Advertisement

ಸಂಸತ್‌ನಲ್ಲೂ ಪ್ರತಿಧ್ವನಿಸಿದ ದೀಪಕ್‌ ರಾವ್‌ ಹತ್ಯೆ ಪ್ರಕರಣ

06:15 AM Jan 05, 2018 | Team Udayavani |

ಹೊಸದಿಲ್ಲಿ /ಬೆಂಗಳೂರು: ದೀಪಕ್‌ ರಾವ್‌ ಹತ್ಯೆ ಪ್ರಕರಣ ಮಂಗಳೂರಿನಿಂದ ದಿಲ್ಲಿಯವರೆಗೂ ಸದ್ದು ಮಾಡಿದ್ದು, ಸಂಸತ್‌ನಲ್ಲೂ ಚರ್ಚೆಗೆ ಕಾರಣವಾಗಿದೆ. ಇತ್ತ ಹಿಂದೂ ಕಾರ್ಯಕರ್ತರ ವಿರೋಧದ ನಡುವೆಯೂ ಸುರತ್ಕಲ್‌ನಲ್ಲಿ ದೀಪಕ್‌ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆದಿದೆ.

Advertisement

ದೀಪಕ್‌ ಹತ್ಯೆಗೆ ಪಿಎಫ್ಐ ಸಂಘಟನೆಯೇ ಕಾರಣವಾಗಿದ್ದು, ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಒಪ್ಪಿಸಬೇಕು ಎಂದು ಬಿಜೆಪಿ ಸಂಸದರು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಇದಷ್ಟೇ ಅಲ್ಲ, ಸಂಸತ್‌ ಭವನದ ಎದುರಿನ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಕರ್ನಾಟಕದಲ್ಲಿನ ಎಲ್ಲ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕೊಲೆ ಪ್ರಕರಣಗಳನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕು ಎಂದೂ ಆಗ್ರಹಿಸಿದ್ದಾರೆ.

ಬಿಜೆಪಿ ನಾಯಕರ ಆರೋಪಗಳಿಗೆ ತಿರುಗೇಟು ನೀಡಿರುವ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಕೋಮು ಸಂಘರ್ಷ ಹಾಗೂ ಹತ್ಯೆಯಂಥ ಘಟನೆ ಗಳಿಗೆ ಕಾರಣವಾಗಿರುವ ಎಲ್ಲ ಸಂಘಟನೆಗಳನ್ನೂ ಕೇಂದ್ರ ಸರಕಾರ ನಿಷೇಧಿಸಲಿ ಎಂದು ಹೇಳಿದ್ದಾರೆ. ಈ ನಡುವೆ, ಪಿಎಫ್ಐ ಮತ್ತು ಬಜರಂಗ ದಳ, ಆರ್‌ಎಸ್‌ಎಸ್‌ ನಡುವಿನ ಸಂಘರ್ಷ ವಿಚಾರದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳದ ಗುಪ್ತದಳದ ಬಗ್ಗೆ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಮಧ್ಯೆ, ಲೋಕಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಸಂಸದ ಪ್ರಹ್ಲಾದ್‌ ಜೋಷಿ, “ರಾಜ್ಯದಲ್ಲಿ ಸುಮಾರು 20 ರಾಜಕೀಯ ಹತ್ಯೆಗಳು ನಡೆದಿದ್ದು, ಕೆಲವು ಪ್ರಕರಣಗಳಲ್ಲಿ ಪಿಎಫ್ಐ ಸಂಘಟನೆಯ ಸದಸ್ಯರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್‌ ಹಾಕಿದೆ. ಆದರೂ ಸರಕಾರ ಈ ಕಾರ್ಯಕರ್ತರ ಮೇಲಿನ ಕೇಸು ವಾಪಸ್‌ ಪಡೆದಿದೆ ಎಂದು ಆರೋಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next