Advertisement

ಹಳ್ಳಿಹೊಳೆ -ಕಮಲಶಿಲೆ ರಸ್ತೆ ವಿಸ್ತರಣೆಗೆ ಡೀಮ್ಡ್ ಫಾರೆಸ್ಟ್‌ ಅಡ್ಡಿ

11:01 PM Feb 08, 2020 | Sriram |

ಹಳ್ಳಿಹೊಳೆ: ಕಮಲಶಿಲೆಯಿಂದ ಹಳ್ಳಿಹೊಳೆ ಮೂಲಕವಾಗಿ ಕೊಲ್ಲೂರಿಗೆ ಸಂಪರ್ಕಿಸುವ ಮುಖ್ಯ ರಸ್ತೆಯ ವಿಸ್ತರಣೆ ಕಾಮಗಾರಿ ಈಗ ಆರಂಭಗೊಂಡಿದೆ. ಆದರೆ 6 ಕಿ.ಮೀ. ಉದ್ದದ ಕಮಶಿಲೆ – ಹಳ್ಳಿಹೊಳೆ ರಸ್ತೆಯ ಕೇವಲ 2.5 ಕಿ.ಮೀ.ವರೆಗೆ ಮಾತ್ರ ವಿಸ್ತರಣೆ ಮಾಡಲು ಅನುಮತಿ ಸಿಕ್ಕಿದೆ. ಉಳಿದ ಕಡೆಗೆ ಅಗಲೀಕರಣಕ್ಕೆ ಡೀಮ್ಡ್ ಫಾರೆಸ್ಟ್‌ ಅಡ್ಡಿಯಾಗಿದೆ.

Advertisement

ಹಳ್ಳಿಹೊಳೆ – ಕಮಲಶಿಲೆ 6 ಕಿ.ಮೀ. ಉದ್ದದ ಮುಖ್ಯ ರಸ್ತೆಯ ವಿಸ್ತರಣೆಗೆ ಮುಖ್ಯಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಅವರ ಮುತುವರ್ಜಿಯಲ್ಲಿ 1.40 ಕೋ.ರೂ. ಅನುದಾನ ಮಂಜೂರಾಗಿದೆ. ಗುರುವಾರದಿಂದ ಕಾಮಗಾರಿ ಕೂಡ ಆರಂಭಗೊಂಡಿದೆ. ಆದರೆ ಇದರಲ್ಲಿ ಅಲ್ಲಲ್ಲಿ ಒಟ್ಟು 2.5 ಕಿ.ಮೀ. ವಿಸ್ತರಣೆಯಾಗಿದೆ.

ಅಪಾಯಕಾರಿ ತಿರುವು
ಕಮಲಶಿಲೆಯಿಂದ ಹಳ್ಳಿಹೊಳೆಯವರೆ ಗಿನ ಸುಮಾರು 6 ಕಿ.ಮೀ.ವರೆಗಿನ ರಸ್ತೆಯಲ್ಲಿ ಕನಿಷ್ಠ 5-6 ಅಪಾಯಕಾರಿ ತಿರುವುಗಳಿವೆ. ಇದು ಕಿರಿದಾದ ರಸ್ತೆಯಾಗಿದ್ದು, ಬಸ್‌ ಮತ್ತಿತರ ಘನ ವಾಹನಗಳು ಬಂದಲ್ಲಿ ಇತರ ವಾಹನಗಳು ರಸ್ತೆಯಿಂದ ಕೆಳಗಿಳಿಯಲೇಬೇಕಾಗಿದೆ. ರಸ್ತೆಯ ಅಂಚುಗಳು ಮಳೆಗೆ ಹಾನಿಯಾಗಿರುವುದರಿಂದ ರಸ್ತೆಯಿಂದ ಕೆಳಗೆ ವಾಹನವನ್ನು ಇಳಿಸುವುದು ಕೂಡ ಅಪಾಯಕಾರಿ ಯಾಗಿದೆ. ಇನ್ನೂ ಈ ಮಾರ್ಗವಾಗಿ ಪ್ರತಿ ದಿನ ಹತ್ತಾರು ಟ್ರಿಪ್‌ಗ್ಳಲ್ಲಿ ಸರಕಾರಿ ಹಾಗೂ ಖಾಸಗಿ ಬಸ್‌ಗಳು ಸಂಚರಿಸುತ್ತವೆ. ಕಮಲಶಿಲೆಯಿಂದ ಕೊಲ್ಲೂರಿಗೆ ಯಾತ್ರಾರ್ಥಿಗಳ ನೂರಾರು ವಾಹನಗಳು ಸಂಚರಿಸುತ್ತವೆ.

ಹಲವು ವರ್ಷಗಳ ಬೇಡಿಕೆ
ಈ ರಸ್ತೆಯ ವಿಸ್ತರಣೆ ಮಾಡಬೇಕು ಎನ್ನು ವುದು ಈ ಭಾಗದ ಜನರ ಬಹು ವರ್ಷಗಳ ಬೇಡಿಕೆಯಾಗಿದೆ. ಪ್ರತಿ ನಿತ್ಯ ಹತ್ತಾರು ಬಸ್‌, ಇತರೆ ವಾಹನಗಳು ಸಂಚರಿಸುವುದರಿಂದ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು ಎನ್ನುವ ಬಗ್ಗೆ ಸ್ಥಳೀಯರು ಒತ್ತಾಯಿಸು ತ್ತಲೇ ಬಂದಿದ್ದಾರೆ. ಈಗ ಬೇಡಿಕೆ ಈಡೇರುತ್ತಿದ್ದರೂ, ಡೀಮ್ಡ್ ಫಾರೆಸ್ಟ್‌ ಮಾತ್ರ ಈ ರಸ್ತೆಯ ಸಂಪೂರ್ಣ ವಿಸ್ತರಣೆಗೆ ಅಡ್ಡಿಯಾಗಿದೆ.

