಡಿ, ಡಾ| ಆರ್. ಕೆ. ಶೆಟ್ಟಿ ಅವರ ಆಶಯದಂತೆ ಸಮಿತಿಯಲ್ಲಿ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವುದು ನನಗೆ ತೃಪ್ತಿ ನೀಡಿದೆ. ಸಮಾಜ ಸೇವೆ ಮಾಡುವ ಒಲವನ್ನು ಅವರಿಂದ ನಾವು ಕಲಿತಿದ್ದೇವೆ ಎಂದರು.
ನ್ಯಾಯವಾದಿ ಆರ್. ಜಿ. ಶೆಟ್ಟಿ, ರವಿ ಶೆಟ್ಟಿ, ಕರುಣಾಕರ ಶೆಟ್ಟಿ, ರಮೇಶ್ ರೈ, ಲಕ್ಷ್ಮಣ್ ಶೆಟ್ಟಿ, ಪ್ರಭಾಕರ ಶೆಟ್ಟಿ, ಅಶೋಕ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಸೂರಜ್ ಶೆಟ್ಟಿ, ಯಶವಂತ್ ಶೆಟ್ಟಿ ಬನ್ನಂಜೆ, ಡಿ. ಕೆ. ಶೆಟ್ಟಿ, ಜ್ಯೋತಿ ಆರ್. ಶೆಟ್ಟಿ, ವಜ್ರಾ ಕೆ. ಪೂಂಜ, ಪ್ರೇಮಾ ಶೆಟ್ಟಿ ಮೊದಲಾದವರು ಸಹಕರಿಸಿದರು.
ರಮೇಶ್ ರೈ ಕಾರ್ಯಕ್ರಮ ನಿರ್ವಹಿಸಿ, ಪ್ರಸ್ತಾವಿಸಿ, ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದ್ದೇವೆ. ಸಮಿತಿಯ ಕಾರ್ಯಾಧ್ಯಕ್ಷ ಡಾ| ಆರ್. ಕೆ. ಶೆಟ್ಟಿ ಅವರೊಂದಿಗಿನ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕುಟುಂಬದ ಸದಸ್ಯರಂತೆ ಒಟ್ಟುಗೂಡಿ ಸಮಾಜಪರ ಕಾರ್ಯಗಳನ್ನು ಮಾಡಿದ್ದೇವೆ ಎನ್ನುವ ತೃಪ್ತಿ ನಮಗಿದೆ ಎಂದು ಶುಭ ಹಾರೈಸಿದರು. ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಶಾಂತಿ ಡಿ. ಶೆಟ್ಟಿ ಪ್ರಾರ್ಥನೆಗೈದರು. ಸಮಿತಿಯ ಪದಾಧಿ ಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ಸದಸ್ಯೆಯರು ಉಪಸ್ಥಿತರಿದ್ದರು.
ಸಮಾಜದ ಬಡವರ ಕಣ್ಣೀರೊರೆಸುವ ಕಾಯಕದಲ್ಲಿ ಸಮಿತಿಯು ಸದಾ ಮುಂದಿದೆ. ಕಳೆದ ಹಲವಾರು ವರ್ಷಗಳಿಂದ ದೀಪಾವಳಿಯ ಮುಂಚಿತವಾಗಿ ಆರ್ಥಿಕವಾಗಿ ಹಿಂದುಳಿದ ಸ್ಥಳೀಯ ಸಮಾಜ ಬಾಂಧವರಿಗೆ ಸಹಕಾರ ನೀಡುತ್ತಿದೆ. ಸಮಾಜಪರ ಕಾರ್ಯಗಳಿಗೆ ಸಮಿತಿಯ ಎಲ್ಲರೂ ಸಹಕರಿಸಿರುವುದನ್ನು ನಾನೆಂದೂ ಮರೆಯುವಂತಿಲ್ಲ. ಸಮಿತಿ ವತಿಯಿಂದ ಭವಿಷ್ಯದಲ್ಲೂ ಉತ್ತಮ ಸಮಾಜಪರ ಕಾರ್ಯಕ್ರಮಗಳು ನಡೆಯಲಿದ್ದು, ಎಲ್ಲರ ಸಹಕಾರ ಅಗತ್ಯವಾಗಿದೆ.ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲೂ ಸಮಿತಿಯ ಕಾರ್ಯಕರ್ತರ ಸಹಾಯ, ಸಹಕಾರವನ್ನು ಮರೆಯುವಂತಿಲ್ಲ. ನಾವೆಲ್ಲರು ಒಂದಾಗಿ, ಒಗ್ಗಟ್ಟಿನಿಂದ ಸಮಾಜ ಸೇವೆಯಲ್ಲಿ ತೊಡಗೋಣ. -ಡಾ| ಆರ್. ಕೆ. ಶೆಟ್ಟಿ ಕಾರ್ಯಾಧ್ಯಕ್ಷರು, ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