Advertisement

ರೈಲು ಅಪಘಾತದಲ್ಲಿ ಇಳಿಕೆ: ಈ ಯಶಸ್ಸಿಗೆ ಕಾರಣವೇನು?

10:01 AM Dec 06, 2019 | Team Udayavani |

ಹೊಸದಿಲ್ಲಿ: ಗಣನೀಯವಾಗಿದ್ದ ರೈಲು ಅಪಘಾತ ಇದೇ ಮೊದಲ ಬಾರಿಗೆ ಈ ವರ್ಷದಲ್ಲಿ ಇಳಿಕೆಯಾಗಿದೆ. ಇದಕ್ಕೆ ಕಾರಣವಾಗಿರುವುದು ರೈಲ್ವೇ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಿರುವುದು. ಕಳೆದೊಂದು ವರ್ಷದಲ್ಲಿ ಅಪಘಾತದ ಪ್ರಮಾಣ ಇಳಿಕೆ ಕಂಡಿರುವುದು ಗೋಚರಿಸಿದೆ. ಇದನ್ನು ಕೇಂದ್ರ ರೈಲ್ವೇ ಸಚಿವ ಪೀಯೂಶ್‌ ಗೋಯೆಲ್‌ ಅವರು ಲೋಕಸಭೆಗೆ ಲಿಖೀತ ಉತ್ತರದಲ್ಲಿ ತಿಳಿಸಿದ್ದಾರೆ.

Advertisement

ಅವರ ಪ್ರಕಾರ, 2018-19ರ ಅವಧಿಯಲ್ಲಿ 59 ರೈಲು ಅಪಘಾತಗಳು ವರದಿಯಾಗಿವೆ. ಇವುಗಳಲ್ಲಿ 46 ಹಳಿ ತಪ್ಪಿದ ಪ್ರಕರಣಗಳು ನಡೆದಿವೆ. ಮಾನವ ಸಹಿತ ಲೆವೆಲ್‌ ಕ್ರಾಸಿಂಗ್‌ನಲ್ಲಿ 3, ಮಾನವ ರಹಿತ ಲೆವೆಲ್‌ ಕ್ರಾಸಿಂಗ್‌ನಲ್ಲಿ 3, 6 ಬೆಂಕಿ ಅವಘಡಗಳು, 1 ಇತರ ಅವಘಡ ಸಂಭವಿಸಿದೆ.

ಅಪಘಾತಗಳು ಗಣನೀಯವಾಗಿ ಇಳಿಕೆಯಾಗಲು ಕಾರಣ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯನ್ನು ರೈಲ್ವೇ ಅಳವಡಿಸಿಕೊಂಡಿರುವುದಾಗಿದೆ. ರೈಲು ಸುರಕ್ಷತೆ ಎಚ್ಚರಿಕೆ ವ್ಯವಸ್ಥೆ, ಆಕ್ಸಿಲರಿ ಎಚ್ಚರಿಕೆ ವ್ಯವಸ್ಥೆ, ವಿಜಿಲೆನ್ಸ್‌ ಕಂಟ್ರೋಲ್‌ ಯಂತ್ರ, ಜಿಪಿಎಸ್‌ ಟ್ರ್ಯಾಕರ್‌ಗಳು ಇತ್ಯಾದಿಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ರಾಷ್ಟ್ರೀಯ ರೈಲ್‌ ಸಂರಕ್ಷ ಕೋಶ್‌ 2017-18ರ ಅವಧಿಯಲ್ಲಿ ಸ್ಥಾಪಿಸಲಾಗಿದ್ದು, ಈ ಮೂಲಕ ಮುಂದಿನ 5 ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ವೆಚ್ಚದಲ್ಲಿ ರೈಲ್ವೇ ಸುರಕ್ಷತೆಗೆ ಬೇಕಾದ ವ್ಯವಸ್ಥೆಗಳನ್ನು ಸುಧಾರಣೆ ಮಾಡಲು ಉದ್ದೇಶಿಸಲಾಗಿದೆ. ಇದರೊಂದಿಗೆ ಇತರ ಹಲವು ಯೋಜನೆಗಳನ್ನು ರೈಲ್ವೇ ಕೈಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next