ಕಾಮಗಾರಿಗೆ ಚಾಲನೆ
ಸಿದ್ದಾಪುರದಿಂದ ಹಳ್ಳಿಹೊಳೆಗೆ ಸಂಚರಿಸುವ ಈ ರಸ್ತೆಯನ್ನು 1.40 ಕೋ.ರೂ. ವೆಚ್ಚದಲ್ಲಿ ವಿಸ್ತರಣೆಗೊಳಿಸುವ ಕಾಮಗಾರಿಗೆ ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿಯವರು ಫೆ. 5 ರಂದು ಗುದ್ದಲಿಪೂಜೆ ನೆರವೇರಿಸಿದ್ದರು.

Advertisement

12 ಕಿ.ಮೀ. ಹತ್ತಿರದ ಮಾರ್ಗ
ಸಿದ್ದಾಪುರದಿಂದ ಕಮಲಶಿಲೆ, ಹಳ್ಳಿಹೊಳೆ, ಮುದೂರು, ಸೆಳ್ಕೊàಡು, ಜಡ್ಕಲ್‌ ಮೂಲಕವಾಗಿ ಕೊಲ್ಲೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಈ ಮಾರ್ಗವಾಗಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಅದರಲ್ಲೂ ಪ್ರಸಿದ್ಧ ಯಾತ್ರಾ ಕ್ಷೇತ್ರಗಳಾದ ಕೊಲ್ಲೂರು ಹಾಗೂ ಕಮಲಶಿಲೆಯನ್ನು ಸಂಪರ್ಕಿಸುವ ಹತ್ತಿರದ ಮಾರ್ಗವೂ ಇದಾಗಿದೆ. ಕಮಲಶಿಲೆಯಿಂದ ಹಳ್ಳಿಹೊಳೆ ಮೂಲಕವಾಗಿ ಕೊಲ್ಲೂರಿಗೆ 35 ಕಿ.ಮೀ. ಅಂತರವಿದ್ದರೆ, ಕಮಲಶಿಲೆಯಿಂದ ಆಜ್ರಿ, ನೇರಳಕಟ್ಟೆ, ನೆಂಪು ಮೂಲಕವಾಗಿ ಕೊಲ್ಲೂರಿಗೆ 47 ಕಿ.ಮೀ. ದೂರವಾಗುತ್ತದೆ. ಇದರಿಂದ ಈ ಮಾರ್ಗವಾಗಿ 12 ಕಿ.ಮೀ. ಹತ್ತಿರವಾಗುತ್ತದೆ.

ವಿಸ್ತರಣೆಗೆ ಅಗತ್ಯ
ಕಮಲಶಿಲೆಯಿಂದ ಹಳ್ಳಿಹೊಳೆಗೆ ಸಂಚರಿಸುವ ಈ ರಸ್ತೆಯಲ್ಲಿ ಪ್ರತಿನಿತ್ಯ ಬಸ್‌ಗಳು, ಇತರೆ ಘನ ವಾಹನಗಳು ಸಂಚರಿಸುತ್ತಿದ್ದು, ವಿಸ್ತರಣೆಗೆ ಹಲವು ಸಮಯಗಳಿಂದ ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೆ ಈಗ ವಿಸ್ತರಣೆಗೆ ಅನುದಾನ ಮಂಜೂರಾಗಿದ್ದರೂ, ಡೀಮ್ಡ್ ಫಾರೆಸ್ಟ್‌ ನಿಯಮದಿಂದಾಗಿ ಪೂರ್ಣ 6 ಕಿ.ಮೀ. ಅಗಲೀಕರಣಕ್ಕೆ ಸಮಸ್ಯೆಯಾಗಿದೆ. ಈ ರಸ್ತೆಯ ಮಹತ್ವವನ್ನು ಅರಿತುಕೊಂಡು ಅರಣ್ಯ ಇಲಾಖೆಯಿಂದ ಅನುಮತಿ ಸಿಗುವಂತಾಗಲಿ.
-ನಾಗರಾಜ ಮಿತ್ಯಂತ,ಕಮಲಶಿಲೆ, ಸ್ಥಳೀಯರು

ಕಮಲಶಿಲೆ – ಹಳ್ಳಿಹೊಳೆ ರಸ್ತೆ ವಿಸ್ತರಣೆಗೆ ಅನುದಾನ ಮಂಜೂರಾಗಿದ್ದು, ಆದರೆ ಪೂರ್ಣ 6 ಕಿ.ಮೀ. ವಿಸ್ತರಣೆ ಮಾಡಲು ಡೀಮ್ಡ್ ಫಾರೆಸ್ಟ್‌ ನಿಯಮ ಅಡ್ಡಿಯಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ಅರಣ್ಯ ಇಲಾಖೆಗೆ ಅನುಮತಿ ಕೋರಿ ಪತ್ರ ಬರೆಯಲಾಗುವುದು.
-ದುರ್ಗಾದಾಸ್‌, ಸಹಾಯಕ ಕಾರ್ಯನಿರ್ವಾಹಕ
ಇಂಜಿನಿಯರ್‌, ಲೋಕೋಪಯೋಗಿ ಇಲಾಖೆ

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next