Advertisement
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಸದ್ಯ 315 ಮಂದಿ ಯಲ್ಲಿ ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 211 (ಶೇ.66.98) ಮಂದಿ ಗೃಹ ನಿಗಾವಣೆ ಯಲ್ಲಿದ್ದಾರೆ. 95 (ಶೇ.30.16)ರಷ್ಟು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9 (ಶೇ.2.86) ಮಂದಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ಗುಣಮುಖ ಗೊಳ್ಳುತ್ತಿರುವವರ ದರ ಏರಿಕೆ ಯಾಗುತ್ತಿದ್ದು, ಸದ್ಯ ಶೇ.98.27ರಷ್ಟು ರಿಕವರಿ ದರ ಇದೆ. ಸಾವಿನ ದರ ಶೇ.1.46ರಷ್ಟಿದ್ದು, ಒಂದು ವಾರದಲ್ಲಿ ಶೇ.0.42ರಷ್ಟು ಪಾಸಿಟಿವಿಟಿ ದರ ಜಿಲ್ಲೆಯಲ್ಲಿ ದಾಖಲಾಗಿದೆ.
Related Articles
Advertisement
ಮಂಗಳೂರಲ್ಲಿ ಅಧಿಕ; ಸುಳ್ಯದಲ್ಲಿ ಕಡಿಮೆದ.ಕ. ಜಿಲ್ಲೆಯಲ್ಲಿ ಸದ್ಯ ಸಕ್ರಿಯ ಪ್ರಕರಣಗಳಲ್ಲಿ ಮಂಗಳೂರು ನಗರದಲ್ಲೇ ಅತ್ಯಧಿಕ ಕೋವಿಡ್ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಒಟ್ಟು 315 ಸಕ್ರಿಯ ಪ್ರರಕಣ ಇದ್ದು, ಮಂಗಳೂರು ನಗರದಲ್ಲಿ 128 ಮಂದಿ, ಗ್ರಾಮೀಣ ಭಾಗದಲ್ಲಿ 69, ಬಂಟ್ವಾಳ ತಾಲೂಕಿನಲ್ಲಿ 36, ಪುತ್ತೂರಿನಲ್ಲಿ 29, ಬೆಳ್ತಂಗಡಿಯಲ್ಲಿ 22, ಸುಳ್ಯದಲ್ಲಿ 10 ಮತ್ತು ಹೊರ ಜಿಲ್ಲೆಯಲ್ಲಿ 21 ಪ್ರಕರಣಗಳಿವೆ. ಮಾರ್ಗಸೂಚಿ ಪಾಲಿಸಿ
ದ.ಕ. ಜಿಲ್ಲೆಯಲ್ಲಿ ಕೋವಿಡ್ ದಿನದ ಪ್ರಕರಣ ದಿನದಿಂದ ದಿನಕ್ಕೆ ಇಳಿಮುಖಗೊಳ್ಳುತ್ತಿದೆ. ಆದರೂ ಸಾರ್ವಜನಿಕರು ಕೋವಿಡ್ ಮಾರ್ಗಸೂಚಿ ಪಾಲನೆ ಅಗತ್ಯ. ಸಮಾರಂಭ ಗಳಲ್ಲಿ, ಅಂಗಡಿಗಳಲ್ಲಿ ಗುಂಪು ಸೇರಬೇಡಿ, ಪ್ರತಿಯೊಬ್ಬರೂ ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಿ. ಯಾರೆಲ್ಲಾ ಕೋವಿಡ್ ಲಸಿಕೆ ಪಡೆದುಕೊಂಡಿಲ್ಲವೋ ಅವರು ಕೂಡಲೇ ಪಡೆದುಕೊಳ್ಳಿ. ಕೋವಿಡ್ ಲಕ್ಷಣ ಕಂಡು ಬಂದರೆ ಕೂಡಲೇ ಸಂಬಂಧಪಟ್ಟ ವೈದ್ಯರ ಗಮನಕ್ಕೆ ತರಬೇಕು.
-ಡಾ| ಕಿಶೋರ್ ಕುಮಾರ್, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