Advertisement

ಸದ್ಯದಲ್ಲೇ ದೀಪಾ ಪುಸ್ತಕ ಬಿಡುಗಡೆ

06:25 AM Dec 06, 2018 | |

ಹೊಸದಿಲ್ಲಿ: 2016 ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲದಿದ್ದರೂ ಭಾರತೀಯರ ಹೃದಯ ಗೆದ್ದ ಜಿಮ್ನಾಸ್ಟಿಕ್‌ ತಾರೆ ದೀಪಾ ಕರ್ಮಾಕರ್‌ ಕುರಿತಾದ ಪುಸ್ತಕವೊಂದು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ.

Advertisement

“ದೀಪಾ ಕರ್ಮಾಕರ್‌: ದ ಸ್ಮಾಲ್‌ ವಂಡರ್‌’ ಎಂಬ ಹೆಸರಿನ ಈ ಪುಸ್ತಕ 276 ಪುಟಗಳನ್ನು ಹೊಂದಿದೆ. ಇದನ್ನು ದೀಪಾ ಆವರ ಕೋಚ್‌ ಬಿಶ್ವೇಶ್ವರ್‌ ನಂದಿ, ಪತ್ರಕರ್ತರಾದ ದಿಗ್ವಿಜಯ್‌ ಸಿಂಗ್‌ ದೇವ್‌ ಹಾಗೂ ವಿಮಲ್‌ ಮೋಹನ್‌ ರಚಿಸಿದ್ದಾರೆ.

ಇದೇ ತಿಂಗಳಲ್ಲಿ ಭಾರತದ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಈ  ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಬಿಶ್ವೇಶ್ವರ್‌ ನಂದಿ ಈ ಪುಸ್ತಕದಲ್ಲಿ ದೀಪಾ ಕರ್ಮಾಕರ್‌ ಜೀವನದ ಕುರಿತು ಮಾತ್ರವಲ್ಲದೆ ಜಿಮ್ನಾಸ್ಟಿಕ್‌ನ ಪ್ರೊಡನೋವಾ ವಿಭಾಗವನ್ನು “ಸಾವಿನ ವಾಲ್ಟ್’ ಎಂದು ಏಕೆ ಕರೆಯುತ್ತಾರೆ ಎಂಬ ವಿಚಾರದ ಕುರಿತಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next