ಭೈರಂಜೆ (ಹೆಬ್ರಿ): ಗ್ರಾಮ ದೇವರನ್ನು ಶ್ರದ್ಧೆ, ಭಕ್ತಿಯಿಂದ ದರ್ಶನ ಮಾಡಿದರೆ ಆರೋಗ್ಯ, ಸಕಲ ಸೌಭಾಗ್ಯಗಳು ದೊರೆಯುತ್ತವೆ. ಪುರಾತನ ಇತಿಹಾಸವನ್ನು ಹೊಂದಿರುವ ಭೈರಂಜೆ ಶ್ರೀ ಭವಾನಿಶಂಕರ ದೇವ ಸ್ಥಾನ ಅತ್ಯದ್ಭುತ ಕೆತ್ತನೆಗಳ ಮೂಲಕ ನಿರ್ಮಾಣವಾಗಿದೆ. ಅತ್ಯಂತ ಸೌಂದರ್ಯುತವಾಗಿ ದೇವಸ್ಥಾನದ ರಚನೆ ಯಾಗಿದ್ದು ಅದರ ರಕ್ಷಣೆ ಪ್ರತಿಯೊಬ್ಬ ಭಕ್ತನ ಕರ್ತವ್ಯವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಆ.29ರಂದು ಇತ್ತೀಚೆಗೆ ಬ್ರಹ್ಮಕಲಶೋತ್ಸವ ಸಂಭ್ರಮವನ್ನು ಕಂಡ ಉಡುಪಿ ತಾಲೂಕು ಅಂಜಾರು ಗ್ರಾಮದ ಭೈರಂಜೆ ಶ್ರೀ ಭವಾನಿ ಶಂಕರ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ವತಿಯಿಂದ ಗೌರವ ಸ್ವೀಕರಿಸಿ ಮಾತ ನಾಡಿದರು.
ದೇವಸ್ಥಾನಕ್ಕೆ ಸಭಾಭವನ: ಅತ್ಯ ದ್ಭುತವಾಗಿ ರೂಪುಗೊಂಡಿರುವ ದೇವಸ್ಥಾನಕ್ಕೆ ಆಗಮಿಸಲು ಭಕ್ತರಿಗೆ ಅನುಕೂಲವಾಗುವಂತೆ ವಿಶಾಲ ರಸ್ತೆ, ಸಭಾಭವನ ನಿರ್ಮಿಸಲು ಸರಕಾರದ ವತಿ ಯಿಂದ ಅನುದಾನವನ್ನು ಒದಗಿಸುವ ಪ್ರಯತ್ನವನ್ನು ಮಾಡುತ್ತೇನೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಪು ಕ್ಷೇತ್ರದ ಶಾಸಕ ವಿನಯ ಕುಮಾರ್ ಸೊರಕೆ ಹೇಳಿದರು.
ದೇವಸ್ಥಾನಕ್ಕೆ ಆಗಮಿಸಿದ ಹೆಗ್ಗಡೆಯವರನ್ನು ಭವ್ಯ ಮೆರವಣಿಗೆ, ಪೂರ್ಣ ಕುಂಭ ಸ್ವಾಗತದೊಂದಿಗೆ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಗೋವರ್ಧನದಾಸ್ ಹೆಗ್ಡೆ, ಉದ್ಯಮಿ ಜಗದೀಶ್ ನಾಯಕ್, ದೇವಸ್ಥಾನದ ನೆಲ್ಲಿಕಟ್ಟೆ ಶ್ರೀಧರ ಭಟ್, ಜೀಣೋದ್ಧಾರ ಸಮಿತಿಯ ಅಧ್ಯಕ್ಷ ಉದಯ ನಾಯಕ್, ಅಧ್ಯಕ್ಷ ದೇವೇಂದ್ರ ವಾಗೆÛ ಮೊದಲಾದವರು ಉಪಸ್ಥಿತರಿದ್ದರು. ಪ್ರಭಾಕರ ಪ್ರಭು ಸ್ವಾಗತಿಸಿ, ಉಮೇಶ್ ಕಾರ್ಯಕ್ರಮ ನಿರೂಪಿಸಿ, ದೇವೇಂದ್ರ ನಾಯಕ್ ಮುತ್ತೂರು ವಂದಿಸಿದರು.