Advertisement

ಶರಿಯಾ ಕೋರ್ಟ್‌ ಅಸಾಂವಿಧಾನಿಕ: ಅರ್ಜಿ

01:12 PM Sep 03, 2018 | Team Udayavani |

ನವದೆಹಲಿ: ಶರಿಯಾ ಕೋರ್ಟ್‌ ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಉತ್ತರಪ್ರದೇಶದ ಮುಸ್ಲಿಂ ಮಹಿಳೆಯೊಬ್ಬರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ. ಅಲ್ಲದೆ, ಒಂದೇ ಬಾರಿಗೆ ತ್ರಿವಳಿ ತಲಾಖ್‌ ನೀಡುವ ಪದ್ಧತಿಯನ್ನು “ಕ್ರೌರ್ಯ’ ಎಂದೂ, ನಿಕಾಹ್‌ ಹಲಾಲಾ, ನಿಕಾಹ್‌ ಮುತಾಹ್‌ ಮತ್ತು ನಿಕಾಹ್‌ ಮಿಸ್ಯಾರ್‌ನಂಥ ಪದ್ಧತಿಗಳನ್ನು “ಅತ್ಯಾಚಾರ’ ಎಂದು ಘೋಷಿಸುವಂತೆಯೂ 21 ವರ್ಷದ ಝಿಕ್ರಾ ಮನವಿ ಮಾಡಿದ್ದಾರೆ. ಅರ್ಜಿಯ ವಿಚಾರಣೆಗೆ ಒಪ್ಪಿರುವ ಸಿಜೆಐ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ, ಈಗಾಗಲೇ ಬಹುಪತ್ನಿತ್ವ, ನಿಕಾಹ್‌ ಹಲಾಲಾಗೆ ಸಂಬಂಧಿಸಿ ಹಲವು ಅರ್ಜಿಗಳು ಸಲ್ಲಿಕೆ ಯಾಗಿದ್ದು, ಅದರಲ್ಲೇ ಇದನ್ನೂ ಸೇರಿಸುವಂತೆ ಸೂಚಿಸಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next