ಶ್ರೀರಂಗಪಟ್ಟಣ: 120 ಅಡಿಗೆ ಏರಿಕೆ ಕಂಡಿದ್ದ ಕೆಆರ್‌ಎಸ್ ಜಲಾಶಯ ಇದೀಗ ವಾರದಿಂದ ಈಚೆಗೆ 4 ಅಡಿ ನೀರು ಇಳಿಕೆ ಕಂಡು ಬಂದಿದೆ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಭರ್ತಿಗೆ ಇನ್ನು ಕಾಲಾವಕಾಶ ಬೇಕಾಗಿದೆ.
ಕೊಡಗು ಸೇರಿದಂತೆ ಇತರ ಹಳ್ಳಕೊಳ್ಳಗಳ ಪ್ರದೇಶದಲ್ಲಿ ಮಳೆಯಾಗದೆ ಜಲಾಶಯಕ್ಕೆ ಹರಿದು ಬರುತ್ತಿದ್ದ ಒಳ ಹರಿವಿನ ಪ್ರಮಾಣ ಕಡಿಮೆಯಾಗಿ ಜಲಾಶಯದಲ್ಲಿ ನೀರಿನ ಮಟ್ಟ ಇಳಿಕೆ ಕಂಡು ಬಂದಿದೆ. ಕಳೆದ ವಾರದ ಹಿಂದೆ ಹೆಚ್ಚು ನೀರು ಹರಿದು ಬಂದು 120 ಅಡಿಗೂ ಹೆಚ್ಚು ನೀರಿನಮಟ್ಟ ಇತ್ತು. ಇದೀಗ ತಮಿಳುನಾಡಿಗೆ9 ಸಾವಿರಕ್ಕೂಹೆಚ್ಚು ನೀರನ್ನುಜಲಾಶಯದಿಂದ ಕಾವೇರಿ ನದಿ ಮೂಲಕ ನೀರು ಹೊರ ಬಿಡುತ್ತಿರುವುದರಿಂದ ನೀರಿನ ಮಟ್ಟ ದಿನೇ ದಿನೆ ಇಳಿಕೆಕಂಡು ಬರುತ್ತಿದೆ.
ಈ ಬಾರಿ ಗೌರಿ ಗಣೇಶನ ಹಬ್ಬಕ್ಕಿಂತ ಮೊದಲು ಜಲಾಶಯ ಭರ್ತಿಯಾಗಿ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಲಿದ್ದಾರೆ ಎಂಬ ಮಾಹಿತಿ ಹರಿದಾಡೊತೊಡಗಿದ್ದವು. ಆದರೆ ಒಳಹರಿವಿನ ಪ್ರಮಾಣ ಕಡಿಮೆ ಹಾಗೂ ಜಲಾಶಯದಿಂದ ಹೊರ ಹರಿವು ಹೆಚ್ಚಳವಾಗಿ ಜಲಾಶಯ 124.80 ಅಡಿ ಸಂಪೂರ್ಣ ಭರ್ತಿಗೆ ಇನ್ನುಕಾಲಾವಕಾಶ ಬೇಕಾಗಿದೆ. ಇದರಿಂದ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೂ ವಿಳಂಬವಾಗುತ್ತಿದೆ.
ಇದನ್ನೂ ಓದಿ:ಬೆಳಗಾವಿ: ಹೃದಯ ಭಾಗವಾದರೂ ಕೆಲಸ ಅರ್ಧಂಬರ್ಧ
ಜಲಾಶಯದ ಗರಿಷ್ಠಮಟ್ಟ 124.80 ಅಡಿಗಳು. ಪ್ರಸ್ತುತ ನೀರಿನ ಮಟ್ಟ117.62 ಅಡಿ ದಾಖಲಾಗಿದೆ. ಪ್ರಸ್ತುತ ಒಳ ಹರಿವು- 4094 ಕ್ಯುಸೆಕ್ ಇದ್ದು, ನದಿ ಹಾಗೂ ವಿ.ಸಿ ನಾಲೆಗಳಿಗೆ 9,721ಕ್ಯುಸೆಕ್ ನೀರು ಜಲಾಶಯದಿಂದ ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿ 40,110 ಟಿ.ಎಂ.ಸಿ ನೀರು ಸಂಗ್ರಹವಾಗಿದೆ. ವಾರದಿಂದ ಈಚೆಗೆ 4 ಅಡಿ ನೀರು ಇಳಿಕೆ ಕಂಡಿದೆ. ಕಳೆದ ವರ್ಷ ಇದೇ ದಿನ123.54 ಅಡಿ ನೀರಿತ್ತು. ಇದೇ ದಿನ 1910 ಕ್ಯುಸೆಕ್ ಒಳಹರಿವು, 5360 ಕ್ಯುಸೆಕ್ ಹೊರಹರಿವು ದಾಖಲಾಗಿ 47,707 ಟಿ.ಎಂ.ಸಿ ನೀರಿನ ಸಂಗ್ರಹ ದಾಖಲಾಗಿತ್ತು.
ಜಲಾಶಯದ ಗರಿಷ್ಠಮಟ್ಟ 124.80 ಅಡಿ
ಪ್ರಸ್ತುತ ನೀರಿನ ಮಟ್ಟ117.62 ಅಡಿ
ಪ್ರಸ್ತುತ ಒಳ ಹರಿವು- 4094 ಕ್ಯುಸೆಕ್
ನದಿ, ವಿ.ಸಿ ನಾಲೆಗಳಿಗೆ 9,721 ಕ್ಯುಸೆಕ್ ಹೊರಬಿಡಲಾಗುತ್ತಿದೆ.
ಜಲಾಶಯದಲ್ಲಿ 40,110 ಟಿಎಂಸಿ ನೀರು ಸಂಗ್ರಹ
ವಾರದಿಂದ ಈಚೆಗೆ 4 ಅಡಿ ನೀರು ಇಳಿಕೆ
ಕಳೆದ ವರ್ಷ ಇದೇ ದಿನ 123.54 ಅಡಿ ನೀರು
ಇದೇ ದಿನ 1910 ಕ್ಯುಸೆಕ್ ಒಳಹರಿವು
5360 ಕ್ಯುಸೆಕ್ ಹೊರ ಹರಿವು
47,707 ಟಿ.ಎಂ.ಸಿ ನೀರಿನ ಸಂಗ್ರಹ ದಾಖಲಾಗಿತು