Advertisement

ಕೋವಿಡ್ ಸೋಂಕಿತರ ಸಾವು ಇಳಿಕೆ

12:40 AM Dec 27, 2020 | mahesh |

ಹೊಸದಿಲ್ಲಿ: ರೂಪಾಂತರಿ ಕೋವಿಡ್ ಕಾರ್ಮೋಡದ ನಡುವೆ ಭಾರತದ ಪಾಲಿಗೆ ಸಮಾಧಾನಕರ ಸುದ್ದಿಯೊಂ ದಿದೆ. ದೇಶದಲ್ಲಿ ಸೋಂಕಿತರ ಮರಣ ಪ್ರಮಾಣ ಭಾರೀ ತಗ್ಗಿದ್ದು, 6 ತಿಂಗಳುಗಳ ಬಳಿ ಇದೇ ಮೊದಲ ಬಾರಿಗೆ ಕಳೆದ 24 ಗಂಟೆಗಳಲ್ಲಿ 251 ಮಂದಿ ಸಾವನ್ನಪ್ಪಿದ್ದಾರೆ!

Advertisement

ಸೋಂಕಿತರ ಪ್ರಮಾಣದಲ್ಲೂ ಕುಸಿತ ವಾಗಿದ್ದು, ಶನಿವಾರ ಕೇವಲ 22,273 ಮಂದಿಗೆ ಪಾಸಿಟಿವ್‌ ದೃಢಪಟ್ಟಿದೆ. ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ.95.  78ರಷ್ಟಿದ್ದು, ಮರಣ ಪ್ರಮಾಣ ಶೇ.1.45  ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಮೊದಲು ಒಪ್ಪಿಗೆ?: ಬೇರೆಲ್ಲ ಲಸಿಕೆಗಿಂತ ಮೊದಲು ಆಕ್ಸ್‌ಫ‌ರ್ಡ್‌- ಅಸ್ಟ್ರಾಜೆನೆಕಾ ಲಸಿಕೆಗೆ ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ಸಿಗುವ ಸಾಧ್ಯತೆ ಅಧಿಕವಿದೆ. ಯುಕೆ ಡ್ರಗ್‌ ಮಂಡಳಿ ಒಪ್ಪಿಗೆ ನೀಡಿದ ಕೂಡಲೇ ಸಿಡಿಎಸ್‌ಸಿಒ ತಜ್ಞರ ಸಮಿತಿ ಈ ಬಗ್ಗೆ ಸಭೆ ಕರೆಯಲಿದೆ. ಇದೇ ವೇಳೆ ಜಪಾನ್‌ ಬಳಿಕ ಫ್ರಾನ್ಸ್‌, ಸ್ಪೇನ್‌ನಲ್ಲಿಯೂ ರೂಪಾಂತರಿ ಕೊರೊನಾ ಸೋಂಕು ದೃಢ ಪಟ್ಟಿದೆ. ಮತ್ತೂಂದು ಬೆಳವಣಿಗೆಯಲ್ಲಿ ಪೋಲಂಡ್‌, ಜರ್ಮನಿಯಲ್ಲಿ ರವಿವಾರ ದಿಂದ ಸಾರ್ವಜನಿಕರಿಗೆ ಲಸಿಕೆ ಹಾಕ ಲಾಗುತ್ತದೆ.

150 ಯೋಧರಿಗೆ ಪಾಸಿಟಿವ್‌
ದೇಶದ ವಿವಿಧೆಡೆಯಿಂದ ಹೊಸ
ದಿಲ್ಲಿಗೆ ಆಗಮಿಸಿದ 2 ಸಾವಿರ ಯೋಧರ ಪೈಕಿ 150 ಮಂದಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ. ನೆಗೆಟಿವ್‌ ಬಂದವರನ್ನು “ಸೇಫ್ ಬಬಲ್‌’ ನಿರ್ಮಿಸಿ, ವಸತಿ ಕಲ್ಪಿಸಲಾಗಿದೆ.

ದಿಲ್ಲಿ ಪೊಲೀಸರಿಗೆ ಶೀಘ್ರ ಲಸಿಕೆ
ಶೀಘ್ರದಲ್ಲೇ ದಿಲ್ಲಿ ಪೊಲೀಸರಿಗೆ ಲಸಿಕೆ ಸಿಗುವ ಸಾಧ್ಯತೆ ಇದೆ. ಶನಿವಾರ ಜಿಲ್ಲಾ ಎಸ್‌ಪಿಗಳಿಗೆ ಈ ಸಂಬಂಧ ಆದೇಶ ಹೋಗಿದ್ದು, ಲಸಿಕೆ ನೀಡುವ ದಿನ, ಸಮಯ ಮತ್ತು ಸ್ಥಳದ ಬಗ್ಗೆ ಎಸ್‌ಎಂಎಸ್‌ ಮೂಲಕ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದೆ. ಹೀಗಾಗಿ ಜ. 3ರೊಳಗೆ ಪೊಲೀಸರು ಪಿಐಎಸ್‌ ಮತ್ತು ಇನ್‌ಸ್ಟ್ರಾಡಿಪಿ ವ್ಯವಸ್ಥೆಯೊಳಗೆ ಮಾಹಿತಿ ಅಪ್‌ ಲೋಡ್‌ ಮಾಡುವಂತೆ ಸೂಚಿಸಲಾಗಿದೆ.

Advertisement

ಬೆಲ್ಜಿಯಂನಲ್ಲಿ ಲಸಿಕೆ ವಿತರಣೆಗೆ ಸಿದ್ಧತೆ.

Advertisement

Udayavani is now on Telegram. Click here to join our channel and stay updated with the latest news.

Next