Advertisement

ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಕಾಳಧನ ಪ್ರಮಾಣ ಇಳಿಕೆ

11:34 AM Jun 29, 2019 | Team Udayavani |

ಹೊಸದಿಲ್ಲಿ /ಜ್ಯೂರಿಚ್‌: ಕೇಂದ್ರ ಸರಕಾರ ಸ್ವಿಸ್‌ ಬ್ಯಾಂಕ್‌ನಲ್ಲಿ ಇರುವ ಕಪ್ಪುಹಣವನ್ನು ಭಾರತಕ್ಕೆ ತರಲು ಪ್ರಯತ್ನ ನಡೆಸುತ್ತಿರುವಂತೆಯೇ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ಬರೋಬ್ಬರಿ ಎರಡು ದಶಕಗಳಿಗೆ ಹೋಲಿಕೆ ಮಾಡಿದರೆ ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರು ಇರಿಸಿದ್ದ ಕಾಳಧನದ ಪ್ರಮಾಣ 2018ರಲ್ಲಿ ಶೇ.6ರಷ್ಟು ಅಂದರೆ 6,757 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ. ಸ್ವಿಜರ್ಲೆಂಡ್‌ನ‌ ರಾಷ್ಟ್ರೀಯ ಬ್ಯಾಂಕ್‌ ಗುರುವಾರ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ಈ ಅಂಶ ಉಲ್ಲೇಖವಾಗಿದೆ. 2006ರ ಕೊನೆಯಲ್ಲಿ ಭಾರತೀಯರ ಠೇವಣಿ 23 ಸಾವಿರ ಕೋಟಿ ರೂ. ಇತ್ತು. ಆ ಮೊತ್ತ ಒಂದು ದಶಕದ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಇಷ್ಟು ಮಾತ್ರವಲ್ಲ ಇತರ ವಿದೇಶಿ ರಾಷ್ಟ್ರಗಳಿಂದ ಸಂಗ್ರಹವಾಗುವ ಮೊತ್ತದ ಪ್ರಮಾಣವೂ ಶೇ.4ರಷ್ಟು ಅಂದರೆ 99 ಲಕ್ಷ ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ. ಬ್ಯಾಂಕ್‌ ಫಾರ್‌ ಇಂಟರ್‌ನ್ಯಾಷನಲ್‌ ಸೆಟಲ್‌ಮೆಂಟ್‌ (ಬಿಐಎಸ್‌)ನ ಮಾಹಿತಿ ಪ್ರಕಾರ 2018ರಲ್ಲಿ ಭಾರತದ ಮೂಲದವರು ಸ್ವಿಸ್‌ ಬ್ಯಾಂಕ್‌ನಲ್ಲಿ ಇರಿಸಿದ ಠೇವಣಿ ಪ್ರಮಾಣ ಶೇ.11ರಷ್ಟು ತಗ್ಗಿದೆ.
ಭಾರತೀಯ ಮೂಲದವರು ಹೂಡಿಕೆ ಮಾಡಿದ ಎಲ್ಲ ರೀತಿಯ ಮೊತ್ತವನ್ನು ಪರಿಗಣಿಸಲಾಗಿದೆ. ವ್ಯಕ್ತಿಗಳಿಂದ, ಬ್ಯಾಂಕ್‌ಗಳಿಂದ ಮತ್ತು ಸಂಸ್ಥೆಗಳು ಇರಿಸಿದ ಠೇವಣಿಯನ್ನು ಪರಿಗಣಿಸಲಾಗಿದೆ. 2018ರ ಅಂತ್ಯಕ್ಕೆ ಸ್ವಿಜರ್ಲೆಂಡ್‌ನ‌ಲ್ಲಿ 248 ಬ್ಯಾಂಕ್‌ಗಳು ಇದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next