Advertisement
ದ.ಕ. ಜಿಲ್ಲೆಯಲ್ಲಿ 2021-22ನೇ ಸಾಲಿನಲ್ಲಿ ಅನುಷ್ಠಾನಗೊಂಡಿರುವ ಹಲವಾರು ಯೋಜನೆಗಳು, ಆಗಿರುವ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಧಾನಿ ಮೋದಿ ಅವರು ಎ. 24ರಂದು ಪಂಚಾಯತ್ ರಾಜ್ ದಿನದಂದು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.2021 ಮಾರ್ಚ್‌ನಿಂದ 2022ರ ಮಾರ್ಚ್‌ವರೆಗೆ ಸ್ವತ್ಛ ಭಾರತ್, ನರೇಗಾ ಯೋಜನೆ, ಕುಡಿಯುವ ನೀರು ಯೋಜನೆ, ತೆರಿಗೆ ಸಂಗ್ರಹ, ಅಭಿವೃದ್ಧಿ ಅನುದಾನ, 15ನೇ ಹಣಕಾಸು ಬಳಕೆ, ಡಿಜಿಟಲ್ ಲೈಬ್ರೆರಿ ಮೊದಲಾದವುಗಳಲ್ಲಿ ನಡೆದಿರುವ ಸಮಗ್ರ ಪ್ರಗತಿಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ. ದ.ಕ. ಜಿ.ಪಂ. ವಿನೂತನ ಯೋಜನೆಗಳಾದ ಪುಸ್ತಕ ಗೂಡು, ಪೌಷ್ಟಿಕ ಕೈತೋಟ ಮೊದಲಾದವುಗಳನ್ನು ಕೂಡ ಅನುಷ್ಠಾನಗೊಳಿಸಿದೆ.
ಉಳ್ಳಾಲ: ದೀನ್‌ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತಿಕರಣ ಪುರಸ್ಕಾರಕ್ಕೆ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾ.ಪಂ. ಆಯ್ಕೆಯಾಗಿದೆ.
2020-21ನೇ ಸಾಲಿನಲ್ಲಿ ಮುನ್ನೂರು ಗ್ರಾ.ಪಂ. ಮಾಡಿರುವ ಉತ್ತಮ ಕಾರ್ಯಗಳನ್ನು ಗುರುತಿಸಿ ಮತ್ತು ನವೀನ ಯೋಜನೆಗಳ ಅನುಷ್ಠಾನ ಸಹಿತ ಎಲ್ಲ ನಿಯತಾಂಕಗಳಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುವ ಗ್ರಾಮ ಎಂದು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪಂಚಾಯತ್ ಸದಸ್ಯರು, ಸಿಬಂದಿಯ ಕಾರ್ಯನಿರ್ವಹಣೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಹಿತ ಗ್ರಾಮದ ಜನರ ಸಹಕಾರದಿಂದ ಈ ಪ್ರಶಸ್ತಿಯನ್ನು ಪಡೆಯಲು ಸಾದ್ಯವಾಗಿದೆ ಎಂದು ಪಂಚಾಯತ್ ಅಧ್ಯಕ್ಷ ವಿಲ್ಫ್ರೆಡ್ ಡಿ’ಸೋಜಾ ಮತ್ತು ಪಿಡಿಒ ರವೀಂದ್ರ ರಾಜೀವ ನಾಯ್ಕ ತಿಳಿಸಿದ್ದಾರೆ. ಮುನ್ನೂರು ಗ್ರಾ.ಪಂ. ಸಹಿತ ರಾಜ್ಯದಿಂದ ಮೂರು ಗ್ರಾ.ಪಂ.ಗಳು ಈ ಪ್ರಶಸ್ತಿಗೆ ಆಯ್ಕೆಯಾಗಿವೆ. ಸುಳ್ಯ ತಾ.ಪಂ.ಗೆ ಪ್ರಶಸ್ತಿ
ಸುಳ್ಯ: 2020-21ನೇ ಸಾಲಿನ ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪುರಸ್ಕಾರಕ್ಕೆ ಸುಳ್ಯ ತಾಲೂಕು ಪಂಚಾಯತ್ ಆಯ್ಕೆಯಾಗಿದೆ.
ರಾಜ್ಯದ ಎರಡು ತಾ.ಪಂ.ಗಳು ಈ ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಸುಳ್ಯ ತಾ.ಪಂ.ನ ಎಲ್ಲ ರೀತಿಯ ಕಾರ್ಯಚಟುವಟಿಕೆ, ಕೆಲಸ, ನಿರ್ವಹಣೆ ಸಹಿತ ಸರ್ವ ವಿಧದ ಕಾರ್ಯಕ್ರಮಗಳನ್ನು ಒಟ್ಟು ಸೇರಿಸಿ ಪಡೆದ ಅಂಕದ ಮೇಲೆ ಈ ಪುರಸ್ಕಾರಕ್ಕೆ ಆಯ್ಕೆ ನಡೆದಿದೆ.