Advertisement
ಉಡುಪಿ: ಆರೋಗ್ಯ ಸುಧಾರಣೆಗೂ ದೀಪಾವ ಳಿಗೂ ಎತ್ತಣಿಂದೆತ್ತ ಸಂಬಂಧವಯ್ಯ? ತಲೆಗೂದಲು ಉದುರುವುದನ್ನು ಗಂಭೀರವಾಗಿ ಪರಿಗಣಿಸುವುದರ ಹಿಂದೆ ಆರೋಗ್ಯ ಕಾಳಜಿಗಿಂತ ಸೌಂದರ್ಯ ಕಾಳಜಿ ಇದೆ. ಆರೋಗ್ಯ ಕಾಳಜಿಯೇ ಮುಖ್ಯ. ಆದರೆ ಸಾಮಾನ್ಯವಾಗಿ ಇದು ನಮಗೆ ಗೌಣ. ಕೂದಲು ಬಾಯಿ ಮೂಲಕ ಶರೀರದೊಳಗೆ ಹೋಗುವುದು ಅನಾರೋಗ್ಯವನ್ನು ತಂದೊಡ್ಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ.
ಕೂದಲು ಉದುರುವುದಕ್ಕೆ ಅನೇಕ ಕಾರಣ ಗಳಿರುತ್ತವೆ, ಮುಖ್ಯ ಕಾರಣ ದೇಹ ಉಷ್ಣವಾಗಿ ರುವುದು. ಕೂದಲು ಉದುರುವುದು ಒಂದು ಲಕ್ಷಣವಷ್ಟೆ. ದೇಹ ಉಷ್ಣವಾದರೆ ನಿದ್ರಾಹೀನತೆ, ನಿದ್ರೆ ಕಡಿಮೆಯಾದಾಗ ಬಿಪಿ, ಮಧುಮೇಹ ಹೀಗೆ ಒಂದಕ್ಕೊಂದು ಸರಣಿಯಂತೆ ಸಮಸ್ಯೆಗಳು ಬೆಳೆಯುತ್ತವೆ. ಇದು ಕೊನೆಯ ಹಂತದಲ್ಲಿರುವಾಗ ಚಿಕಿತ್ಸೆ ಬೇಕಾಗುತ್ತದೆ.
Related Articles
ಶರೀರಕ್ಕೆ ಉಷ್ಣವಾಗಿ ಕೂದಲು ಉದುರುವುದಕ್ಕೆ ಸೂಕ್ತ ಪರಿಹಾರವೆಂದರೆ ಕನಿಷ್ಠ ವಾರಕ್ಕೊಂದಾ ವರ್ತಿಯಾದರೂ ಎಣ್ಣೆ ಹಚ್ಚಿಕೊಂಡು (ಶುದ್ಧ ಎಳ್ಳೆಣ್ಣೆ /ತೆಂಗಿನೆಣ್ಣೆ) ಸ್ನಾನ ಮಾಡುವುದು ಎಂಬ ಸಲಹೆ ಆಯುರ್ವೇದ ವೈದ್ಯ ಡಾ| ಜಯರಾಮ ಭಟ್ ಅವರದು.
Advertisement
ಎಳ್ಳೆಣ್ಣೆ-ತೆಂಗಿನೆಣ್ಣೆವಾತ ಮತ್ತು ಪಿತ್ಥದ ಕಾರಣ ಕೂದಲು ಉದುರು ತ್ತದೆ. ಕಿಮೋಥೆರಪಿಯಿಂದಲೂ ಕೂದಲುಉದು ರುತ್ತದೆ. ಈಗೀಗ ವಿಶೇಷವಾಗಿ ಮಹಿಳೆಯರಲ್ಲಿ ವ್ಯಾಕ್ಸಿನ್, ಹೇರ್ ರಿಮೂವರ್ ಮೂಲಕ ಉದ್ದೇಶ ಪೂರ್ವಕವಾಗಿ ಕಾಲುಗಳ ಕೂದಲುಗಳನ್ನು ತೆಗೆ ಯುವ ಕ್ರಮ ಬಂದಿದೆ. ಇದು ಒಳ್ಳೆಯದಲ್ಲ. ಎಳ್ಳೆಣ್ಣೆ ವಾತಶಾಮಕವಾದರೆ ತೆಂಗಿನೆಣ್ಣೆ ಪಿತ್ಥ ಶಾಮಕವಾ ಗಿದೆ. ಉತ್ತರ ಭಾರತದಲ್ಲಿ ಸಾಸಿವೆ ಎಣ್ಣೆಗೆ ಮಹತ್ವ ಕೊಡುತ್ತಾರೆ. ಕೂದಲು ಉದುರುವುದಕ್ಕೆ ಎಣ್ಣೆ ಹಚ್ಚಿ ಸ್ನಾನ ಸುಲಭ ಮತ್ತು ಪರಿಣಾಮಕಾರಿ ಮಾರ್ಗ. ಕೂದಲು ಶರೀರದೊಳಗೆ ಹೋಗುವುದಕ್ಕಿಂತ ಕೂದಲು ಉದುರುವುದು ಹೆಚ್ಚು ಅಪಾಯ ಕಾರಿ ಎಂದು ಮಣಿಪಾಲ ಮುನಿಯಾಲು ಆಯು ರ್ವೇದ ಕಾಲೇಜಿನ ಪ್ರಾಂಶುಪಾಲ ಡಾ| ಬಿ. ಸತ್ಯನಾರಾಯಣ ಅವರು ಅಭಿಪ್ರಾಯಪಡುತ್ತಾರೆ. ದೀಪಾವಳಿ – ಸ್ನಾನದ ಆಚರಣೆ
ಈಗ ಮಧುಮೇಹ ದಿನ, ಅಪ್ಪಂದಿರ ದಿನ, ಅಮ್ಮಂದಿರ ದಿನ, ಸ್ವಾತಂತ್ರ್ಯ ದಿನ, ಏಡ್ಸ್ ದಿನ ಹೀಗೆ ಅನೇಕಾನೇಕ ದಿನಾಚರಣೆಗಳು ನಡೆಯುವಂತೆ ದೀಪಾವಳಿಯ ಹಬ್ಬದ ಸಂದರ್ಭ ಎಣ್ಣೆ ಸ್ನಾನ (ತೈಲಾಭ್ಯಂಗ) ಮಾಡುವ ಕ್ರಮ ಅನುಸರಿಸಲಾಗುತ್ತಿದೆ. ಎಲ್ಲ ದಿನಾಚರಣೆಗಳಂತೆ ಇದೊಂದು ಸಂಕೇತ ಮಾತ್ರ. ಸಾಧ್ಯವಾದರೆ ಎಲ್ಲ ದಿನವೂ ಎಣ್ಣೆ ಸ್ನಾನ ಮಾಡಿದರೆ ಉತ್ತಮ; ಇಲ್ಲವಾದರೆ ಅಪರೂಪದಲ್ಲಿಯಾದರೂ ಮಾಡಬೇಕು ಎಂಬ ಸಂದೇಶವಿರಿಸಿ ಕೊಂಡು ದೀಪಾವಳಿಯ ಎಣ್ಣೆ ಸ್ನಾನವನ್ನು ಹಿರಿಯರು ಜಾರಿಗೆ ತಂದಿರುವ ಸಾಧ್ಯತೆ ಹೆಚ್ಚು. ಕೂದಲು ಉದುರಿದ ಬಳಿಕ ಸಮಸ್ಯೆ ಬಗೆ ಹರಿಸುವುದಕ್ಕಿಂತ ಕೂದಲು ಉದುರದೆ ಇರುವಂತೆ ನೋಡಿಕೊಳ್ಳಲು ಎಣ್ಣೆ ಹಚ್ಚಿ ಸ್ನಾನ ಮಾಡುವುದು ಉತ್ತಮ. ಎಣ್ಣೆ ಹಚ್ಚುವಾಗಲೂ ಪಾದದಿಂದ ನೆತ್ತಿಯವರೆಗೆ ಹೆಚ್ಚಬೇಕೆಂಬ ಶಾಸ್ತ್ರೀಯ ಶಾಸನವೂ ಇದೆ. ಇದರರ್ಥ ದೇಹದ ಎಲ್ಲ ಭಾಗಗಳಿಗೂ ತೈಲದ ಅಗತ್ಯವಿದೆ. ದೇಹಾರೋಗ್ಯವನ್ನು ಸಮತೋಲನದಲ್ಲಿರಿಸುವ ಗುಣಧರ್ಮವನ್ನು ತೈಲ ಹೊಂದಿದೆ. ಧರ್ಮದ ಮೂಲಕ ಆರೋಗ್ಯ ಸೂತ್ರವನ್ನೋ ಅಥವಾ ಆರೋಗ್ಯದ ಮೂಲಕ ಧರ್ಮಸೂತ್ರವನ್ನೋ ಹಿರಿಯರು ಕೊಟ್ಟಂತಿದೆ.