Advertisement

ಹಗ್ಗ ಬಳಸಿ ಮನೆಯನ್ನು ಸಿಂಗರಿಸಿ

02:49 PM Sep 29, 2018 | |

ಅಂದವಾಗಿದ್ದರೆ ಸಾಕು, ಮನಸ್ಸಿಗೂ ಏನೋ ನೆಮ್ಮದಿ. ಮನೆ ಪುಟ್ಟದಾಗಿದ್ದರೂ ಸೌಂದರ್ಯ ಪ್ರಜ್ಞೆ ಒಂದಿದ್ದರೆ ಸಾಕು ಮನೆಯೊಳಗೆ ಅರಮನೆಯನ್ನೇ ಸೃಷ್ಟಿಸಬಹುದು. ಹೆಚ್ಚು ಹಣ ವ್ಯಯಿಸದೆ, ಸುಲಭವಾಗಿ ಸಿಗುವ ಕೆಲವು ವಸ್ತುಗಳನ್ನು ಮನೆಯ ಅಲಂಕಾರಕ್ಕೆ ಬಳಸುವುದು ಸಾಮಾನ್ಯ. ಏನೂ ಉಪಯೋಗಕ್ಕಿಲ್ಲ ಎಂದು ಸ್ಟೋರ್‌ ರೂಮ್‌ ನಲ್ಲೋ ಅಥವಾ ಕಾಪಾಟಿನಲ್ಲಿ ಮಡಚಿಟ್ಟ ರೋಪ್‌ (ಹಗ್ಗ)ಗಳಿಂದಲೂ ಮನೆಯನ್ನು ಸಿಂಗರಿಸಬಹುದು. ಹೇಗೆ ಅಂತೀರಾ… ಇಲ್ಲಿದೆ ಕೆಲವು ಸೂಪರ್‌ ಐಡಿಯಾಗಳು.

Advertisement

.  ರೋಪ್‌ಚಾಂಡಿಲಿಯರ್ಸ್ 
ಮನೆಯೊಳಗೆ, ಕೋಣೆಗಳಲ್ಲಿ ರೋಪ್‌ ಗಳನ್ನು ಬಳಸಿ ಚಾಂಡಿಲಿಯರ್ಸ್ಗಳನ್ನು ಮಾಡಬಹುದು. ಇದರಿಂದ ರಾತ್ರಿ ವೇಳೆ ಮಾತ್ರವಲ್ಲ ಹಗಲಿನಲ್ಲೂ ಚಾಂಡಿಲಿಯರ್ಸ್ ಗಳು ಹೆಚ್ಚು ಗಮನ ಸೆಳೆಯುತ್ತದೆ. ವಿವಿಧ ಆಕಾರದ ಬಲ್ಬ್ ಗಳನ್ನು ಬಳಸಿ ಅದಕ್ಕೆ ರೋಪ್‌ ಗಳನ್ನು ಸುತ್ತಿ ಚಾಂಡಿಲಿಯರ್ಸ್ ಮಾಡುವುದು ಬಲು ಸುಲಭ.

. ಸೌಂದರ್ಯ ಹೆಚ್ಚಿಸುವ ಕನ್ನಡಿ
ಮನೆಯೊಳಗೆ ಅಥವಾ ಹೊರಾಂಗಣದಲ್ಲಿ ಕನ್ನಡಿಯ ಪುಟ್ಟ ಪುಟ್ಟ ತುಂಡುಗಳನ್ನು ರೂಪ್‌ಗೆ ಅಂಟಿ  ತೂಗು ಹಾಕಿದರೆ ಮನೆಯ ಸೌಂದರ್ಯ ಇನ್ನೂ ಹೆಚ್ಚಾಗುತ್ತದೆ. ಮನೆಯೊಳಗಿನ ಕನ್ನಡಿ ಬೋರ್‌ ಅಥವಾ ಸಿಂಪಲ್‌ ಆಗಿದ್ದರೆ ಅದರ ಸುತ್ತಲೂ ರೋಪ್‌ ಸುತ್ತಿ ಕನ್ನಡಿಯನ್ನು ಆಕರ್ಷಕಗೊಳಿಸಬಹುದು.

