Advertisement

ಜಿಲ್ಲೆಯಲ್ಲಿ ಬೆಳಕಿನ ಹಬ್ಬದ ಸಡಗರ

03:10 PM Oct 25, 2022 | Team Udayavani |

ದೇವನಹಳ್ಳಿ: ಕತ್ತಲಿನಿಂದ ಬೆಳಕಿ ನಡೆಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡೊಯ್ಯುವ ಭಾರತೀಯ ಪರಂಪರೆಯ ಬಹುದೊಡ್ಡ ಹಬ್ಬ ದೀಪಾವಳಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶ್ರದ್ಧಾಭಕ್ತಿ ಯಿಂದ ಆಚರಿಸಲಾಯಿತು.

Advertisement

ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ಗೌರಿ ಪೂಜೆ ಮತ್ತು ಎಲ್ಲಾ ದೇವಾಲಯಗಳಲ್ಲೂ ಭಕ್ತರು ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದರು. ದೀಪಾವಳಿ ಎಂದರೆ ಕತ್ತಲೆಯಿಂದ ಬೆಳಕಿನೆಡೆ ಸಾಗುವುದನ್ನು ಸಂಕೇತಿಸುವ ಆಚರಣೆಯೇ ಬದುಕಿನ ಧ್ಯೇಯವಾಗಿರಬೇಕೆಂದು ಪುರಾಣ ಪೂರ್ವದ ಅನಾದಿಕಾಲದ ಉಪನಿಷತ್ತಿನ ಆಶಯವಾಗಿದೆ.

ಕಳೆದ ಎರಡು ವರ್ಷಗಳಿಂದ ಕೊರೊನಾ ಎಂಬ ಹೆಮ್ಮಾರಿಯಿಂದ ದೀಪಾವಳಿ ಹಬ್ಬ ಸರಳ ವಾಗಿ ಆಚರಿಸಿದ್ದರು. ಈ ಬಾರಿ ಕೊರೊನಾ ಇಳಿಮುಖವಾಗಿರುವುದರಿಂದ ಎಲ್ಲೆಡೆ ಹಬ್ಬದ ಸಂಭ್ರಮ ಮನೆಮಾಡಿದೆ.

ಅಂಗಡಿಗಳಿಗೆ ವಿಶೇಷ ಅಲಂಕಾರ: ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿಯೂ ವಿವಿಧ ದೇವಾಲಯಗಳಲ್ಲಿ ನರಕ ಚತುರ್ದಶಿ ದಿನದಂದು ಹಲವು ಮನೆತನಗಳಲ್ಲಿ ಪಾರಂಪರಿಕವಾಗಿ ಆಚರಿಸುವ ದೀಪಾ ವಳಿ ಯನ್ನು ಶ್ರದ್ಧಾಭಕ್ತಿಯಿಂದ ಆಚರಿಸ ಲಾಯಿತು. ಜಿಲ್ಲೆಯಲ್ಲಿ ಅಮವಾಸ್ಯೆಯ ಅಂಗವಾಗಿ ಲಕ್ಷ್ಮೀಪೂಜೆಯನ್ನು ನರೆವೇರಿಸಲಾಯಿತು. ರಾಜಸ್ಥಾನ ಮೂಲದ ವರ್ತಕರು ದೀಪಾವಳಿ ಅಮವಾಸ್ಯೆಯ ದಿನ ಹೊಸ ಲೆಕ್ಕಾಪುಸ್ತಕಗಳಿಗೆ ಪೂಜೆ ಮಾಡುವ ಪರಿ ಪಾಠವಿದ್ದು, ವಿಶೇಷವಾಗಿ ವರ್ತಕರು ಅಂಗಡಿಗಳನ್ನು ಅಲಂಕರಿಸಿ, ಲಕ್ಷ್ಮೀ ಪೂಜೆ ಮಾಡಿ, ಸಿಹಿ ಹಂಚಿದರು.

ದೀಪ ಬೆಳಗಿಸಿ ಭಕ್ತಿ ಭಾವದಿಂದ ಆಚರಣೆ: ದೇವನಹಳ್ಳಿ ಪಟ್ಟಣದ ವೀರಭದ್ರ ಸ್ವಾಮಿ, ಪರ್ವತೇಶ್ವರ, ನಗರೇಶ್ವರ, ಗಂಗಮ್ಮ ದೇವಾಲಯ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಗೌರಿ ದೇವಿ ಮತ್ತು ಕೇದಾರೇಶ್ವರ ಸ್ವಾಮಿಯ ಪ್ರತಿಷ್ಠಾಪನಾ ಕಾರ್ಯಗಳು ಬೆಳಗಿನಿಂದಲೇ ನಡೆದವು. ಮಹಿಳೆಯರು ಬಿದುರಿನ ಮರ ಮತ್ತು ಬೆಳ್ಳಿಯ ತಟ್ಟೆಯಲ್ಲಿ ಕಜ್ಜಾಯ, ಬಾಳೆಹಣ್ಣು, ಇತರೆ ವಸ್ತುಗಳನ್ನು ಇರಿಸಿ ಗೌರಿದೇವಿಗೆ ಸಮರ್ಪಿಸಿದರು. ಹಬ್ಬದಲ್ಲಿ ಕುಟುಂಬಸ್ಥರು ನೋಮಿದ ದಾರವನ್ನು ಕೈಗೆ ಕಟ್ಟಿಕೊಂಡಿದ್ದರು. ಮನೆ ಮನಬೆಳಗುವ ದೀಪದ ಬೆಳಕು ಎಲ್ಲೆಡೆ ಪಸರಿಸಬೇಕೆಂಬುವುದು ದೀಪಾವಳಿ ಹಬ್ಬದ ಸಂಕೇತವಾಗಿದ್ದು, ಪ್ರತಿ ಮನೆಯ ಬಾಗಿಲಿನಲ್ಲಿ ಸಂಜೆ ದೀಪ ಬೆಳಗಿದಿ ಭಕ್ತಿ ಭಾವದಿಂದ ಆಚರಿಸಲಾಯಿತು.

