Advertisement

ಐಪಿಎಲ್ 2020: ಕೋವಿಡ್ ನೆಗೆಟಿವ್ ಹಿನ್ನಲೆ ಚೆನ್ನೈ ಕ್ಯಾಂಪ್ ಗೆ ಮರಳಿದ ದೀಪಕ್ ಚಾಹರ್

07:52 AM Sep 10, 2020 | keerthan |

ದುಬೈ: ಕೋವಿಡ-19 ಪಾಸಿಟಿವ್ ಆಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗಿ ದೀಪಕ್ ಚಾಹರ್ ಇದೀಗ ಸಿಎಸ್ ಕೆ ಕ್ಯಾಂಪ್ ಗೆ ಮರಳಿದ್ದಾರೆ. ಎರಡು ಬಾರಿಯ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಕಾರಣ ಚಾಹರ್ ತಂಡದ ಹೋಟೆಲ್ ಗೆ ಬಂದಿದ್ದಾರೆ.

Advertisement

ದೀಪಕ್ ಚಾಹರ್ ಸೇರಿ ಚೆನ್ನೈ ತಂಡದ 13 ಮಂದಿ ಸದಸ್ಯರಿಗೆ ಕೋವಿಡ್ ಪಾಸಿಟಿವ್ ಆಗಿತ್ತು. ಇದರಿಂದ ಇವರೆಲ್ಲಾ ತಂಡದಿಂದ ಹೊರಗಿದ್ದು ಪ್ರತ್ಯೇಕವಾಗಿದ್ದರು. ಇದರಿಂದಾಗಿ ಸಿಎಸ್ ಕೆ ತಂಡದ ಕ್ವಾರಂಟೈನ್ ಅವಧಿ ಹೆಚ್ಚಿಸಲಾಗಿತ್ತು.

ಸದ್ಯ ದೀಪಕ್ ಚಾಹರ್ ಎರಡು ಬಾರಿಯ ಕೋವಿಡ್ ಟೆಸ್ಟ್ ನಲ್ಲಿ ನೆಗೆಟಿವ್ ವರದಿ ಬಂದಿದ್ದ ಕಾರಣ ಅವರು ಬಯೋ ಬಬಲ್ ಪ್ರವೇಶಿಸಿದ್ದಾರೆ. ಈ ಮಾಹಿತಿಯನ್ನು ಸಿಎಸ್ ಕೆ ತಂಡದ ಸಿಇಓ ವಿಶ್ವನಾಥನ್ ಹೇಳಿದ್ದಾರೆ. ನಾಲ್ಕೈದು ದಿನಗಳ ನಂತರ ಚಾಹರ್ ಟ್ರೈನಿಂಗ್ ಗೆ ತಂಡದ ಜೊತೆ ಸೇರಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಸೆಪ್ಟೆಂಬರ್ 19ರಂದು ಐಪಿಎಲ್ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಮತ್ತು ಮುಂಬೈ ತಂಡಗಳು ಮುಖಾಮುಖಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next