Advertisement
ಏಕೆಂದರೆ, ಅಂದು ಆ ಮಾರ್ಗದಲ್ಲಿ ಚಿತ್ರಸಂತೆ ನಡೆಯಲಿದೆ. ಹೆಸರೇ ಸೂಚಿಸುವಂತೆ ಅದು ಚಿತ್ರಸಂತೆ. ಅಲ್ಲಿ ದೇಶದ ನಾನಾ ಭಾಗಗಳಿಂದ ಆಗಮಿಸಿದ ಸಾವಿರಕ್ಕೂ ಅಧಿಕ ಕಲಾವಿದರು ಏಕಕಾಲದಲ್ಲಿ ಬೀದಿಗಿಳಿದು ಕುಂಚದಲ್ಲಿ ಚಿತ್ತಾರ ಬರೆಯಲಿದ್ದಾರೆ. ಆ ಮೂಲಕ ಬೆಂಗಳೂರಿನ ಬೀದಿಯನ್ನು ಬಣ್ಣಗಳಲ್ಲದ್ದಿ ತೆಗೆಯಲಿದ್ದಾರೆ.
Related Articles
Advertisement
ಈ ಬಾರಿ ಪ್ರವಾಸೋದ್ಯಮ ಇಲಾಖೆ ಕೂಡ ಕೈಜೋಡಿಸಿದ್ದು, ಇದರಡಿ ಈಗಾಗಲೇ 30 ಜನ ಕಲಾವಿದರು ರಾಜ್ಯದ ಐತಿಹಾಸಿಕ ಮತ್ತು ಪಾರಂಪರಿಕ ತಾಣಗಳಿಗೆ ಭೇಟಿ ನೀಡಿದ್ದು, ಅಲ್ಲಿನ ಚಿತ್ರಣವನ್ನು ಸಂತೆಯಲ್ಲಿ ಕಟ್ಟಿಕೊಡಲಿದ್ದಾರೆ. ಈ ಚಿತ್ರಗಳ ಪ್ರದರ್ಶನ ಕುಮಾರಕೃಪಾ ಅತಿಥಿಗೃಹದ ಆವರಣದಲ್ಲಿ ಕಾಣಬಹುದು. ಗಾಂಧಿ ಭವನ ರಸ್ತೆ, ಕ್ರೆಸೆಂಟ್ ರಸ್ತೆ, ಕುಮಾರಕೃಪಾ ರಸ್ತೆ ಅಂದು ಸಂಪೂರ್ಣ ಸಿಸಿಟಿವಿ ಕಣ್ಗಾವಲಿನಲ್ಲಿ ಇರಲಿದೆ. ಆ ಮಾರ್ಗದಲ್ಲಿ ಸಂಚರಿಸುವ ಬಸ್ ಮತ್ತಿತರ ವಾಹನಗಳು ಪರ್ಯಾಯ ರಸ್ತೆಗಳ ಮೂಲಕ ಕಾರ್ಯಾಚರಣೆ ಮಾಡಲಿವೆ. ಆಹಾರ ಮಳಿಗೆಗಳ ಸಂಖ್ಯೆ ಹೆಚ್ಚಿಸಲಾಗಿದ್ದು, ಕಿರುಧಾನ್ಯಗಳ ಆಹಾರ ಕೂಡ ಬಾಯಲ್ಲಿ ನೀರೂರಿಸಲಿದೆ.
ಈ ಮಧ್ಯೆ ಚಿತ್ರಕಲಾ ಸಮ್ಮಾನ್ ಪ್ರಶಸ್ತಿಗೆ ನಾಲ್ವರು ಕಲಾವಿದರನ್ನು ಪರಿಗಣಿಸಿದ್ದು, ಎಚ್.ಕೆ. ಕೇಜ್ರಿವಾಲ್ ಪ್ರಶಸ್ತಿಗೆ ಎಚ್.ಎನ್. ಸುರೇಶ್, ಎಂ.ಆಯಮೂರ್ತಿ ಪ್ರಶಸ್ತಿಗೆ ಎಸ್. ಕೃಷ್ಣಪ್ಪ, ಡಿ. ದೇವರಾಜ ಅರಸು ಪ್ರಶಸ್ತಿಗೆ ಗಣೇಶ್ ಸೋಮಯಾಜಿ ಮತ್ತು ವೈ. ಸುಬ್ರಮಣ್ಯರಾಜು ಪ್ರಶಸ್ತಿಗೆ ವಿಜಯ ಹಾಗರಗುಂಡಗಿ ಅವರು ಆಯ್ಕೆ ಯಾಗಿದ್ದಾರೆ. ಶನಿವಾರ (ಜ. 4) ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಅದೇ ರೀತಿ, ಚಿತ್ರಕಲಾ ಪರಿಷತ್ತಿನ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ಎಸ್. ನಂಜುಂಡರಾವ್ ಪ್ರಶಸ್ತಿಗೆ ಹಿರಿಯ ಕಲಾವಿದ ಆರ್.ಬಿ. ಭಾಸ್ಕರನ್ ಭಾಜನರಾಗಿದ್ದಾರೆ. ಒಂದು ಲಕ್ಷ ನಗದು ಮತ್ತು ಫಲಕವನ್ನು ಇದು ಒಳಗೊಂಡಿದೆ.
ಹಳೆ-ಹೊಸತರ ಸಮ್ಮಿಲನ: ಈ ಸಲದ ಚಿತ್ರಸಂತೆಯು 60ರ ದಶಕದಿಂದ ಈವರೆಗಿನ ಬೆಂಗಳೂರಿನ ಚಿತ್ರಣವನ್ನೂ ಕಟ್ಟಿಕೊಡಲಿದೆ. 1960ರ ಆಸುಪಾಸು ಬೆಂಗಳೂರು ಹೇಗಿತ್ತು? ನಂತರದಲ್ಲಿ ಹೇಗೆ ಬೆಳೆಯಿತು? ಇಂದು ಆ ಜಾಗಗಳಲ್ಲಿ ಏನೇನು ತಲೆಯೆತ್ತಿವೆ? ಅಂದಿನ ಲಾಲ್‌ಬಾಗ್, ಕಬ್ಬನ್ ಉದ್ಯಾನ ಹೇಗಿತ್ತು? ಹೀಗೆ ಹಳೆ ಮತ್ತು ಹೊಸ ಬೆಂಗಳೂರಿನ ಸಮಾಗಮ ಚಿತ್ರಗಳ ರೂಪದಲ್ಲಿ ಆಗಲಿದೆ ಎಂದು ಬಿ.ಎಲ್. ಶಂಕರ್ ತಿಳಿಸಿದರು.