. ಸ್ಟೂಲ್‌
ಪ್ಲಾಸ್ಟಿಕ್‌, ಕಬ್ಬಿಣ, ಮರದ ಟೀಪಾಯಿಗಳು ನೋಡಿ ಬೋರ್‌ ಆಗಿದ್ದರೆ ರೂಪ್‌ ಸುತ್ತಿ ಅದರ ಸೌಂದರ್ಯವನ್ನು ವೃದ್ಧಿಸಬಹುದು. ಖಾಲಿ ಬಾಕ್ಸ್‌ ಗಳಿದ್ದರೆ ಅದಕ್ಕೆ ಹಗ್ಗ ಸುತ್ತಿ ಸ್ಟೂಲ್‌, ಟೀಪಾಯಿಯಾಗಿಯೂ ಬಳಸಬಹುದು. ಇದರಿಂದ ಮನೆಗೆ ಟ್ರೆಡಿಶನಲ್‌ ಲುಕ್‌ ಕೂಡ ಕೊಟ್ಟಂತಾಗುತ್ತದೆ ಮಾತ್ರವಲ್ಲ ಮನೆಯ ಫ‌ರ್ನಿಚರ್‌ಗಳಿಗೆ ಹೊಸ ರೂಪ ನೀಡಿದಂತಾಗುತ್ತದೆ.

. ಸ್ಟೇರ್‌ಕೇಸ್‌ ಹ್ಯಾಂಡಲ್ಸ್‌
ಸಾಮಾನ್ಯವಾಗಿ ಮರದ, ಸ್ಟೀಲ್‌ ಅಥವಾ ಇನ್ನಿತರ ಯಾವುದೋ ಮೆಟಲ್‌ ಬಳಸಿ ಮನೆ ಮಹಡಿಗೆ ಹೋಗುವಲ್ಲಿ ಸ್ಟೇರ್‌ ಕೇಸ್‌ನ ಹ್ಯಾಂಡಲ್‌ಗ‌ಳನ್ನು ರಚಿಸಿರುವುದನ್ನು ನಾವು ನೋಡಿದ್ದೇವೆ. ಆದರೆ ಹಗ್ಗದ ಹ್ಯಾಂಡಲ್‌ಗ‌ಳನ್ನು ಬಳಸುವುದನ್ನು ನೋಡಿದ್ದೀರಾ. ಇತ್ತೀಚೆಗೆ ಹಗ್ಗದ ಸ್ಟೇರ್‌ಕೇಸ್‌ಗಳ ಟ್ರೆಂಡ್‌ ಆರಂಭವಾಗಿದ್ದು, ಆ ಮೂಲಕ ಮನೆಯ ಅಂದಕ್ಕೆ ಮತ್ತಷ್ಟು ಕಳೆ ನೀಡಬಹುದು. ಇದರಿಂದಾಗಿ ಮನೆಗೆ ಟ್ರೆಂಡೀ ಲುಕ್‌ ಬರುತ್ತದೆ. ಮನೆಯಲ್ಲಿ ಹಿರಿಯರು, ಮಕ್ಕಳಿದ್ದರೆ ಸುಲಭವಾಗಿ ಕೈ ಜಾರುವುದು ತಪ್ಪುತ್ತದೆ. ಅಗತ್ಯವಿಲ್ಲದೇ ಇದ್ದಾಗ ಇದನ್ನು ತೆಗೆದಿರಿಸಲೂ ಬಹುದು.

Advertisement

. ಮನೆಯ ವಿಂಗಡನೆ
ಮನೆಯೊಳಗೆ ಯಾವುದಾದರೊಂದು ಕೋಣೆ ಹೆಚ್ಚು ವಿಶಾಲವಾಗಿದೆ ಎಂದಾದರೆ ಹಗ್ಗದ ಸಹಾಯದಿಂದ ಅದನ್ನು ವಿಂಗಡಿಸಬಹುದು. ಹಗ್ಗವನ್ನು ಸುಂದರವಾಗಿ ವಿನ್ಯಾಸಗೊಳಿಸಿ ಕೋಣೆಯ ಮಧ್ಯೆ ನಿಮಗೆ ಬೇಕಾದಂತೆ ಫ‌ರ್ನಿಚರ್‌ ಗಳನ್ನು ಜೋಡಿಸಿ. ಆಗ ಇದರೊಳಗೊಂದು ಹೊಸ ಜಗತ್ತು ಸೃಷ್ಟಿಯಾಗುವುದು.

. ಶೆಲ್ಫ್
ಮನೆಯೊಳಗೆ ಎಲ್ಲಾದರೊಂದು ಶೆಲ್ಫ್ ಬೇಕೆಂದಾದರೆ ಮರದ ತುಂಡು ಜತೆಗೆರಡು ರೋಪ್‌, ಎರಡು ಆಣಿ ಇದ್ದರೆ ಸಾಕು ಸುಲಭವಾಗಿ ಅಗತ್ಯವಿದ್ದಲ್ಲಿ ಶೆಲ್ಫ್ ಗಳನ್ನು ನಿರ್ಮಿಸಿಕೊಳ್ಳಬಹುದು.