Advertisement

ಅದ್ದೂರಿ ಲಕ್ಷ್ಮೀ ಪೂಜೆ: ದೀಪಾವಳಿ ದಿನದಂತೆ ಲಕ್ಷ್ಮೀ ಹುಟ್ಟಿ ದ್ದಾಳೆಂಬ ಪ್ರತೀತಿ ಇದ್ದು, ಲಕ್ಷ್ಮೀದೇವಿಯನ್ನು ಪೂಜೆ ಮಾಡಿದರೆ, ಲಕ್ಷ್ಮೀ ಕಟಾಕ್ಷ ಇರುತ್ತದೆ ಎಂದು ಹಿರಿ ಯರು ಹೇಳುತ್ತಾರೆ. ದೀಪಾವಳಿ ದಿನವನ್ನು ಕೆಲವು ಪ್ರದೇಶಗಳಲ್ಲಿ ಕಾಳಿ ಚೌದಾಸ್‌, ಛೋಟಿ ದೀಪಾವಳಿ, ರೂಪ್‌ ಚತುರ್ದಶಿ ಅಥವಾ ರೂಪ್‌ ಚೌದಾಸ್‌ ಎಂದು ಕರೆಯುತ್ತಾರೆ. ಅನೇಕ ಕಡೆ ಲಕ್ಷ್ಮೀ ಪೂಜೆಯ ದಿನವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಮನೆಯ ಅಲಂಕಾರ ಮತ್ತು ದೀಪ ಬೆಳಗುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ.

ಹಿಂದಿನ ಕಾಲದಲ್ಲಿ ಮನೆಯಲ್ಲಿರುವ ಹಂಡೆ ಮತ್ತು ದೊಡ್ಡ ದೊಡ್ಡ ಪಾತ್ರೆಗಳಲ್ಲಿ ನೀರು ತುಂಬಿ ಇಡಲಾಗುತ್ತದೆ. ತ್ರಯೋದಶಿಯ ದಿನ ಸಂಜೆ ನೀರನ್ನು ತುಂಬುವ ಈ ಕಾರ್ಯಕ್ಕೆ ನೀರು ತುಂಬುವ ಹಬ್ಬ ಎಂದು ಕರೆಯುತ್ತಾರೆ. ಮನೆಯಲ್ಲಿ ಪ್ರತಿಯೊಂದು ಪಾತ್ರೆ ಗಳಲ್ಲಿ ನೀರು ತುಂಬಿ ಇಡುವುದರಿಂದ ಗಂಗಾ ದೇವಿ ಯನ್ನು ಮನೆಗೆ ಆಹ್ವಾನಿಸಿದಂತೆ, ಶುದ್ಧತೆಯ ಪ್ರತೀಕ ವಾದ ಗಂಗಾದೇವಿಯನ್ನು ಸಾಂಪ್ರದಾಯಿಕವಾಗಿ ಆಹ್ವಾನಿಸಲಾಗುತ್ತದೆ. ವಿಷ್ಣು ದೇವರ ಪಾದವನ್ನು ತೊಳೆಯುವುದರ ಮೂಲಕ ಶುದ್ಧತೆಯನ್ನು ಗಂಗಾದೇವಿ ಪಡೆದುಕೊಂಡಿದ್ದಾಳೆ ಎನ್ನುವ ಕಥೆಯಿದೆ ಎಂದು ಹಿರಿಯರು ಹೇಳುತ್ತಾರೆ.

ನಮ್ಮ ಹಿರಿಯರು, ಪೂರ್ವಿಕರು ಆಚರಿಸಿಕೊಂಡು ಬಂದಿರುವ ಹಬ್ಬಗಳನ್ನು ನಾವೆಲ್ಲರೂ ಮುಂದುವರಿಸಿ ಕೊಂಡು ಹೋಗಬೇಕು. ಪ್ರತಿವರ್ಷ ದೀಪಾವಳಿಯಲ್ಲಿನ ಪರ್ವತೇಶ್ವರ ದೇವಾಲಯದಲ್ಲಿ ಗೌರಿದೇವಿಯನ್ನು ಪ್ರತಿಷ್ಠಾಪಿಸಿ, ಗೌರಿದೇವಿಗೆ ಮಹಿಳೆಯರು ಪೂಜೆ ಮಾಡುವ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.-ವೀರಭದ್ರಯ್ಯ, ಅರ್ಚಕರು, ಪರ್ವತೇಶ್ವರ ದೇಗುಲ

Advertisement

Udayavani is now on Telegram. Click here to join our channel and stay updated with the latest news.

Next