Advertisement

ಕೋವಿಡ್ ದಿಂದಾಗಿ ಮಕ್ಕಳ ರೋಗ ನಿರೋಧಕ ಶಕ್ತಿ ಕ್ಷೀಣ: ವರದಿ

04:22 PM Aug 23, 2020 | Suhan S |

ಲಂಡನ್‌: ಈ ಹಿಂದೆ ಕೋವಿಡ್‌ ಸೋಂಕಿನಿಂದ ಬಳಲುವ ವ್ಯಕ್ತಿಯ ಬಹು ಅಂಗಾಂಗಳಿಗೆ ಸೋಂಕು ಹಾನಿಯನ್ನುಂಟು ಮಾಡುತ್ತದೆ. ಅಲ್ಲದೇ ಸೋಂಕಿನಿಂದ ಗುಣಮುಖರಾದ ಬಳಿಕವೂ ಅಂಗಾಂಗಳಿಗೆ ಆದ ಹಾನಿಯಿಂದ ದೀರ್ಘ‌ಕಾಲದವರೆಗೆ ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದರು.

Advertisement

ಆದರೀಗ ಕೋವಿಡ್‌ನಿಂದ ಬಳಲುವ ಮಕ್ಕಳಲ್ಲಿಯೂ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ. ಇದರಿಂದ ಅವರ ರಕ್ತ ನಾಳಗಳಲ್ಲಿ ವಿಪರೀತ ಊತ, ಹೃದಯ ತೊಂದರೆಯಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ವಿಜ್ಞಾನಿಗಳು ನಡೆಸಿದ ಅಧ್ಯಯನದಿಂದ ಕಂಡುಬಂದಿದೆ.  ಲಂಡನ್‌ಕಿಂಗ್ಸ್ ಕಾಲೇಜ್‌ ಸಂಶೋಧಕರು ಈ ಅಧ್ಯಯನ ನಡೆಸಿದ್ದು, “ನೇಚರ್‌ ಮೆಡಿಸಿನ್‌’ ನಿಯತಕಾಲಿಕದಲ್ಲಿ ವರದಿ ಪ್ರಕಟವಾಗಿದೆ.

ಕೋವಿಡ್‌ನಿಂದ ಬಳಲುವ ಕೆಲವು ಮಕ್ಕಳಲ್ಲಿ ಅಪರೂಪದ ಕಾಯಿಲೆ ಕಾಣಿಸಿಕೊಳ್ಳಲಿದ್ದು, ಇದನ್ನು “ಪೀಡಿಯಾಟ್ರಿಕ್‌ ಇನ್‌ಫ್ಲಮೇಟರಿ ಮಲ್ಟಿಸಿಸ್ಟಂ ಸಿಂಡ್ರೋಮ್’ (ಪಿಐಎಂಎಸ್‌-ಟಿಎಸ್‌) ಎಂದು ಹೆಸರಿಸಲಾಗಿದೆ. ಈ ಕಾಯಿಲೆ ಮತ್ತು ಕಾವಾಸಾಕಿ ರೋಗದ ಲಕ್ಷಣಗಳಲ್ಲಿ ಸಾಕಷ್ಟು ಸಾಮ್ಯತೆ ಇದೆ ಎಂದು ಸಂಶೋಧಕರು ಹೇಳಿದ್ದಾರೆ. “ಪಿಐಎಂಎಸ್‌-ಟಿಎಸ್‌ನಿಂದಾಗಿ ರಕ್ತನಾಳಗಳಲ್ಲಿ ವಿಪರೀತ ಊತ ಕಾಣಿಸಿಕೊಂಡು, ಕೆಲವೊಮ್ಮೆ ಹೃದಯಾಘಾತಕ್ಕೂ ಕಾರಣವಾಗುತ್ತದೆ’ ಎಂದೂ ವಿವರಿಸಿದ್ದಾರೆ. “ಪಿಐಎಂಎಸ್‌-ಟಿಎಸ್‌ನಿಂದಾಗಿ ರಕ್ತನಾಳಗಳಲ್ಲಿ ವಿಪರೀತ ಊತ ಕಾಣಿಸಿಕೊಂಡು, ಕೆಲವೊಮ್ಮೆ ಹೃದಯಾಘಾತಕ್ಕೂ ಕಾರಣವಾಗುತ್ತದೆ’ ಎಂದೂ ವಿವರಿಸಿದ್ದಾರೆ.

ಮಾಸ್ಕ್ ತೊಡಿಸುವ ಗನ್‌ :  ನ್ಯೂಯಾರ್ಕ್‌: ಇಲ್ಲಿನ ಅಲೆನ್‌ ಪನ್‌ ಎಂಬ ವ್ಯಕ್ತಿ ಮಾಸ್ಕ್ ಕುರಿತು ಜಾಗೃತಿ ಮೂಡಿಸಲು ವಿಭಿನ್ನ ಹಾದಿಯೊಂದನ್ನು ಕಂಡುಕೊಂಡಿದ್ದು, ಮಾಸ್ಕ್ ತೊಡಿಸುವ ಗನ್‌ವೊಂದನ್ನು ಸಂಶೋಧಿಸಿದ್ದಾರೆ. ಸದ್ಯ ಕೋವಿಡ್‌ ತಡೆಯುವಿಕೆ ಮಾಸ್ಕ್ ಅವಶ್ಯವಾಗಿದ್ದು, ಜನರಲ್ಲಿ ಮಾಸ್ಕ್ ಕುರಿತು ಅರಿವು ಮೂಡಿಸಲು ಅಲೆನ್‌ ಈ ಪ್ರಯತ್ನ ಮಾಡಿದ್ದಾರೆ. ಇನ್ನು ದೂರದಿಂದಲೇ ಶೂಟ್‌ ಮಾಡಿದರೆ ಮಾಸ್ಕ್ ಎದುರಿಗಿದ್ದವರ ಮುಖಕ್ಕೆ ಹೋಗಿ ಅಂಟಿಕೊಳ್ಳಲಿದ್ದು, ಇದರ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next