Advertisement
ಕೆ.ಆರ್.ಮಾರುಕಟ್ಟೆಯಲ್ಲಿ ಗುಣಮಟ್ಟದ ನಾಟಿ ಬಟಾಣಿ ಪ್ರತಿ ಕೆ.ಜಿ.ಗೆ 250 ರೂ. ವರೆಗೂ ಖರೀದಿ ಆಗುತ್ತಿದೆ. ಈ ಹಿಂದೆ ನಾಟಿ ಬಟಾಣಿ ಪ್ರತಿ ಕೆ.ಜಿ ಗೆ 90 ರೂ.ದಿಂದ 100 ರೂ. ವರೆಗೂ ಮಾರಾಟವಾಗುತ್ತಿತ್ತು. ಮದುವೆ ಇನ್ನಿತರ ಶುಭ ಸಮಾರಂಭಗಳಿಗೆ ಅಧಿಕ ಸಂಖ್ಯೆಯಲ್ಲಿ ನಾಟಿ ಬಟಾಣಿ ಖರೀದಿಸುತ್ತಿರುವುದು ಬೆಲೆ ದ್ವಿಗುಣಕ್ಕೆ ಕಾರಣವಾಗಿದೆ.
Related Articles
Advertisement
ಆನೇಕಲ್, ರಾಮನಗರ ಮತ್ತು ಬೆಂಗಳೂರಿನ ಸುತ್ತಮುತ್ತಲಿನ ಕೆಲವು ಕಡೆಗಳಲ್ಲಿ ರೈತರು ನಾಟಿ ಬಟಾಣಿ ಬೆಳೆಯುತ್ತಾರೆ. ಈ ಹಿಂದೆ ಕೆ.ಆರ್. ಮಾರುಕಟ್ಟೆಗೆ 40ರಿಂದ 50 ಕ್ವಿಂಟಲ್ ನಾಟಿ ಬಟಾಣಿ ಪೂರೈಕೆ ಆಗುತ್ತಿತ್ತು. ಆದರೆ ಈಗ ಪ್ರತಿ ದಿನ 5 ರಿಂದ 10 ಕ್ವಿಂಟಲ್ ಬಟಾಣಿ ಪೂರೈಕೆ ಆಗುತ್ತಿದೆ ಎಂದು ಹೋಲ್ ಸೇಲ್ ವ್ಯಾಪಾರಸ್ಥರು ಹೇಳುತ್ತಾರೆ.
ಇತ್ತೀಚೆಗೆ ಸುರಿದ ಅಕಾಲಿಕ ಮಳೆ ಹಿನ್ನೆಲೆಯಲ್ಲಿ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಅದೇ ರೀತಿಯ ಬಟಾಣಿ ಬೆಳೆಗೂ ಆಗಿದೆ. ಮಳೆ ಹೀಗೆ ಸುರಿಯುತ್ತಿದ್ದರೆ ತೋಟಗಾರಿಕೆ ಬೆಳೆಗಳಿಗೆ ಮತ್ತಷ್ಟು ಹಾನಿ ಗೊಳಗಾಗುವ ಸಾಧ್ಯತೆ ಇದ್ದು ಬೆಲೆ ಹೆಚ್ಚಳವಾಗುವ ನಿರೀಕ್ಷೆಯಿದೆ ಎನ್ನುತ್ತಾರೆ.
ಇದನ್ನೂ ಓದಿ:ಜೆಡಿಎಸ್ ಗೆ ಅಡ್ಡ ಮತದಾನದ ಗುನ್ನ: ಬಿಜೆಪಿ ಗೆಲ್ಲಿಸುವುದಕ್ಕೆ ಅಭಿನಂದನೆಗಳು ಎಂದ ಎಚ್ ಡಿಕೆ
ಮಧ್ಯಪ್ರದೇಶದಿಂದ ವಿಮಾನದಲ್ಲಿ ಬಟಾಣಿ ಪೂರೈಕೆ
ನಾಟಿ ಬಟಾಣಿಗೆ ಬೇಡಿಕೆ ಬಂದಿದೆ. ಪೂರೈಕೆಗಿಂತ ಬೇಡಿಕೆ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಲೆಯಲ್ಲಿ ದುಪ್ಪಟ್ಟಾಗಿದೆ. ಇದೀಗ ಶುಭ ಕಾರ್ಯಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಟಾಣಿ ಮಾರುಕಟ್ಟೆಗೆ ಪೂರೈಕೆ ಆಗುತ್ತಿದ್ದ ಹಾಗೆ ಕ್ಷಣ ಮಾತ್ರದಲ್ಲಿ ಮಾರಾಟವಾಗುತ್ತದೆ. ಮಧ್ಯಪ್ರದೇಶದಿಂದಲೂ ದಪ್ಪ ಬಟಾಣಿ ವಿಮಾನದ ಮೂಲಕ ಬೆಂಗಳೂರಿಗೆ ಪೂರೈಕೆ ಆಗುತ್ತಿದೆ ಎಂದು ಕಲಾಸಿಪಾಳ್ಯ ತರಕಾರಿ ಸಗಟು ಮಾರಾಟಗಾರರ ಸಂಘದ ಅಧ್ಯಕ್ಷ ಆರ್.ವಿ.ಗೋಪಿ ತಿಳಿಸಿದ್ದಾರೆ.
ಶತಕದ ಗಡಿದಾಟಿದ್ದ ಟೊಮೆಟೋ ಸೇರಿದಂತೆ ತರಕಾರಿ ಬೆಲೆ ಇಳಿಕೆ
ಶತಕದ ಗಡಿದಾಟಿದ್ದ ಟೊಮೆಟೋ ಬೆಲೆ ಇದೀಗ ಇಳಿಕೆ ಹಾದಿ ಹಿಡಿದಿದೆ. ಇದರ ಜತೆಗೆ ಬೀನ್ಸ್, ಕ್ಯಾರೆಟ್ ಸೇರಿದಂತೆ ಇನ್ನಿತರ ತರಕಾರಿ ಬೆಲೆಗಳಲ್ಲಿ ಇಳಿಕೆ ಕಂಡು ಬಂದಿದೆ. ಪ್ರತಿ ಕೆ.ಜಿಗೆ 120 ರೂ. ವರೆಗೂ ತಲುಪಿದ್ದ ಟೊಮೆಟೋ ಇದೀಗ 45 ರೂ. ಹೋಲ್‌ಸೇಲ್ ದರದಲ್ಲಿ ಮಾರಾಟವಾಗುತ್ತಿದೆ. ಮಹಾರಾಷ್ಟ್ರದಿಂದ ಟೊಮೆಟೋ ಪೂರೈಕೆ ಆಗುತ್ತಿದೆ. ಜತೆಗೆ ಕೋಲಾರ ಸೇರಿದಂತೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗ ಳಿಂದಲೂ ಟೊಮೆಟೋ ಪೂರೈಕೆ ಆಗುತ್ತಿದ್ದು ಬೆಲೆ ಇಳಿಕೆಗೆ ಕಾರಣವಾಗಿದೆ ಎಂದು ಕಲಾಸಿಪಾಳ್ಯದ ಹೋಲ್ ಸೇಲ್ ವ್ಯಾಪಾರಿ ರವಿರಾಜ್ ಹೇಳುತ್ತಾರೆ.
–ದೇವೇಶ ಸೂರಗುಪ್ಪ