Advertisement

ನಗರದಲ್ಲಿ ವಾಹನ ದಟ್ಟಣೆ ಕಡಿಮೆಯಾಗಲಿ

01:07 PM Sep 30, 2018 | Team Udayavani |

ಸ್ಮಾರ್ಟ್‌ ನಗರಿಯಾಗಿ ಬೆಳೆಯುತ್ತಿರುವ ಮಂಗಳೂರಿನ ಹೆಚ್ಚಿನ ರಸ್ತೆಗಳು ಕಾಂಕ್ರೀಟೀಕರಣಗೊಂಡಿವೆಯಾದರೂ ಬಹುತೇಕ ಎಲ್ಲ ರಸ್ತೆಗಳು ಅಗಲ ಕಿರಿದಾಗಿವೆ. ಜತೆಗೆ ವಾಹನ ಸಂಚಾರ ಒತ್ತಡವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದು ಈಗಿನ ಪರಿಸ್ಥಿತಿಯಾದರೆ ಭವಿಷ್ಯದಲ್ಲಿ ಹೇಗಿರಬಹುದು. ಇದಕ್ಕಾಗಿ ಮೊದಲೇ ಸಜ್ಜುಗೊಳ್ಳಬೇಕಿರುವುದು ಇಂದಿನ ಅಗತ್ಯ.

Advertisement

. ರಸ್ತೆ ನಿಯಮಗಳ ಪಾಲನೆ
ಪ್ರತಿಯೊಬ್ಬರೂ ರಸ್ತೆ ನಿಯಮಗಳನ್ನು ಪಾಲನೆ ಮಾಡುವಂತೆ ನೋಡಿಕೊಳ್ಳುವುದು, ರಸ್ತೆ ಬದಿ ವಾಹನಗಳ ನಿಲುಗಡೆಗೆ ಅವಕಾಶ ನೀಡದಿರುವುದು ಮೊದಲಾದ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಿದೆ. ವಾಹನಗಳ ಸಂಚಾರಕ್ಕೆ ಉಪಯುಕ್ತವಾಗುವಂತೆ ಹೆಚ್ಚಿನ ಎಲ್ಲ ರಸ್ತೆಗಳನ್ನು ಎಕಮುಖ ಸಂಚಾರದ ರಸ್ತೆಗಳಾಗಿ ಮಾರ್ಪಡಿಸಬೇಕು.

.ವಾಹನಗಳ ನಿಲುಗಡೆ
ನಗರದಲ್ಲಿ ವಾಹನಗಳ ನಿಲುಗಡೆಗೆ ಮಾರುಕಟ್ಟೆ ಯಂಥ ಪ್ರದೇಶಗಳಲ್ಲಿ ಕಾಂಪ್ಲೆಕ್ಸ್‌ ಮಾದರಿಯ ಪಾರ್ಕಿಂಗ್‌ ತಾಣಗಳು ನಿರ್ಮಾಣವಾಗಬೇಕು. ಹೊಸ ವಾಹನ ಖರೀದಿಸುವವರು, ವಾಹನ ನಿಲುಗಡೆಗೆ ಜಾಗದ ಬಗ್ಗೆ ಸಮರ್ಥಿಸಬೇಕು ಮತ್ತು ಸಂಬಂಧಪಟ್ಟವರು ಆ ಬಗ್ಗೆ ಪರಿಶೀಲಿಸಿ ಒಪ್ಪಿಗೆ ಕೊಡುವಂತಿರಬೇಕು. ನಗರ ಭಾಗಗಳಲ್ಲಿ ಸ್ಥಳಾವಕಾಶ ಇರುವಲ್ಲಿ ಪಾರ್ಕಿಂಗ್‌ ವಲಯಗಳನ್ನು ಗುರುತಿಸಿ ಗಂಟೆಯ ಪ್ರಕಾರ ನಿಲುಗಡೆ ದರ ನಿಗದಿಪಡಿಸಬೇಕು.

. ಪಂಪ್‌ವೆಲ್‌ನಲ್ಲಿ ಮುಖ್ಯ ಬಸ್‌ ನಿಲ್ದಾಣ
ಪಂಪ್‌ವೆಲ್‌ನಲ್ಲಿ ಮಾಡಲು ಉದ್ದೇಶಿಸಿರುವ ಮುಖ್ಯ ಬಸ್‌ ನಿಲುಗಡೆ ತಾಣವನ್ನು ಆದಷ್ಟು ಬೇಗನೆ ನಿರ್ಮಾಣ ಮಾಡಬೇಕು. ಅಲ್ಲಿಂದ ಸ್ಟೇಟ್‌ಬ್ಯಾಂಕ್‌ ಪ್ರದೇಶಕ್ಕೆ ಲೋ ಫ್ಲೋರ್‌ ಬಸ್‌ಗಳ ಸೇವೆಯನ್ನು ನೀಡಬೇಕು.

. ಮೇಲ್ಸೇತುವೆಗಳ ನಿರ್ಮಾಣ
ನಗರದ ರಸ್ತೆಗಳನ್ನು ಅಗಲೀಕರಣಗೊಳಿಸಲು ಸಾಧ್ಯವಾಗದೇ ಇದ್ದರೆ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬಹುದು.

Advertisement

. ಹಳೆ ವಾಹನಗಳಿಗೆ ನಿರ್ಬಂಧ
ನಗರದಲ್ಲಿ ಸಂಚರಿಸುವ 30- 40 ವರ್ಷಕ್ಕೂ ಹಳೆಯದಾದ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಬೇಕು.

. ವೃತ್ತ ಪ್ರದೇಶದಿಂದ ದೂರವಿರಲಿ ಬಸ್‌ ತಂಗುದಾಣ
ನಗರ ಪ್ರದೇಶದಲ್ಲಿ ಹೆಚ್ಚಿನ ಬಸ್‌ ತಂಗುದಾಣಗಳು ವೃತ್ತದ ಸಮೀಪದಲ್ಲೇ ಇದ್ದು ಇದರಿಂದ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ಇದನ್ನು ತುಸು ದೂರ ಮಾಡಿದರೆ ವಾಹನ ಸಂಚಾರ ಸುಗಮವಾಗುವುದು.

 ವಿಶ್ವನಾಥ್‌ ಕೋಟೆಕಾರ್‌,
 ಕೋಡಿಕಲ್‌

Advertisement

Udayavani is now on Telegram. Click here to join our channel and stay updated with the latest news.

Next