ದೇವನಹಳ್ಳಿ: ಲಂಬಾಣಿಗರಿಗೆ ದೀಪಾವಳಿ ವಿಶೇಷ ಹಬ್ಬ. ಹೊಸ ವರ್ಷದ ಪ್ರಾರಂಭದ ಸಂಕೇತವಾಗಿದ್ದು ಜಿಲ್ಲೆಯ ಲಂಬಾಣಿ ತಾಂಡಾಗಳಲ್ಲಿ ಹಬ್ಬವನ್ನು ಶ್ರದ್ಧಾ ಭಕ್ತಿ-ಭಾವದಿಂದ ಆಚರಿಸಿದರು.
ಜಿಲ್ಲೆಯ ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ತಾಲೂಕುಗಳಲ್ಲಿ ಲಂಬಾಣಿ ತಾಂಡಾಗಳಿವೆ. ದೊಡ್ಡಬಳ್ಳಾಪುರತಾಲೂಕಿನಲ್ಲಿ 17, ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ತೂಬಗೆರೆ ಹೋಬಳಿ 6, ನೆಲಮಂಗಲ 4 ತಾಂಡಾ ಸೇರಿದಂತೆ ಒಟ್ಟು 27 ತಾಂಡಾ ಜಿಲ್ಲೆಯಲ್ಲಿವೆ.
ಕೋವಿಡ್ ಹಿನ್ನೆಲೆಯಲ್ಲಿ ತಾಂಡಾಗಳಲ್ಲಿ ಸರಳವಾಗಿ ಹಬ್ಬ ಆಚರಿಸಿದರು. ಕತ್ತಲಾಗುತ್ತಿದ್ದಂತೆ ಹೆಣ್ಣು ಮಕ್ಕಳು ಒಂಬತ್ತು ದಿನಗಳಿಂದ ಬೆಳೆಸಿದ್ದ ನವಧಾನ್ಯಗಳ ಪೈರು(ತೀಜ್) ಮತ್ತು ಮಣ್ಣಿನ ಹಣತೆ ಹಚ್ಚಿ ತಟ್ಟೆಯಲ್ಲಿ ಇಟ್ಟು ದೇವಾಲಯಗಳಿಗೆ ನಂತರ ಎಲ್ಲಾ ಮನೆಗಳಿಗೆ ತೆರಳಿ ಹೊಸ ವರ್ಷದ ಶುಭಾಷಯ ಕೋರುತ್ತಾರೆ. ಇಡೀ ರಾತ್ರಿ ಈ ಪ್ರಕ್ರಿಯೆ ಮುಗಿದ ನಂತರ ಹೆಣ್ಣು ಮಕ್ಕಳು ಮಾರನೇ ದಿನ ಹೊಸ ಉಡುಗೆಯೊಂದಿಗೆ ಪೈರುಗಳನ್ನು ಅಲಂಕರಿಸಿ ತಲೆ ಮೇಲೆ ಹೊತ್ತು ನೀರು ತುಂಬಿರುವ ಕೆರೆ ಕುಂಟೆಗಳಬಳಿ ತೆರಳಿಭಕ್ಷಿಸುಬಂದಹಣದಲ್ಲಿ ಪ್ರಸಾದ ಸಿದ್ಧಪಡಿಸಿ ಗಂಗಾಮಾತೆಗೆ ಪೂಜೆ ಸಲ್ಲಿಸಿ ವಿಸರ್ಜನೆ ಮಾಡುತ್ತಾರೆ.
ಸಮರ್ಪಣೆ: ಹತ್ತಾರು ತಲೆಮಾರಿನ ಅಜ್ಜಂದಿರ, ಅಜ್ಜಿಯರ, ದೊಡ್ಡಪ್ಪ, ಚಿಕ್ಕಪ್ಪಂದಿರ ಹೆಸರಿಗೂ ಪ್ರತ್ಯೇಕ ಸಿಹಿ ಖಾದ್ಯ, ತುಪ್ಪ ದೂಪ ಸಮರ್ಪಣೆ ಮಾಡುತ್ತಾರೆ. ಲಂಬಾಣಿಗರಲ್ಲಿ ದೀಪಾವಳಿಗೆ9ತ್ತು ದಿನ ಮೊದಲೇ ಹಬ್ಬದ ಸಿದ್ಧತೆ ನಡೆಯತ್ತದೆ. ಪ್ರತಿ ತಾಂಡಾದ ದೇವಾಲಯಗಳಲ್ಲಿ ಹೆಣ್ಣು ಮಕ್ಕಳು ನವಧಾನ್ಯಗಳನ್ನು ಬಿದಿರು ಬುಟ್ಟಿಯಲ್ಲಿ ಬಿತ್ತನೆ ಮಾಡಿ ಪೂಜೆ ಸಲ್ಲಿಸುತ್ತಾರೆ. ಉತ್ತರಕರ್ನಾಟಕದಹೈದರಾಬಾದ್,ಕರ್ನಾಟಕಪ್ರಾಂತ್ಯಗಳಲ್ಲಿ ಜೀವಂತವಿರುವ ಲಂಬಾಣಿ ವೇಷಭೂಷಣ ಬಯಲು ಸೀಮೆ ಹಾಗೂ ಹಳೇ ಮೈಸೂರು ಭಾಗಗಳಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಹರಪ್ಪ ಮತ್ತು ಮಹೆಂಜುದಾರೊಇತಿಹಾಸದ ಸಮಕಾಲಿನ ಬುಡಕಟ್ಟು ಜನಾಂಗದವರಾಗಿರುತ್ತಾರೆ ಎಂದು ಹಿರಿಯರಾದ ರಾಮನಾಯಕ್ ಹೇಳುತ್ತಾರೆ.
ದೀಪಾವಳಿ 9ನೇ ಅಂತಿಮ ದಿನದಂದು ವಿವಿಧ ಸಿಹಿ ಖಾದ್ಯಸಿದ್ಧಗೊಳಿಸುತ್ತಾರೆ. ದೇವಾಲಯದ ಆವರಣಗಳಲ್ಲಿ ತಾಂಡಾದ ನಾಯಕ್(ಯಜಮಾನ), ತೋಟಿ(ಡಾವ್), ತಳವಾರ(ಕಾರ್‌ಬಾರಿ) ಮನೆಯಂಗಳದಲ್ಲಿ ಹೂ ಚೆಲ್ಲುವುದು ಸಂಪ್ರದಾಯ. ನಂತರ ಕುಟುಂಬದ ಹಿರಿಯ ಮೃತರಾಗಿರುವವರಿಗೆ ದೂಪ(ದಬಕಾರ್)ಸಲ್ಲಿಸುವುದು ಮತ್ತು ಮೃತರ ಸಮಾಧಿಗಳಿಗೆ ಪೂಜೆ ನೈವೇದ್ಯ ನಡೆಸುವುದು ರೂಢಿ ಎಂದು ಹಿರಿಯರು ವಿವರಿಸುತ್ತಾರೆ.