Advertisement
ಬಾಗಿಲೇ ಬಾಗಿ ಸತ್ಕರಿಸುವಂತಿರಲಿಮನೆ ದೊಡ್ಡದೋ, ಚಿಕ್ಕದೋ ಎಂಬುದು ಮುಖ್ಯವಲ್ಲ. ಅದನ್ನು ಕಣ್ಮನ ಸೆಳೆಯುವಂತೆ ಅಲಂಕರಿಸಿದರೆ ಮಾತ್ರ ನಮಗೆ ಮತ್ತು ಅತಿಥಿಗಳಿಗೆ ಖುಷಿ ದೊರೆಯುವುದು ಸಾಧ್ಯ. ಮನೆಯ ಅಲಂಕಾರ ಮುಂಬಾಗಿಲಿನಿಂದಲೇ ಆರಂಭವಾಗಿ ಬಿಡುತ್ತದೆ. ಹಾಗಾಗಿ ಬಾಗಿಲಿನ ಬಗ್ಗೆಯೂ ನಾವು ವಿಶೇಷ ಆಸ್ಥೆ ವಹಿಸಬೇಕಾಗುತ್ತದೆ.
ಗೋಡೆಗಳಿಗೆ ಆದಷ್ಟು ತಿಳಿಯಾದ ಬಣ್ಣಗಳನ್ನು ಆರಿಸಿ ಬಳಕೆ ಮಾಡಬೇಕು. ಗಾಢ ಬಣ್ಣಗಳನ್ನು ಬಳಿಯುವುದರಿಂದ ಮನೆಯ ಅಂದ ಹೆಚ್ಚಾಗುವ ಬದಲು ಕಣ್ಣಿಗೆ ಹೊಡೆಯುವಂತಿದ್ದು, ಮನಸ್ಸನ್ನು ಡಿಸ್ಟರ್ಬ್ ಮಾಡುವಂತಿರಬಾರದು. ಅದರ ಜತೆಯಲ್ಲಿ ಗೋಡೆಗಳಲ್ಲಿ ಸುಂದರ ಪೈಂಟಿಗ್ಸ್‌ಗಳನ್ನು ಅಳವಡಿಸಿ. ಸ್ಟೆರ್‌ಕೇಸ್‌ಗಳಿಗೂ ಸುಂದರ ಮನಕ್ಕೊಪ್ಪುವ ಬಣ್ಣಗಳನ್ನು ಆಯ್ಕೆ ಮಾಡಿ. ಹಾಗೆಯೇ ಹಾಲ್‌ನ ಗೋಡೆಯಲ್ಲಿ ದೊಡ್ಡ ಕನ್ನಡಿಯೊಂದನ್ನು ಅಳವಡಿಸಿ. (ಪ್ರತಿಯೊಂದು ರೂಮ್‌ನಲ್ಲಿಯೂ ದೊಡ್ಡ ಕನ್ನಡಿಗಳನ್ನು ಅಳವಡಿಸಿದಾಗ ಮನೆಗೆ ಲುಕ್ ಬರುತ್ತದೆ).
Related Articles
Advertisement
ಕಿಚನ್ ರೂಮ್, ಡೈನಿಂಗ್ ಹಾಲ್‌ಗಳಲ್ಲಿ ಪ್ರತಿಯೊಂದು ವಸ್ತುವಿಗೂ ಕ್ರಮವಾಗಿ ಜೋಡಿಸಿಡಲು ಸಾಧ್ಯವಾಗುವಂತೆ ಪ್ರತ್ಯೇಕ ಸ್ಥಳಾವಕಾಶಗಳನ್ನು ನಿರ್ಮಿಸಿ. ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಿ.
ಮನೆಯೊಳಗೆ ಸೂರ್ಯನ ಕಿರಣ ಬೀಳಲಿಹಗಲು ಹೊತ್ತಿನಲ್ಲಿಯೂ ಲೈಟ್ ಆನ್ ಮಾಡಿ ಕೂರುವಂತೆ ಮನೆ ನಿರ್ಮಾಣ ಬೇಡ. ಅದರ ಬದಲು ಸೂರ್ಯನ ಕಿರಣ ಹೆಚ್ಚಾಗಿ ಬೀಳುವಂತೆ ನೋಡಿಕೊಂಡು ಕಿಟಕಿಗಳನ್ನು ನಿರ್ಮಿಸಿ. ಪ್ರತಿಯೊಂದು ಕೋಣೆಯನ್ನೂ ಸೂರ್ಯರಶ್ಮಿ ಸ್ವರ್ಶಿಸುವಂತಿರಲಿ. ಮನೆಯ ಹಿಂದಿನ ಬಾಗಿಲಿನಿಂದ ಹೊರ ಬಂದಾಗ ಮನೋಲ್ಲಾಸ ನಿಡುವಂತಹ ಚಿಕ್ಕ ಪಾರ್ಕ್ ಒಂದನ್ನು ನಿರ್ಮಿಸಿ. ಹತ್ತಾರು ಹೂಗಿಡ, ಹುಲ್ಲುಗಳ ಮಧ್ಯೆ ನಿಮ್ಮ ಮುಂಜಾವು ಆರಂಭವಾಗುವಂತಿದ್ದಾಗ ಮನೆಯೂ ಸೂಪರ್. ಜತೆಗೆ ಮನವೂ ಫುಲ್ ಆಹ್ಲಾದಭರಿತವಾಗಿರುತ್ತದೆ. ದಿನ ಪೂರ್ತಿ ಫುಲ್ ಖುಷ್ ಆಗಿರುವುದಕ್ಕೂ ಸಾಧ್ಯವಾಗುತ್ತದೆ. ಲೈಟಿಂಗ್ಸ್ ಬಗ್ಗೆ ಇರಲಿ ಕಾಳಜಿ
ಸುಂದರವಾದ ಲೈಟಿಂಗ್ ಮೆಟೀರಿಯಲ್‌ಗಳು ಮನೆಯ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ. ಹಾಗಾಗಿ ಹೊಸ ಹೊಸ ಡಿಸೈನ್‌ಗಳಲ್ಲಿ ಲಭ್ಯವಿರುವ ಲೈಟ್‌ಗಳನ್ನು ಅಳವಡಿಸಿ. ಹಾಲ್ ಶ್ಯಾಂಡಿಲಿ ಯರ್ ಇದ್ದರೆ ಇನ್ನೂ ಚೆನ್ನ. ಭುವನ ಬಾಬು, ಪುತ್ತೂರು