. ರೋಪ್‌ ಕಾರ್ಪೆಟ್ 
ವಿವಿಧ ವಸ್ತುಗಳನ್ನು ಬಳಸಿ  ಕಾರ್ಪೆಟ್ ಮಾಡುತ್ತೇವೆ. ಮನೆಯಲ್ಲೇ ಮಾಡಬಹುದಾದ ಕಾರ್ಪೆಟ್ ನಲ್ಲಿ ರೋಪ್‌ ಕಾರ್ಪೆಟ್ ಕೂಡ ಒಂದು. ಸುಂದರವಾಗಿ ವಿವಿಧ ಆಕೃತಿಯಲ್ಲಿ ಸುಲಭವಾಗಿ ರೋಪ್‌ ನಿಂದ ಕಾರ್ಪೆಟ್ ತಯಾರಿಸಿಕೊಳ್ಳಬಹುದು. ಇವಿಷ್ಟೇ ಅಲ್ಲದೆ ಹಗ್ಗದ ಉಯ್ನಾಲೆ, ವಸ್ತುಗಳನ್ನು ಜೋಡಿಸಿಡುವ ಸ್ಟಾಂಡ್‌, ಚಪ್ಪಲ್‌ ಸ್ಟಾಂಡ್‌, ಹ್ಯಾಂಗರ್‌ ಮೊದಲಾದವುಗಳ ತಯಾರಿಯೂ ರೋಪ್‌ ನಿಂದ ಸಾಧ್ಯವಿದೆ. ಇದಕ್ಕೆ ಬೇಕಿರುವುದು ಸಮಯ ಮತ್ತು ಮನಸ್ಸು. ಇನ್ನೂ ಕಲಿಯಬೇಕು ಎಂದು ಛಲ ತೊಟ್ಟವರಿಗೆ ಮನೆಯಲ್ಲಿಯೇ ಕುಳಿತು ಕಲಿಯುವುದಕ್ಕೂ ಇಂಟರ್‌ನೆಟ್‌ ಸಹಾಯ ಮಾಡುತ್ತದೆ. 

. ಹೂಕುಂಡ
ಗಾಜಿನ ಖಾಲಿ ಬಾಟಲ್‌ ಗಳಿದ್ದರೆ ಅದಕ್ಕೆ ರೋಪ್‌ ಸುತ್ತಿ ಹೂಕುಂಡಗಳನ್ನಾಗಿ ಅಥವಾ ಹೂದಾನಿಗಳನ್ನಾಗಿಯೂ ಮಾಡಬಹುದು. ಒಂದು ವೇಳೆ ಇಂಥ ಬಾಟಲ್‌ ಗಳು ಕೆಳಗೆ ಬಿದ್ದರೂ ಸುತ್ತಲೂ ರೋಪ್‌ ಇರುವುದರಿಂದ ಒಡೆಯುವ ಸಾಧ್ಯತೆಯೂ ಕಡಿಮೆ. ಉಪಯೋಗಕ್ಕೆ ಯೋಗ್ಯವಲ್ಲವೆಂದು ಎತ್ತಿಟ್ಟ ಬಾಟಲ್‌ಗ‌ಳನ್ನು ಸುಲಭವಾಗಿ ಹೂದಾನಿಗಳನ್ನಾಗಿ ಮಾಡಬಹುದು. ಇದಕ್ಕೆ ಬಳಸಿದ ರೋಪ್‌ ಗಳೆ ಬಣ್ಣ ಹಚ್ಚಿ, ಮಾರುಕಟ್ಟೆಯಲ್ಲಿ ಸಿಗುವ ಸ್ಟೋನ್‌ಗಳನ್ನು ಅಂಟಿಸಿದರೆ ಹೊಸ ರೂಪ ಸಿಗುತ್ತದೆ. ಇದರಲ್ಲಿ ವಿವಿಧ ಬಗೆಯ ಹೂಗಳನ್ನು ಹಾಕಿ ಅಲಂಕರಿಸಿದರೆ ಕೋಣೆಯ ಮೆರುಗು ಇನ್ನಷ್ಟು ಹೆಚ್ಚುತ್ತದೆ.

 ಭುವನಾ ಬಾಬು ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next